ETV Bharat / bharat

ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾದ ರಾಷ್ಟ್ರಪತಿ ರಾಮನಾಥ್​ ಕೋವಿಂದ್..

author img

By

Published : Aug 19, 2021, 4:03 PM IST

ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

President Ram Nath Kovind
ರಾಷ್ಟ್ರಪತಿ ರಾಮ್​​ ನಾಥ್​ ಕೋವಿಂದ್

ನವದೆಹಲಿ: ಈ ಮೊದಲು ಬೈಪಾಸ್​ ಸರ್ಜರಿಗೊಳಗಾಗಿದ್ದ ರಾಷ್ಟ್ರಪತಿ ರಾಮ್​​ ನಾಥ್​ ಕೋವಿಂದ್ (75) ಅವರು ಇದೀಗ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

"ರಾಷ್ಟ್ರಪತಿ ರಾಮ​ನಾಥ್​ ಕೋವಿಂದ್ ಇಂದು (ಗುರುವಾರ) ಬೆಳಗ್ಗೆ ನವದೆಹಲಿಯ ಆರ್​ಆರ್​ ಸೇನಾ ಆಸ್ಪತ್ರೆಯಲ್ಲಿ (ರೆಫರಲ್ ಮತ್ತು ಸಂಶೋಧನಾ ಆಸ್ಪತ್ರೆ) ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದರು. ಸರ್ಜರಿ ಯಶಸ್ವಿಯಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ" ಎಂದು ರಾಷ್ಟ್ರಪತಿ ಭವನ ಹೇಳಿಕೆ ನೀಡಿದೆ.

ಇದನ್ನೂ ಓದಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್‌‌ಗೆ ಯಶಸ್ವಿ ಬೈಪಾಸ್‌ ಸರ್ಜರಿ

ಕಳೆದ ಮಾರ್ಚ್ 26 ರಂದು ಎದೆ ನೋವು ಕಾಣಿಸಿಕೊಂಡಿದ್ದ ಕಾರಣ ಕೋವಿಂದ್​ ಅವರನ್ನು ಆರ್​ಆರ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್​ಗೆ ಸ್ಥಳಾಂತರಿಸಿ ಮಾ.30ರಂದು ಅವರಿಗೆ ಯಶಸ್ವಿಯಾಗಿ ಬೈಪಾಸ್​ ಸರ್ಜರಿ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.