ಹೈದರಾಬಾದ್: ರಾಷ್ಟ್ರಪತಿ ದ್ರೌಪದಿ ಮುರ್ಮ ಅವರ ಕುಟುಂಬ ಸದಸ್ಯರು ಗುರುವಾರ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡಿದರು. ಫಿಲ್ಮ್ ಸಿಟಿಯಲ್ಲಿನ ಪ್ರಿನ್ಸ್ ಸ್ಟ್ರಿಟ್, ಯುರೇಕಾ ಪ್ರದೇಶ, ಬಾಹುಬಲಿ ಸಿನಿಮಾ ಶೂಟಿಂಗ್ ನಡೆದ ಮಹಿಷ್ಮತಿ ಸಾಮ್ರಾಜ್ಯ, ಬರ್ಡ್ ಪಾರ್ಕ್, ಭಗವತಮ್ ಸೆಟ್, ಏರ್ ಪೋರ್ಟ್ ಮುಂತಾದ ಪ್ರದೇಶಗಳಿಗೆ ಅವರು ಭೇಟಿ ನೀಡಿದರು. ವಿವಿಧ ಮನೋರಂಜನಾ ಸ್ಥಳಗಳಿಗೆ ಭೇಟಿ ನೀಡುವ ಜೊತೆಗೆ ಅವರು ಮೂವಿ ಮ್ಯಾಜಿಕ್, ಸ್ಪೇಸ್ ಯಾತ್ರಾ, ಫಿಲ್ಮ್ದುನಿಯಾ ಮತ್ತು ಸ್ಪಿರಿಟ್ ಆಫ್ ರಾಮೋಜಿ ಶೋಗಳ ಅನುಭವವನ್ನು ಪಡೆದರು.
ರಾಷ್ಟ್ರಪತಿಗಳ ಅಳಿಯ ಗಣೇಶ್ ಚಂದ್ರ ಹೆಂಬ್ರಾಮ್, ಕುಟುಂಬ ಸದಸ್ಯರು ಮತ್ತು ರಾಷ್ಟ್ರಪತಿಗಳ ಮೊಮ್ಮಕ್ಕಳು, ಅನೇಕ ಸ್ಥಳಗಳಲ್ಲಿ ಫೋಟೋಗಳನ್ನು ಪಡೆದರು. ಇನ್ನು ಇವರ ಜೊತೆ ಸಂಪರ್ಕ ಅಧಿಕಾರಿ ರಚನಾ ಮತ್ತು ಇತರ ಅಧಿಕಾರಿಗಳ ತಂಡವೂ ಇತ್ತು.
ಈ ಭೇಟಿ ಕುರಿತು ಮಾತನಾಡಿದ ರಾಷ್ಟ್ರಪತಿಗಳ ಅಳಿಯ, ಪ್ರತಿಯೊಬ್ಬರು ಮತ್ತೆ ಮತ್ತೆ ಭೇಟಿ ನೀಡಬೇಕೆಂದೆನಿಸುವ ಸ್ಥಳ ಇದು. ಇದು ತುಂಬ ಅದ್ಬುತವಾಗಿದೆ. ಪ್ರತಿ ವರ್ಷ ನಾನು ಬರಬೇಕು ಎಂದು ಕೊಂಡಿದ್ದೇನೆ ಎಂದರು. ಫಿಲ್ಮ್ ಸಿಟಿಯ ಎಲ್ಲ ಮನೋರಂಜನಾ ಕಾರ್ಯಕ್ರಮ ಮತ್ತು ಸ್ಥಳಗಳು ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಗೆ ಮತ್ತೊಂದು ಗರಿ.. ತೆಲಂಗಾಣದ ಪ್ರವಾಸೋದ್ಯಮ ಪ್ರಶಸ್ತಿಗೆ ಭಾಜನ