ETV Bharat / bharat

ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು - ತಿರುಪತಿಯ ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ

ನೌಕಾಪಡೆಯ ದಿನದ ಸಲುವಾಗಿ ವಿಶಾಖಪಟ್ಟಣದಲ್ಲಿ ನಡೆಯುವ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಪ್ರದರ್ಶನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವೀಕ್ಷಿಸಲಿದ್ದಾರೆ.

President Draupadi Murmu
ರಾಷ್ಟ್ರಪತಿ ದ್ರೌಪದಿ ಮುರ್ಮು
author img

By

Published : Dec 4, 2022, 1:45 PM IST

ನವ ದೆಹಲಿ: ಡಿಸೆಂಬರ್ 4 ಮತ್ತು 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಆದಿತ್ಯವಾರದಂದು ರಾಜ್ಯ ಸರ್ಕಾರ ಗೌರವಾರ್ಥವಾಗಿ ಅವರಿಗೆ ಸ್ವಾಗತ ಸಮಾರಂಭ ಆಯೋಜಿಸಿದ್ದು ರಾಷ್ಟ್ರಪತಿಗಳು ಅದರಲ್ಲಿ ಭಾಗವಹಿಸಲಿದ್ದಾರೆ.

ಇಂದು ಸಂಜೆ ನೌಕಾಪಡೆಯ ದಿನದ ಸಲುವಾಗಿ ವಿಶಾಖಪಟ್ಟಣದಲ್ಲಿ ನಡೆಯುವ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಪ್ರದರ್ಶನ ವೀಕ್ಷಿಸಲಿದ್ದಾರೆ. ಜೊತೆಗೆ ರಸ್ತೆ ಸಾರಿಗೆ, ಹೆದ್ದಾರಿಗಳು, ಬುಡಕಟ್ಟು ವ್ಯವಹಾರಗಳು, ಮತ್ತು ರಕ್ಷಣಾ ಸಚಿವಾಲಯಗಳ ಯೋಜನೆಗಳನ್ನು ಅವರು ಉದ್ಘಾಟಿಸುವರು.

ಡಿಸೆಂಬರ್​ 5 ರಂದು ರಾಷ್ಟ್ರಪತಿಯವರು ತಿರುಪತಿಯ ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದು, ಅಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಮಹಿಳಾ ಸಾಧಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:ಭಾರತೀಯ ನೌಕಾ ದಿನ: ಹುತಾತ್ಮರಿಗೆ ಗೌರವ ನಮನ, ಶುಭ ಕೋರಿದ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.