ETV Bharat / bharat

ಜನಸಂಖ್ಯಾ ಸ್ಫೋಟ ಇಡೀ ದೇಶದ ಸಮಸ್ಯೆ, ಧರ್ಮದೊಂದಿಗೆ ಜೋಡಿಸುವುದು ಸಮರ್ಥನೀಯವಲ್ಲ: ಅಬ್ಬಾಸ್ ನಖ್ವಿ - ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ

ಹೆಚ್ಚುತ್ತಿರುವ ಜನಸಂಖ್ಯೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿಕೆ ನೀಡಿದ್ದಾರೆ. ಜನಸಂಖ್ಯಾ ಸ್ಫೋಟವನ್ನು ಧರ್ಮದೊಂದಿಗೆ ಜೋಡಿಸುವುದು ಸಮರ್ಥನೀಯವಲ್ಲ, ಇದು ಇಡೀ ದೇಶದ ಸಮಸ್ಯೆ. ಜೊತೆಗೆ ಇಡೀ ವ್ಯವಸ್ಥೆಗೆ ಅಪಾಯಕಾರಿ ಎಂದಿದ್ದಾರೆ.

abbas naqvi
ಅಬ್ಬಾಸ್ ನಖ್ವಿ
author img

By

Published : Jul 13, 2022, 2:05 PM IST

ನವದೆಹಲಿ: ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಜನಸಂಖ್ಯೆ ನಿಯಂತ್ರಣ ವಿರೋಧಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನಸಂಖ್ಯಾ ಸ್ಫೋಟವನ್ನು ಧರ್ಮದೊಂದಿಗೆ ಜೋಡಿಸುವುದು ಸಮರ್ಥನೀಯವಲ್ಲ, ಇದು ಇಡೀ ದೇಶದ ಸಮಸ್ಯೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಜನಸಂಖ್ಯೆ ನಿಯಂತ್ರಣವು ಯಾವುದೇ ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ, ಇದು ದೇಶದ ಸಮಸ್ಯೆ. ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಾ ಹೋದ್ರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಸಮಸ್ಯೆ ಹೋಗಲಾಡಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಮೊದಲು ಜನರ ಮನಸ್ಥಿತಿ ಬದಲಾಗಬೇಕು. ಕಾನೂನಿಗಿಂತಲೂ ಹೆಚ್ಚು ನಿರ್ಣಾಯಕ ಚಿಂತನೆಯಲ್ಲಿ ಬದಲಾವಣೆ ತರುವ ಅವಶ್ಯಕತೆಯಿದೆ ಎಂದು ಹೇಳಿದರು.

ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಕುರಿತು ಮಾತನಾಡಿದ ನಖ್ವಿ, "ಯುಸಿಸಿಗೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತದಿಂದ ಕಾನೂನು ರೂಪಿಸುವ ಅವಶ್ಯಕತೆಯಿದೆ, ಇದು ಸಾಂವಿಧಾನದ ಅಡಿ ಬರುತ್ತದೆ. ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

'ಜನಸಂಖ್ಯಾ ಸ್ಫೋಟ'ದ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಎಐಎಂಐಎಂ ಮುಖ್ಯಸ್ಥ ಓವೈಸಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ವಿಶ್ವ ಜನಸಂಖ್ಯಾ ದಿನದಂದು ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, ಜನಸಂಖ್ಯಾ ಅಸಮತೋಲನ ಉಂಟಾಗದಂತೆ ಎಚ್ಚರ ವಹಿಸಬೇಕು. ಯಾವುದೇ ವರ್ಗದ ಜನಸಂಖ್ಯೆಯ ವೇಗ ಮತ್ತು ಶೇಕಡಾವಾರು ಹೆಚ್ಚಾಗಬಾರದು. ಈ ಕುರಿತು ಸ್ಥಳೀಯರಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುವ ಮೂಲಕ ಅವರ ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದರು.

ಇದನ್ನೂ ಓದಿ: ಅಭಿವೃದ್ಧಿಯ ಅಲೆ ಅರಾಜಕತೆಯ ಪಿತೂರಿಯಿಂದ ನಿಲ್ಲುವುದಿಲ್ಲ: ನಖ್ವಿ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.