ಚೆನ್ನೈ(ತಮಿಳುನಾಡು): ಏರ್‌ಥಿಂಗ್ಸ್ ಮಾಸ್ಟರ್ಸ್‌ನ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಭಾರತದ ಲಿಟ್ಲ್ ಗ್ರ್ಯಾಂಡ್‌ಮಾಸ್ಟರ್ 16 ವರ್ಷದ ಆರ್ ಪ್ರಗ್ನಾನಂದ್ ಅವರು, ವಿಶ್ವದ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ರಿಗೆ ಶಾಕ್ ನೀಡಿದ್ದಾರೆ.
ಇಂದು ನಡೆದ ಟಾರ್ರಾಸ್ಚ್ ವಿಭಾಗದ 8ನೇ ಸುತ್ತಿನಲ್ಲಿ ಭಾರತದ ಪ್ರಗ್ನಾನಂದ್ ಅವರು ಕಪ್ಪು ಕಾಯಿಗಳೊಂದಿಗೆ ಆಟವಾಡಿ ಕೇವಲ 39 ನಡೆಗಳಲ್ಲಿಯೇ ವಿಶ್ವ ಚಾಂಪಿಯನ್ ಆಟಗಾರ ಮ್ಯಾಗ್ನಸ್ ಕಾರ್ಲಸನ್ರಿಗೆ ಸೋಲಿನ ರುಚಿ ತೋರಿಸಿದರು.
ಕಾರ್ಲಸನ್ ಟೂರ್ನಿಯಲ್ಲಿ ಸತತ 3 ಗೆಲುವು ಸಾಧಿಸಿದ್ದರು, ಇದೀಗ ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಅವರ ಗೆಲುವಿನ ಓಟಕ್ಕೆ ಬ್ರೇಕ್ ನೀಡಿದ್ದಾರೆ.
-
Airthings Masters: 16-year-old Praggnanandhaa stuns World Champion Carlsen
— ANI Digital (@ani_digital) February 21, 2022 " class="align-text-top noRightClick twitterSection" data="
Read @ANI Story | https://t.co/eErz4s5NdB#AirthingsMasters pic.twitter.com/J5dEoCv4HG
">Airthings Masters: 16-year-old Praggnanandhaa stuns World Champion Carlsen
— ANI Digital (@ani_digital) February 21, 2022
Read @ANI Story | https://t.co/eErz4s5NdB#AirthingsMasters pic.twitter.com/J5dEoCv4HGAirthings Masters: 16-year-old Praggnanandhaa stuns World Champion Carlsen
— ANI Digital (@ani_digital) February 21, 2022
Read @ANI Story | https://t.co/eErz4s5NdB#AirthingsMasters pic.twitter.com/J5dEoCv4HG
ಟೂರ್ನಿಯಲ್ಲಿ ಪ್ರಗ್ನಾನಂದ್ 8 ಅಂಕ ಪಡೆಯುವುದರ ಮೂಲಕ ಜಂಟಿ 12ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಾರ್ಲಸನ್ರ ವಿರುದ್ಧ ಗೆಲುವು ಸಾಧಿಸುವ ಮೊದಲು ಒಂದು ಗೆಲುವು, 2 ಡ್ರಾ, 4 ಸೋಲು ಕಂಡಿದ್ದಾರೆ. ಇನ್ನು ಟೂರ್ನಿಯಲ್ಲಿ ರಷ್ಯಾದ ಇಯಾನ್ ನೆಪೊಮ್ನಿಯಾಚಿ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಡಿಂಗ್ ಲಿರೆನ್ ಮತ್ತು ಹ್ಯಾನ್ಸೆನ್ (ತಲಾ 15 ಅಂಕ) ನಂತರದ ಸ್ಥಾನದಲ್ಲಿದ್ದಾರೆ.
ಮೂರನೇ ಆಟಗಾರ : ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲಸನ್ ಅವರನ್ನು, ಆರ್ ಪ್ರಗ್ನಾನಂದ್ ಇಂದು ಸೋಲಿಸುವ ಮೂಲಕ ಮೂರನೇ ಭಾರತೀಯ ಎಂದೆನಿಸಿಕೊಂಡಿದ್ದಾರೆ. ಈ ಹಿಂದೆ ಭಾರತದ ನಂ.1 ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್, ಪೆಂಡ್ಯಾಲ ಹರಿಕೃಷ್ಣ ಅವರು ಮ್ಯಾಗ್ನಸ್ ವಿರುದ್ಧ ಗೆಲುವು ಸಾಧಿಸಿದ್ದರು.
ಓದಿ: ಐಸಿಸಿ ಟಿ-20 ರ್ಯಾಕಿಂಗ್ ಪಟ್ಟಿ: 6 ವರ್ಷಗಳ ಬಳಿಕ ಭಾರತಕ್ಕೆ ನಂ.1 ಸ್ಥಾನ