ಅಲ್ಲೂರಿ(ಆಂಧ್ರಪ್ರದೇಶ): ಅಲ್ಲೂರಿ ಜಿಲ್ಲೆಯ ಸೀಲೇರು ಜಲವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದಿಸಿ, ನಂತರ ಸ್ವಿಚ್‌ಯಾರ್ಡ್ ಮೂಲಕ ಇತರ ಫೀಡರ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಆದರೆ, ಶುಕ್ರವಾರ ಬೆಳಗ್ಗೆ 6 ಗಂಟೆಗೆ ಇಡೀ ಪಟ್ಟಣಕ್ಕೆ ಏಕಾಏಕಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಸ್ವಿಚ್ಯಾರ್ಡ್ನಲ್ಲಿ ಎರಡು ಮಂಗಗಳ ಕಾಟದಿಂದಾಗಿ ಸುಮಾರು 9 ಗಂಟೆಗಳ ಕಾಲ ಜಲವಿದ್ಯುತ್ ಘಟಕದ ಇಂಜಿನಿಯರ್ಗಳು ಹಾಗೂ ಸಿಬ್ಬಂದಿ ರೆಪೇರಿ ಕೆಲಸ ಕೈಗೊಂಡಿದ್ದಾರೆ.
ಏಕಾಏಕಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಅಚ್ಚರಿಗೊಂಡ ಸಿಬ್ಬಂದಿ ಸ್ವಿಚ್‌ಯಾರ್ಡ್ ಪರಿಶೀಲಿಸಿದಾಗ ಎರಡು ಮಂಗಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಮೂರು ಇನ್ಸುಲೇಟರ್ಗಳಲ್ಲಿ ಹೆಚ್ಚಿನ ವೋಲ್ಟೇಜ್ ಏಕಕಾಲದಲ್ಲಿ ಬರುವ ಪರಿಣಾಮವಾಗಿ, ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಕರಕಲಾಗಿವೆ. ಇದನ್ನು ಗುರುತಿಸಿದ ಅಧಿಕಾರಿಗಳು ವಿದ್ಯುತ್ ಪೂರೈಕೆ ಸರಿಗೊಳಿಸಲು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ.
ಸುಟ್ಟ ಇನ್ಸುಲೇಟರ್‌ಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಕಾರ್ಮಿಕರು ತ್ವರಿತವಾಗಿ ಪುನಃಸ್ಥಾಪಿಸಿದ್ದು, ರಿಪೇರಿ ಕಾರ್ಯ ಮುಗಿದಾಗ ಸಂಜೆ ಮೂರು ಗಂಟೆಯಾಗಿತ್ತು. ಹೈವೋಲ್ಟೇಜ್ ತಂತಿಗಳ ಮೇಲೆ ಬಿದ್ದ ಎರಡು ಕೋತಿಗಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿವೆ.
ಕೆಳಗಿನ ಸೀಳೇರು ಪ್ರದೇಶದ ಮೋಟುಗುಡೆಂ ಮತ್ತು ಡೊಂಕರಾಯಿ ಗ್ರಾಮಗಳ ಜನರು ಮಂಗಗಳ ಕಾಟದಿಂದ ಪರದಾಡುತ್ತಿದ್ದು, ಪಂಚಾಯತ್ ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ತಾಜ್ಮಹಲ್ನಲ್ಲಿ ಪಶ್ಚಿಮ ಬಂಗಾಳ ಪ್ರವಾಸಿಗನಿಗೆ ಕಚ್ಚಿದ ಮಂಗಗಳು