ETV Bharat / bharat

ಅಜ್ಜಿಯ ಅತ್ಮಸ್ಥೈರ್ಯಕ್ಕೆ ಬೆದರಿದ ಕೊರೊನಾ : ಕೋವಿಡ್ ಮಣಿಸಿದ್ರು 102 ವರ್ಷದ ವೃದ್ಧೆ..! - ಮುಂಬೈ ಕೋವಿಡ್ ಸುದ್ದಿ

ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಮಕ್ಕಳು, ಯುವಕರು, ವೃದ್ಧರು ಎನ್ನದೇ ಎಲ್ಲ ವಯಸ್ಸಿನವರೂ ಬಲಿಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆದ್ರೆ ಈ ನಡುವೆ ಮುಂಬೈ ಮಹಾನಗರದ ಶತಾಯುಷಿ ಅಜ್ಜಿವೋರ್ವರು ಮಹಾಮಾರಿ ವಿರುದ್ಧ ಗೆದ್ದು ಅಚ್ಚರಿ ಮೂಡಿಸಿದ್ದಾರೆ.

Positivity helps centenarian woman recover from Covid
ಕೋವಿಡ್ ಗೆದ್ದ 102 ವರ್ಷದ ಅಜ್ಜಿ
author img

By

Published : May 1, 2021, 12:37 PM IST

Updated : May 1, 2021, 2:06 PM IST

ಮುಂಬೈ(ಮಹಾರಾಷ್ಟ್ರ) : ಸಕಾರಾತ್ಮಕ ಚಿಂತನೆ ಮತ್ತು ಸರಿಯಾದ ಚಿಕಿತ್ಸೆಯ ಕಾರಣದಿಂದ ಮಹಾರಾಷ್ಟ್ರದಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಶತಾಯುಷಿ ಅಜ್ಜಿವೋರ್ವರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.

102 ವರ್ಷದ ಶುಶೀಲಾ ಪಥಕ್ ಕೋವಿಡ್ ಗೆದ್ದಿರುವ ವೃದ್ಧೆ. ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಶುಶೀಲ್ ಪಥಕ್, ಚಿಕಿತ್ಸೆ ಜೊತೆ ತನ್ನ ಆತ್ಮಸ್ಥೈರ್ಯದಿಂದ ಕೋವಿಡ್ ಮುಕ್ತರಾಗಿ 15 ದಿನದೊಳಗೆ ಮನೆಗೆ ಮರಳಿದ್ದಾರೆ.

ಕೋವಿಡ್ ಗೆದ್ದ 102 ವರ್ಷದ ಅಜ್ಜಿ

ಓದಿ : ಆಮ್ಲಜನಕ ತಂದು 22 ಜನರ ಪ್ರಾಣ ಉಳಿಸಿದ ಪೊಲೀಸಪ್ಪ.. ಈ ಪೊಲೀಸ್​ ಸಮಯ ಪ್ರಜ್ಞೆಗೆ ಸೆಲ್ಯೂಟ್​

ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಪ್ರಯತ್ನ ಪಥಕ್ ಅವರ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಪಥಕ್ ಅವರು ಕೂಡ ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಉತ್ತಮವಾಗಿ ಪ್ರತಿಕ್ರಿಯಿಸಿದ್ದರು. ಅಜ್ಜಿ ಗುಣಮುಖರಾಗಿ ಮನೆಗೆ ತೆರಳುವಾಗ ಆಸ್ಪತ್ರೆ ಸಿಬ್ಬಂದಿ ಕೇಕ್​ ಕತ್ತರಿಸಿ ಸಂಭ್ರಮಿಸಿದರು.

Last Updated : May 1, 2021, 2:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.