ಮುಜಾಫರ್ನಗರ (ಉತ್ತರ ಪ್ರದೇಶ): 30 ವರ್ಷದ ಗರ್ಭಿಣಿಯೋರ್ವಳು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದ್ದು, ಇದೊಂದು ಕೊಲೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಗಂಡನ ಮನೆಯವರು ವರದಕ್ಷಿಣೆ ವಿಚಾರವಾಗಿ ಮೇಲಿಂದ ಮೇಲೆ ಕಿರುಕುಳ ನೀಡಿದ್ದರಿಂದ ಮಹಿಳೆ ಈ ಕ್ರಮಕ್ಕೆ ಮುಂದಾಗಿದ್ದಾಳೆ ಪೊಲೀಸರು ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಲ್ಕೊಹಾಲ್ ನೀಡಿ, ಏಳು ಜನರಿಂದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ತಬಸುಮ್ ಬೇಗಂ ಬುಧಾನಾ ಪಟ್ಟಣದ ಜೊಲ್ಲಾ ಗ್ರಾಮದಲ್ಲಿ ವಾಸವಾಗಿದ್ದು, ಕಳೆದ ಒಂದು ವರ್ಷದ ಹಿಂದೆ ಅಫ್ಸರ್ ಎಂಬ ವ್ಯಕ್ತಿ ಜತೆ ವಿವಾಹವಾಗಿದ್ದರು. ಈ ಹಿಂದಿನಿಂದಲೂ ಅತ್ತೆ-ಮಾವನಿಂದ ವರದಕ್ಷಿಣೆ ವಿಚಾರವಾಗಿ ಕಿರುಕುಳಕ್ಕೊಳಗಾಗಿದ್ದಳು ಎಂದಿರುವ ಪೊಲೀಸರು ಭಾನುವಾರ ನೇಣಿಗೆ ಶರಣಾಗಿದ್ದಾಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಸಹೋದರಿ ಲುಕ್ಮನ್ ಪೊಲೀಸರಿಗೆ ದೂರು ನೀಡಿದ್ದು, ಇದು ಆತ್ಮಹತ್ಯೆಯಲ್ಲ ಆಕೆಯನ್ನ ಗಲ್ಲಿಗೇರಿಸಿರುವ ರೀತಿಯಲ್ಲಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.