ETV Bharat / bharat

'ನನಗೆ ಪ್ರಾಥಮಿಕ ಶಿಕ್ಷಣ ಪಡೆಯುವುದೇ ದೊಡ್ಡ ಕನಸಾಗಿತ್ತು..' ದ್ರೌಪದಿ ಭಾಷಣದ 10 ಪ್ರಮುಖ ಅಂಶಗಳು - Draupadi Murmus speech

ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರು ಇಂದು ದೇಶದ ಅತ್ಯುನ್ನತ ಸಾಂವಿಧಾನಿಕ ಸ್ಥಾನ ಅಲಂಕರಿಸಿದ್ದಾರೆ. ಅವರ ಭಾಷಣದಲ್ಲಿ ಪ್ರಜಾಪ್ರಭುತ್ವದ ಶಕ್ತಿ, ಭವಿತವ್ಯದ ಅಂಶಗಳು ಅಡಗಿದ್ದವು.

president-droupadi-murmu
ರಾಷ್ಟ್ರಪತಿ ದ್ರೌಪದಿ ಮುರ್ಮು
author img

By

Published : Jul 25, 2022, 1:00 PM IST

ನವದೆಹಲಿ: ಸಂಸತ್ತು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಬುಡಕಟ್ಟು ಸಮುದಾಯ ಮಹಿಳೆಯಾದ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿದರು. ಸಂಸತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಜೆಐ ಎನ್.​ವಿ.ರಮಣ ಅವರಿಂದ ಪ್ರಮಾಣ ವಚನ ಪಡೆದ ಬಳಿಕ ಮಾತನಾಡಿದ ನೂತನ ರಾಷ್ಟ್ರಪತಿಗಳು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದರು.

  1. ಭಾರತದ ಪ್ರತಿ ಬಡವರೂ ಕನಸು ಕಾಣಬಹುದು. ಅವುಗಳನ್ನು ನನಸು ಮಾಡಿಕೊಳ್ಳಬಹುದು ಎಂಬುದಕ್ಕೆ ನನ್ನ ಆಯ್ಕೆಯೇ ಸಾಕ್ಷಿಯಾಗಿದೆ.
  2. ನನಗೆ ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದೇ ದೊಡ್ಡ ಕನಸಾಗಿತ್ತು. ಆದರೆ, ನಾನಿಂದು ದೇಶದ ರಾಷ್ಟ್ರಪತಿಯಾಗಿದ್ದೇನೆ.
  3. ಯುವಕರಿಗೆ ಹೇಳುವುದೇನೆಂದರೆ, ಕೇವಲ ಭವಿಷ್ಯದತ್ತ ಮಾತ್ರ ಗಮನಹರಿಸಬೇಡಿ. ದೇಶದ ಭವಿತವ್ಯದ ಅಡಿಪಾಯವನ್ನು ಹಾಕಿ. ರಾಷ್ಟ್ರಪತಿಯಾಗಿ ನಾನು ನಿಮಗೆ ಸಂಪೂರ್ಣ ಬೆಂಗಾವಲಾಗಿರುವೆ.
  4. ನಾನು ಬಡತನದ ಅಂಚಿನಲ್ಲಿರುವವರ ಸಮುದಾಯದ ಕಲ್ಯಾಣಕ್ಕೆ ಒತ್ತು ನೀಡುತ್ತೇನೆ. ಕಾರಣ ನಾನು ಅವರ ಕಷ್ಟವನ್ನು ನಿಜವಾಗಿಯೂ ಕಂಡಿದ್ದೇನೆ. ಅನುಭವಿಸಿದ್ದೇನೆ.
  5. ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಶಕೆ ಆರಂಭಿಸಿದೆ. ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಇದು ದೇಶದ ಶಕ್ತಿಯಾಗಿದೆ.
  6. ರಾಷ್ಟ್ರಪತಿ ಹುದ್ದೆಯನ್ನು ತಲುಪಿರುವುದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆಯಾಗಿದೆ.
  7. ಬಡವರ ಮನೆಯ, ಬುಡಕಟ್ಟು ಪ್ರದೇಶದಲ್ಲಿ ಜನಿಸಿದ ಹೆಣ್ಣು ಮಗಳು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವುದು ದೇಶದ ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸುತ್ತದೆ.
  8. ದೇಶ ಅಮೃತ ಮಹೋತ್ಸವದಂತಹ ನಿರ್ಣಾಯಕ ವೇಳೆಯಲ್ಲಿ ನನ್ನನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿರುವುದು ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ.
  9. ದೇಶ 50ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದಾಗ ನನ್ನ ರಾಜಕೀಯ ಜೀವನ ಆರಂಭಿಸಿದ್ದೆ. 75 ನೇ ವರ್ಷದಲ್ಲಿ ನಾನು ರಾಷ್ಟ್ರಪತಿಯಾಗಿದ್ದೇನೆ. ಇದು ಕಾಕತಾಳೀಯವಾದರೂ, ಹೊಸ ಜವಾಬ್ದಾರಿಯಾಗಿದೆ.
  10. ಬುಡಕಟ್ಟು ಪ್ರದೇಶದ ನನಗೆ ಶಿಕ್ಷಣ ಪಡೆಯುವುದೇ ಕನಸಾಗಿತ್ತು. ಎಲ್ಲ ಅಡೆತಡೆಗಳನ್ನು ಮೀರಿ ದೃಢ ಸಂಕಲ್ಪದಿಂದ ಉನ್ನತ ಶಿಕ್ಷಣ ಪೂರೈಸಿದ ನನ್ನ ಹಳ್ಳಿಯ ಮೊದಲ ಹೆಣ್ಣುಮಗಳಾಗಿದ್ದೆ. ವಾರ್ಡ ಸದಸ್ಯೆಯಿಂದ ಭಾರತದ ರಾಷ್ಟ್ರಾಧ್ಯಕ್ಷೆಯಾಗುವ ಅವಕಾಶ ಸಿಕ್ಕಿರುವುದು ಭಾರತದ ಹಿರಿಮೆಯಾಗಿದೆ.

ಓದಿ: ಭಾರತದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.