ETV Bharat / bharat

ರಾಜ್ ಕುಂದ್ರಾ ಕಂಪನಿಯ ನಿರ್ದೇಶಕನ ಬಂಧನ - ರಾಜ್​ ಕುಂದ್ರಾ ಅವರ ಕಂಪನಿಯ ನಿರ್ದೇಶ ಬಂಧನ

ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ, ಆ್ಯಪ್​ನಲ್ಲಿ ಪ್ರಕಟಿಸುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜ್ ಕುಂದ್ರಾ ಅವರ ಕಂಪನಿ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ.

Porn case: Director of one of Kundra's firms arrested
Porn case: ರಾಜ್ ಕುಂದ್ರಾ ಕಂಪನಿಯ ನಿರ್ದೇಶಕ ಬಂಧನ
author img

By

Published : Aug 13, 2021, 9:41 AM IST

Updated : Aug 13, 2021, 12:04 PM IST

ಮುಂಬೈ: ಪೋರ್ನೋಗ್ರಫಿ(ಅಶ್ಲೀಲ ಚಿತ್ರ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ರಾಜ್​ ಕುಂದ್ರಾ ಅವರ ಕಂಪನಿಯ ನಿರ್ದೇಶಕರೊಬ್ಬರನ್ನು ಮುಂಬೈ ಪೊಲೀಸ್​ ಅಪರಾಧ ವಿಭಾಗವು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಭಿಜೀತ್​ ಬೊಂಬಲ್​ ಬಂಧಿತ ನಿರ್ದೇಶಕನಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ಅಭಿಜೀತ್ ಅವರ ಹೆಸರನ್ನು ಈ ಮೊದಲೇ ಸೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಶ್ಲೀಲ ಚಿತ್ರ ನಿರ್ಮಾಣ ಮಾಡಿ ಅವುಗಳನ್ನು ಕೆಲ ಆ್ಯಪ್​ಗಳಲ್ಲಿ ಪ್ರಕಟಿಸುತ್ತಿದ್ದ ಆರೋಪ ರಾಜ್ ಕುಂದ್ರಾ ಮೇಲಿದ್ದು, ಹಿಂದಿನ ತಿಂಗಳಷ್ಟೇ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿದ್ದು, ಆರೋಪಿಗಳ ಪಟ್ಟಿಯಲ್ಲಿದ್ದ ಅಭಿಜೀತ್ ಬೊಂಬಾಲ್ ಅವರನ್ನು ಬಂಧಿಸಲಾಗಿದೆ.

ಫೆಬ್ರವರಿ ತಿಂಗಳಲ್ಲಿ ಕುಂದ್ರಾ ವಿರುದ್ಧ ಈ ಸಂಬಂಧ ದೂರು ದಾಖಲಾಗಿತ್ತು. ಬಳಿಕ ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದ ರಾಜ್ ಕುಂದ್ರಾ, ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದರು. ಹಿಂದಿನ ತಿಂಗಳು ರಾಜ್ ಕುಂದ್ರಾರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಅಫ್ಘಾನಿಸ್ತಾನದ ಮೂರನೇ ಒಂದು ಭಾಗವೀಗ ತಾಲಿಬಾನ್ ವಶ: ಯುದ್ಧಪೀಡಿತ ದೇಶದ ಸಂಪೂರ್ಣ ಚಿತ್ರಣ ಇಲ್ಲಿದೆ..

Last Updated : Aug 13, 2021, 12:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.