ಭುವನೇಶ್ವರ(ಒಡಿಶಾ): ಅಡುಗೆ ಎಣ್ಣೆಯ ಪ್ರಚಾರಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ಕಂಪನಿಯೊಂದು ಬಳಸಿದೆ. ಈ ಘಟನೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ವಕೀಲೆಯೊಬ್ಬರು ಎಣ್ಣೆ ಕಂಪನಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಲ್ಲಿನ ಕರಂಜಿಯಾ ಪ್ರದೇಶದಲ್ಲಿ ರಾಣಿ ಸೋರಿಜ್ ಸಾಸಿವೆ ಎಣ್ಣೆ ಕಂಪನಿಯ ಬ್ಯಾನರ್ನಲ್ಲಿ ರಾಷ್ಟ್ರಪತಿಗಳ ಭಾವಚಿತ್ರ ಬಳಸಿ, ರಸ್ತೆ ಮಾರ್ಗಗಳ ಬದಿ ದೊಡ್ಡದಾಗಿ ಅಂಟಿಸಲಾಗಿದೆ. ಇದನ್ನು ಕಂಡ ಸ್ಥಳೀಯರು ಕಂಪನಿಯು ತನ್ನ ಅಡುಗೆ ಎಣ್ಣೆ ಪ್ರಚಾರಕ್ಕಾಗಿ ಇಂತಹ ಬ್ಯಾನರ್ ಅಳವಡಿಸಿದೆ. ಈ ಮೂಲಕ ರಾಷ್ಟ್ರಪತಿ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿದ್ದ ವಕೀಲೆ, ಕರಂಜಿಯಾ ಪೊಲೀಸರಿಗೆ ದೂರು ನೀಡಿದ್ದಾರೆ. ರಾಷ್ಟ್ರಪತಿಗಳ ಫೋಟೋ ಬಳಸಲು ಯಾರ ಅನುಮತಿ ಪಡೆಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಬೇಕು. ಅನುಮತಿ ಪಡೆಯದೇ ಭಾವಚಿತ್ರ ಬಳಸಿದ್ದರೆ ಕಂಪನಿ ಮತ್ತು ವಿತರಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹಿಮಾಚಲ ವಿಧಾನಸಭಾ ಚುನಾವಣೆ: ಒಬ್ಬರೇ ಒಬ್ಬ ಮಹಿಳಾ ಅಭ್ಯರ್ಥಿಗೆ ವಿಜಯ ಪ್ರಾಪ್ತಿ!