ETV Bharat / bharat

ರಾಹುಲ್​ 'ಭಾರತ್ ಜೋಡೋ' ಯಾತ್ರೆಗೆ ವಕೀಲ ಪ್ರಶಾಂತ್ ಭೂಷಣ್ ಸಾಥ್​

author img

By

Published : Nov 6, 2022, 7:19 PM IST

ತೆಲಂಗಾಣದಲ್ಲಿ ಸಾಗುತ್ತಿರುವ, ರಾಹುಲ್​ ಗಾಂಧಿ ನಡೆಸುತ್ತಿರುವ ಭಾರತ್​ ಜೋಡೋ ಯಾತ್ರೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಭೂಷಣ್​ ಭಾಗಿಯಾಗಿ ಗಮನ ಸೆಳೆದರು.

prashant-bhushan
ವಕೀಲ ಪ್ರಶಾಂತ್ ಭೂಷಣ್

ಹೈದರಾಬಾದ್: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿ ತೆಲಂಗಾಣದಲ್ಲಿ ಮುಂದುವರಿಯುತ್ತಿರುವ ಭಾರತ್​ ಜೋಡೋ ಯಾತ್ರೆಗೆ ಸಾಮಾಜಿಕ ಕಾರ್ಯಕರ್ತ, ಖ್ಯಾತ ವಕೀಲ ಪ್ರಶಾಂತ್​ ಭೂಷಣ್​ ಸಾಥ್​ ನೀಡಿದ್ದಾರೆ. ಮೇಡಕ್​ ಜಿಲ್ಲೆಯ ಅಲ್ಲದುರ್ಗದಿಂದ ಇಂದು ನಡೆದ 60 ನೇ ದಿನದ ಯಾತ್ರೆಯಲ್ಲಿ ಅವರು ಪಾಲ್ಗೊಂಡರು.

ಮೇದಕ್​ ಜಿಲ್ಲೆಯಲ್ಲಿ ಸಾಗುತ್ತಿರುವ ಯಾತ್ರೆ ಬೆಳಗ್ಗೆ ರಾಷ್ಟ್ರಗೀತೆ, ರಾಷ್ಟ್ರ ಧ್ವಜಾರೋಹಣದ ಮೂಲಕ ಆರಂಭವಾಯಿತು. ಮೇದಕ್‌ನಿಂದ ಕಾಮರೆಡ್ಡಿ ಜಿಲ್ಲೆಗೆ ಯಾತ್ರೆ ಸಾಗಲಿದೆ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಭೂಷಣ್​ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.

ಬಳಿಕ ಪೆದ್ದಾಪುರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ 2014 ರಿಂದ ನಿರುದ್ಯೋಗ ಮತ್ತು ಬೆಲೆ ಏರಿಕೆ ತೀವ್ರವಾಗಿದೆ. ಇದನ್ನು ತೊಡೆದು ಹಾಕಬೇಕಿದೆ. ಸ್ಥಳೀಯ ಸರ್ಕಾರವೂ ಕೂಡ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸಿಲ್ಲ ಎಂದು ಟಿಆರ್​ಎಸ್​ ಸರ್ಕಾರವನ್ನೂ ಟೀಕಿಸಿದರು.

ಇದನ್ನೂ ಓದಿ: ಮುನುಗೋಡು ಉಪ ಚುನಾವಣೆ: ಬಿಜೆಪಿ ವಿರುದ್ಧ ಗೆದ್ದು ಬೀಗಿದ ಟಿಆರ್​ಎಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.