ETV Bharat / bharat

ಅಯೋಧ್ಯೆ ದೀಪೋತ್ಸವಕ್ಕೆ ಕ್ಷಣಗಣನೆ.. ಗಿನ್ನೆಸ್​ ದಾಖಲೆಗೆ ಸಜ್ಜಾಗಿದೆ ರಾಮ ಜನ್ಮಭೂಮಿ!! - ಅಯೋಧ್ಯೆ ಸುದ್ದಿ,

ರಾಮ ಜನ್ಮಭೂಮಿ ಪೂಜೆ ಬಳಿಕ ನಡೆಯುತ್ತಿರುವ ಮೊದಲ ದೊಡ್ಡ ಕಾರ್ಯಕ್ರಮ ಇದಾಗಿದೆ. ಅಯೋಧ್ಯೆಯಲ್ಲಿ ಅ.26 ಅಕ್ಟೋಬರ್ 2019 ರಂದು ನಡೆದ ದೀಪೋತ್ಸವವು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ. ಈ ಬಾರಿಯೂ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ ಸೇರುವ ನಿರೀಕ್ಷೆ ಇದೆ..

ayodhya latest news  ayodhya hindi news  ayodhya news  ayodhya diwali special  preparation of diwali in ayodhya  ಅಯೋಧ್ಯೆದಲ್ಲಿ ದೀಪೋತ್ಸವ,  ಅಯೋಧ್ಯೆದಲ್ಲಿ ದೀಪೋತ್ಸವಕ್ಕೆ ಸಕಲ ಸಿದ್ಧತೆ  ಅಯೋಧ್ಯೆ ಸುದ್ದಿ,
ಗಿನ್ನೆಸ್​ ದಾಖಲೆಗೆ ಸಜ್ಜಾಗಿದೆ ರಾಮ ಜನ್ಮಭೂಮಿ
author img

By

Published : Nov 13, 2020, 1:17 PM IST

ಅಯೋಧ್ಯೆ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಬಹಳ ಅದ್ದೂರಿಯಾಗಿಯೇ ದೀಪೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ.

ಅಯೋಧ್ಯೆಯಲ್ಲಿ ನಡೆಯುವ ದೀಪಾವಳಿ ಸಂಭ್ರಮವನ್ನು ನೋಡುವುದೇ ಒಂದು ಖುಷಿ. ರಾಮ ಜನ್ಮಭೂಮಿಯ ಸರಯೂ ನದಿ ತಟದಲ್ಲಿ ಈ ಬಾರಿಯ ದೀಪಾವಳಿಗೆ 5 ಲಕ್ಷ 51 ಸಾವಿರ ಮಣ್ಣಿನ ದೀಪಗಳನ್ನ ಬೆಳಗಿಸುವ ಮೂಲಕ ಹೊಸ ಇತಿಹಾಸವನ್ನು ರಚಿಸಲಾಗುತ್ತಿದೆ.

ಅಯೋಧ್ಯೆ ನಗರದಲ್ಲಿ ಕಳೆದ 3 ವರ್ಷಗಳಿಂದ ಭಗವಾನ್ ರಾಮನ ಪಟ್ಟಾಭಿಷೇಕ ಮತ್ತು ದಿವ್ಯ ದೀಪೋತ್ಸವ ಕಾರ್ಯಕ್ರಮ ನಿರಂತರವಾಗಿ ಮಾಡಲಾಗುತ್ತಿದೆ. ಈ ವರ್ಷವು ನಾಲ್ಕನೇ ವರ್ಷವಾಗಿದ್ದು, ಈ ಬಾರಿ 5 ಲಕ್ಷ 51 ಸಾವಿರ ದೀಪಗಳನ್ನು ಬೆಳಗಿಸುವ ಮೂಲಕ ಮತ್ತೊಮ್ಮೆ ಹೊಸ ವಿಶ್ವ ದಾಖಲೆ ನಿರ್ಮಿಸುವ ಸಂಪೂರ್ಣ ಸಿದ್ಧತೆ ನಡೆಯುತ್ತಿದೆ.

ಸುಮಾರು 10,000ಕ್ಕೂ ಹೆಚ್ಚು ಸ್ವಯಂಸೇವಕರನ್ನು ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ. ಈ ಸಂಪೂರ್ಣ ಕಾರ್ಯಕ್ರಮ ರಾಮ್‌ನ ಪೈಡಿ ಕ್ಯಾಂಪಸ್‌ನಲ್ಲಿ ನಡೆಯಲಿದ್ದು, ಇದಕ್ಕಾಗಿ ಸಖಲ ಸಿದ್ಧತೆಗಳು ಪೂರ್ಣಗೊಂಡಿವೆ.

ಕೊರೊನಾ ಸೋಂಕಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಕೆಲ ಜನರಿಗೆ ಮಾತ್ರ ಅನುಮತಿಗೆ ಅವಕಾಶ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಿದ್ದು, ಜಿಲ್ಲಾಡಳಿತವು ಅಗತ್ಯ ಪಾಸ್‌ಗಳನ್ನು ನೀಡಿದೆ. ನವೆಂಬರ್ 11 ರ ಸಂಜೆಯಿಂದ ಅಯೋಧ್ಯೆ ಜನರಿಗೆ ಮಾತ್ರ ಪ್ರವೇಶದ ಅನುಮತಿ ನೀಡಲಾಗಿದೆ.

ಕೊರೊನಾದ ನಡುವೆಯೂ ಆಗಸ್ಟ್ 5 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಯನ್ನು ಪೂಜಿಸಲು ಅಯೋಧ್ಯೆಗೆ ಬಂದಿದ್ದರು. ಆ ಸಮಯದಲ್ಲಿ ಕೊರೊನಾ ಕಟ್ಟುನಿಟ್ಟನ್ನು ಮರೆತು ಭೂಮಿ ಪೂಜೆ ವೇಳೆ ಸಂಜೆ ರಾಮ್ನ ಪೈಡಿ ಕ್ಯಾಂಪಸ್​ನಲ್ಲಿ ಲಕ್ಷಾಂತರ ಜನರು ಸೇರಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅಯೋಧ್ಯೆಯ ಜನರನ್ನು ಈ ದೀಪೋತ್ಸವ ಕಾರ್ಯಕ್ರಮದಿಂದ ದೂರವಿಡುವುದು ರಾಜ್ಯ ಸರ್ಕಾರ ಮತ್ತು ಅಯೋಧ್ಯ ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್...

ರಾಮ ಜನ್ಮಭೂಮಿ ಪೂಜೆ ಬಳಿಕ ನಡೆಯುತ್ತಿರುವ ಮೊದಲ ದೊಡ್ಡ ಕಾರ್ಯಕ್ರಮ ಇದಾಗಿದೆ. ಅಯೋಧ್ಯೆಯಲ್ಲಿ ಅ.26 ಅಕ್ಟೋಬರ್ 2019 ರಂದು ನಡೆದ ದೀಪೋತ್ಸವವು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ. ಈ ಬಾರಿಯೂ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ ಸೇರುವ ನಿರೀಕ್ಷೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.