ETV Bharat / bharat

ಕೋಲ್ಕತ್ತಾದಲ್ಲಿ ದುರ್ಗಾ ಪೂಜಾ ಇಂದು ಅಂತ್ಯ: ಮತ್ತೊಂದು ಅಲೆಗೆ ಕಾರಣವಾಗುತ್ತಾ ಕೋವಿಡ್‌ ನಿಯಮ ಉಲ್ಲಂಘನೆ? - ಕೋವಿಡ್‌ ನಿಯಮ ಉಲ್ಲಂಘನೆ

ಕೋಲ್ಕತ್ತದಲ್ಲಿ ನಾಲ್ಕು ದಿನಗಳ ದುರ್ಗಾ ಪೂಜೆಗೆ ಮುಂದು ತೆರೆ ಬೀಳಲಿದ್ದು, ಹಲವೆಡೆ ಕೋವಿಡ್‌ ನಿಮಯಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಮತ್ತೊಂದು ಅಲೆಗೆ ನಗರ ಸಾಕ್ಷಿಯಾಗಲಿದೆಯೇ ಎಂಬ ಭೀತಿ ಶುರವಾಗಿದೆ.

post-Puja super spreaders in kolkata
ಕೋಲ್ಕತ್ತದಲ್ಲಿ ದುರ್ಗಾ ಪೂಜಾ ಇಂದು ಅಂತ್ಯ; ಮತ್ತೊಂದು ಅಲೆಗೆ ಕಾರಣವಾಗುತ್ತಾ ಕೋವಿಡ್‌ ನಿಯಮ ಉಲ್ಲಂಘನೆ?
author img

By

Published : Oct 15, 2021, 4:09 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ನಡೆಯುವ ನಾಲ್ಕು ದಿನಗಳ ದುರ್ಗಾ ಪೂಜೆ ಇಂದಿಗೆ ಕೊನೆಗೊಳ್ಳುತ್ತಿದ್ದು, ವಿವಿಧ ಬಗೆಯ ಹೂ, ಬಣ್ಣಗಳಿಂದ ದುರ್ಗಾ ದೇವಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಕೋವಿಡ್‌ ನಿಯಮಗಳನ್ನು ಪಾಲಿಸದೇ ಕೋಲ್ಕತ್ತಾದ ಬೀದಿಗಳಲ್ಲಿ ಜನ ಸೇರಿರುವುದು ಮತ್ತೊಂದು ಕೊರೊನಾ ಅಲೆಗೆ ಕಾರಣವಾಗುತ್ತಾ ಎಂಬ ಪ್ರಶ್ನೆಗಳು ಎದುರಾಗಿವೆ. ಮತ್ತೊಂದೆಡೆ ಕೊರೊನಾ ಪ್ರೋಟೋಕಾಲ್‌ಗಳನ್ನು ಸರಿಯಾಗಿ ನಿರ್ವಹಿಸದಿರುವ ಆರೋಪ ಆಡಳಿತಾಧಿಕಾರಿಗಳ ವಿರುದ್ಧ ಕೇಳಿ ಬಂದಿದೆ.

ಸ್ವಯಂ ಪ್ರೇರಿತವಾಗಿ ಜನರೇ ಸೋಂಕು ಹರಡದಂತೆ ನಿಯಮಗಳನ್ನು ಪಾಲಿಸಬೇಕಿದೆ. ಆದರೆ, ಪೂಜಾ ಪೆಂಡಾಲ್‌ಗಳಲ್ಲಿ ಹೆಚ್ಚಿನ ಜನ ಸೇರಿರುವುದು ಸೋಂಕಿತರು ಹೆಚ್ಚುವ ಆತಂಕಕ್ಕೆ ಕಾರಣವಾಗಿದೆ. ಮುಂದಿನ ವಾರದೊಳಗೆ ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಗೊತ್ತಾಗಲಿದೆ ಎಂದು ಕೋಲ್ಕತ್ತಾದಲ್ಲಿನ ವೈದ್ಯರು ತಿಳಿಸಿದ್ದಾರೆ.

ಸಚಿವರು ಸೇರಿದಂತೆ ರಾಜಕಾರಣಿಗಳು ಪೆಂಡಾಲ್‌ಗಳಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಲು ಪ್ರಯತ್ನಿಸುತ್ತಿರುವ ರೀತಿ ಸ್ವೀಕಾರಾರ್ಹವಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ವೈದ್ಯರೊಬ್ಬರು ಹೇಳಿದ್ದಾರೆ.

ಆಮ್ಲಜನಕ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿರುವುದುರಿಂದ ಮತ್ತೆ ಕೋವಿಡ್‌ ಪ್ರಕರಣ ಹೆಚ್ಚಾಗದರೆ ಮತ್ತೆ ಅದೇ ಸಂಕಷ್ಟಕ್ಕೆ ಇಲ್ಲಿನ ಜನರು ಸಿಲುಕುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.