ETV Bharat / bharat

ನಿಯಮ ಮೀರಿ ಪ್ರಾರ್ಥನಾ ಸಭೆ.. 100 ಮಂದಿಗೆ ಕೋವಿಡ್​, ಇಬ್ಬರು ಸಾವು

ಕೋವಿಡ್ ನಿಯಮ ಉಲ್ಲಂಘನೆ ಮಾಡಿ ನೂರಾರು ಪಾದ್ರಿಗಳು ಪ್ರಾರ್ಥನೆ ನಡೆಸಿರುವ ಪರಿಣಾಮ ಅನೇಕರಿಗೆ ಇದೀಗ ಮಹಾಮಾರಿ ತಗುಲಿರುವ ಘಟನೆ ನಡೆದಿದೆ.

CSI priests
CSI priests
author img

By

Published : May 5, 2021, 4:06 PM IST

ಇಡುಕ್ಕಿ (ಕೇರಳ): ಕೋವಿಡ್​ ಪ್ರೋಟೋಕಾಲ್​​ ಉಲ್ಲಂಘಿಸಿ ಪ್ರಾರ್ಥನಾ ಸಭೆ ನಡೆಸಿರುವ ಪರಿಣಾಮ 100ಕ್ಕೂ ಅಧಿಕ ಜನರಿಗೆ ಇದೀಗ ಕೋವಿಡ್​ ಮಹಾಮಾರಿ ತಗುಲಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 80 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇರಳದ ಇಡುಕ್ಕಿಯಲ್ಲಿ ಚರ್ಚ್​ ಆಫ್​ ಸೌತ್ ಇಂಡಿಯಾ (ಸಿಎಸ್​ಐ)ದ ಪಾದ್ರಿಗಳು ಈ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದರು. 480ಕ್ಕೂ ಹೆಚ್ಚು ಪಾದ್ರಿಗಳು ಭಾಗವಹಿಸಿದ್ದರಿಂದ ಇದೀಗ ಪ್ರಕರಣ ಸಹ ದಾಖಲು ಮಾಡಲಾಗಿದೆ. ಇದರ ನೇತೃತ್ವವನ್ನ ಬಿಷಪ್​ ಧರ್ಮರಾಜ್​​ ವಹಿಸಿದ್ದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಭಾಗಿಯಾಗಿದ್ದ ಫ್ರಾ. ಬಿಜುಮನ್​​ (52), ಶೈನ್ ಬಿ. ರಾಜ್​(43) ಕೋವಿಡ್​ಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಉದಯಿಸಿದ 'ಸೂರ್ಯ'.. ಮೇ 7ರಂದು ಸಿಎಂ ಆಗಿ ಸ್ಟಾಲಿನ್ ಪದಗ್ರಹಣ

ಕೆಲ ಪಾದ್ರಿಗಳ ವಿರೋಧ ಕಡೆಗಣಿಸಿ ಏಪ್ರಿಲ್​ 13ರಿಂದ 17ರವರೆಗೆ ಪ್ರಾರ್ಥನಾ ಸಭೆ ನಡೆಸಲಾಗಿತ್ತು ಎಂದು ಈಟಿವಿ ಭಾರತ್​ಗೆ ಮೂಲಗಳು ಮಾಹಿತಿ ನೀಡಿವೆ. ಪ್ರಮುಖವಾಗಿ ಈ ಸಭೆಯಲ್ಲಿ ಭಾಗವಹಿಸಿದ್ದ ಪಾದ್ರಿಗಳು ಮಾಸ್ಕ್​ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.