ETV Bharat / bharat

ಜನಸಂಖ್ಯೆ ನಿಯಂತ್ರಣ ಕಾಯ್ದೆ ರೂಪಿಸುವ ಸಂಸದರಿಗೆ ಮಕ್ಕಳೆಷ್ಟು ಗೊತ್ತೇ?

author img

By

Published : Jul 25, 2022, 2:03 PM IST

Population Control Bill.. ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ್ದೇ ಮಾತು. ಈ ಬಗ್ಗೆ ಸಂಸತ್ತಿನಲ್ಲಿ ಕೂತು ಕಾಯ್ದೆ ರೂಪಿಸುವ ಸಂಸದರು ಕುಟುಂಬ ನಿಯಂತ್ರಣ ರೇಖೆಯನ್ನು ಎಷ್ಟರ ಮಟ್ಟಿಗೆ ಪಾಲಿಸಿದ್ದಾರೆ. ಅವರಿಗಿರುವ ಮಕ್ಕಳೆಷ್ಟು ಎಂಬುದರ ಬಗ್ಗೆ "ಈಟಿವಿ ಭಾರತ್​" ವಿಶ್ಲೇಷಣೆ ಇಲ್ಲಿದೆ.

population-control-bill
ಜನಸಂಖ್ಯೆ ನಿಯಂತ್ರಣ ಕಾಯ್ದೆ

ನವದೆಹಲಿ: ಇನ್ನೊಂದು ವರ್ಷದಲ್ಲಿ ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ರಾಷ್ಟ್ರವಾಗಲಿದೆ ಎಂದು ವರದಿಯೊಂದು ಅಂದಾಜಿಸಿದೆ. ಇದು ಆತಂಕ ಉಂಟು ಮಾಡಿದ್ದು, ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂಬ ಕೂಗು ಪಕ್ಷಾತೀತವಾಗಿ ಕೇಳಿಬಂದಿದೆ. ಆದರೆ, ಈ ಬಗ್ಗೆ ಕಾನೂನು ತರುವ ಪ್ರಯತ್ನಗಳು ಸಾಕಾರವಾಗುವ ಲಕ್ಷಣ ಮಾತ್ರ ತೀರಾ ಕಡಿಮೆ.

ಸದ್ಯ ಸಂಸತ್​ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಇಂದು ಲೋಕಸಭೆಯಲ್ಲಿ 'ಜನಸಂಖ್ಯೆ ನಿಯಂತ್ರಣ' ಕುರಿತು ಖಾಸಗಿ ಮಸೂದೆ ಮಂಡಿಸಲು ಹೋದ ನಟ, ಬಿಜೆಪಿ ಸಂಸದ ರವಿ ಕಿಶನ್​ ಟೀಕೆಗೆ ಗುರಿಯಾಗಿದ್ದಾರೆ. ಕಾರಣ ಅವರೇ ಮೂವರು ಪುತ್ರಿಯರು, ಓರ್ವ ಪುತ್ರನನ್ನು ಹೊಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಟ್ರೋಲ್​ ಆಗಿದ್ದಾರೆ. ರವಿ ಕಿಶನ್​ ಅವರ ಮಸೂದೆ ಮಂಡಿಸುವ ನೈತಿಕತೆಯೇ ಇಲ್ಲಿ ಪ್ರಶ್ನೆಯಾಗಿದೆ.

ಇದೇ ಮೊದಲಲ್ಲ: ಜನಸಂಖ್ಯಾ ನಿಯಂತ್ರಣದ ಕುರಿತು ಈ ಹಿಂದೆ ಅಂದರೆ 2019 ರಲ್ಲಿ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಅವರು ಖಾಸಗಿ ಮಸೂದೆಯನ್ನು ಮಂಡಿಸಿದ್ದರು. ಪ್ರಸ್ತಾವಿತ ಮಸೂದೆಯು ದಂಪತಿ ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದನ್ನು ತಡೆಯುವ ಗುರಿಯನ್ನು ಹೊಂದಿತ್ತು. ಇದನ್ನು ಮೀರಿದಲ್ಲಿ ಸರ್ಕಾರಿ ಉದ್ಯೋಗ ಮತ್ತು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಮತ್ತು ಸಬ್ಸಿಡಿಗಳಿಗೆ ಅನರ್ಹರಾಗುವ ಬಗ್ಗೆಯೂ ಉಲ್ಲೇಖಿಸಲಾಗಿತ್ತು.

ರಾಕೇಶ್ ಸಿನ್ಹಾರ ಈ ಮಸೂದೆ ರಾಜ್ಯಸಭೆಯಲ್ಲಿ ಪಾಸಾಗಿದ್ದರೂ, ಲೋಕಸಭೆಯಲ್ಲಿ ಸಾರಾಸಗಟಾಗಿ ನಿರಾಕರಿಸಲಾಗಿತ್ತು. ಯಾವ ಸಂಸತ್ತಿನ ಮೂಲಕ ಈ ಕಾನೂನು ಮಾಡಲಾಗುತ್ತಿದೆಯೋ ಅದೇ ಸಂಸತ್ತಿನ ಸದಸ್ಯರು ಎರಡು ಮಕ್ಕಳಿಗಿಂತಲೂ ಹೆಚ್ಚು ಹೊಂದಿರುವುದು ಸೋಜಿಗದ ಸಂಗತಿ. ಈ ಬಗ್ಗೆ ಲೋಕಸಭೆ ವೆಬ್​ಸೈಟ್​ನಲ್ಲಿರುವ ಸಂಸದರ ಕುಟುಂಬದ ಮಾಹಿತಿಯನ್ನು "ಈಟಿವಿ ಭಾರತ್" ವಿಶ್ಲೇಷಿಸಿದೆ.

ದಿಗ್ಭ್ರಮೆ ಮೂಡಿಸುವ ಮಾಹಿತಿ: ಲೋಕಸಭೆಯ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ ಒಟ್ಟು 543 ಲೋಕಸಭಾ ಸದಸ್ಯರಿದ್ದಾರೆ. ಅದರಲ್ಲಿ 303 ಬಿಜೆಪಿ, 53 ಕಾಂಗ್ರೆಸ್, 24 ಡಿಎಂಕೆ, 23 ತೃಣಮೂಲ ಕಾಂಗ್ರೆಸ್, 22 ವೈಎಸ್ಆರ್ ಕಾಂಗ್ರೆಸ್, 19 ಶಿವಸೇನೆ, ಜೆಡಿಯುನ 16, ಬಿಜೆಡಿಯ 12, ಬಿಎಸ್‌ಪಿಯ 10 ಮತ್ತು ಇತರ ಸದಸ್ಯರಿದ್ದಾರೆ.

ಈ 543 ಸದಸ್ಯರಲ್ಲಿ 171 ಸದಸ್ಯರು 2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಈ ಸಂಖ್ಯೆಯಲ್ಲಿ ಬಿಜೆಪಿ(107) ಸದಸ್ಯರೇ ಸಿಂಹಪಾಲು ಹೊಂದಿದ್ದಾರೆ. ಬಳಿಕ ಕಾಂಗ್ರೆಸ್ (10), ಜೆಡಿಯು (9), ಡಿಎಂಕೆ (6) ಮತ್ತು ಇತರರು 25 ಸಂಸದರಿದ್ದಾರೆ.

ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ಬಿಜೆಪಿಯ 39 ಸಂಸದರು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಉಳಿದ ರಾಜಕೀಯ ಪಕ್ಷಗಳ 25 ನಾಯಕರೂ ಈ ಪಟ್ಟಿಯಲ್ಲಿದ್ದಾರೆ. ಎಐಯುಡಿಎಫ್‌ ಸಂಸದ ಮೌಲಾನಾ ಬದ್ರುದ್ದೀನ್, ಅಪ್ನಾದಳದ (ಎಸ್) ಪಕೌರಿ ಲಾಲ್ ಮತ್ತು ಜೆಡಿಯು ಸಂಸದ ದಿಲಾಶ್ವರ್ ಕಾಮೈತ್ ಸೇರಿದಂತೆ ಇನ್ನೂ ಮೂವರು ಸಂಸದರಿಗೆ ಬರೋಬ್ಬರಿ 7 ಮಕ್ಕಳಿದ್ದಾರೆ. ಇದರಲ್ಲಿ ಒಬ್ಬರಿಗೆ 6 ಮಕ್ಕಳಿದ್ದಾರೆ ಎಂಬುದು ವಿಶೇಷ.

ಇಂತಹ ಸನ್ನಿವೇಶದಲ್ಲಿ 2 ಮಕ್ಕಳನ್ನು ಮಾತ್ರ ಹೊಂದುವ ಮಸೂದೆಗೆ 3 ಅಥವಾ 4 ಕ್ಕಿಂತ ಹೆಚ್ಚು ಅಮಕ್ಕಳನ್ನು ಹೊಂದಿರುವ ಸಂಸದರು ಒಪ್ಪಿಗೆ ನೀಡಲು ಯಾವ ನೈತಿಕತೆ ಇದೆ ಮತ್ತು ಹೇಗೆ ಅಂಗೀಕರಿಸುತ್ತಾರೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

30 ಬಾರಿ ಮಸೂದೆ ನಪಾಸ್​: ಜನಸಂಖ್ಯೆ ನಿಯಂತ್ರಣ ಕುರಿತು ಸಂಸತ್ತಿನಲ್ಲಿ 30 ಅಧಿಕ ಬಾರಿ ಖಾಸಗಿ ಮತ್ತು ಸರ್ಕಾರ ಮಸೂದೆ ಮಂಡನೆ ಮಾಡಿದೆ. ಆದರೆ, ಅದು ಅಷ್ಟೂ ಸಲವೂ ನಿರಾಕರಣೆಗೆ ಒಳಗಾಗಿದೆ. ಉಭಯ ಸದನಗಳಲ್ಲಿ ಇಂತಹ ಮಸೂದೆಗಳು ಮಂಡನೆಗೂ ಮೊದಲೇ ವಿರೋಧ ಎದುರಿಸುತ್ತವೆ.

ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶಾಸನಾತ್ಮಕ ಕ್ರಮ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, 2019-21ರಲ್ಲಿ ದೇಶದ ಒಟ್ಟು ಫಲವತ್ತತೆಯು ನಿರೀಕ್ಷೆಗಿಂತ 2.0 ಕ್ಕೆ ಇಳಿಕೆ ಕಂಡಿದೆ ಎಂದು ಪವಾರ್ ಮಾಹಿತಿ ನೀಡಿದರು.

ರಾಜಕೀಯದಲ್ಲಿ 'ನೈತಿಕತೆ' ಪದ ಸಮಂಜಸವೇ?: ರಾಜಕೀಯದಲ್ಲಿ ನೈತಿಕತೆ ಪದವೇ ಢಾಳವಾಗಿದೆ. ಈ ಬಗ್ಗೆ ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಯೋಗೇಶ್​ ಮಿಶ್ರಾ ಅವರು, 'ನ್ಯಾಯಸಮ್ಮತತೆ', ನೈತಿಕತೆ ಪದಗಳಿಗೆ ರಾಜಕೀಯ ಕ್ಷೇತ್ರದಲ್ಲಿ ನಿಜವಾದ ಜಾಗವಿಲ್ಲ. ಬಹಿರಂಗ ಪಕ್ಷಾಂತರ, ಭ್ರಷ್ಟಾಚಾರಗಳನ್ನು ನೋಡಿದ್ದೇವೆ. ಬಳಿಕ ಅವರೇ ಮಂತ್ರಿಗಳಾಗಿ ಆಡಳಿತ ನಡೆಸಿದ್ದಾರೆ. ಆದ್ದರಿಂದ ನೈತಿಕತೆ ಮತ್ತು ತತ್ವಗಳು ರಾಜಕೀಯಕ್ಕೆ ಸಲ್ಲದ ಪದಗಳು ಎಂದು ಅಭಿಪ್ರಾಯಪಟ್ಟಿದ್ದಾರೆ.

ಓದಿ: 'ನನಗೆ ಪ್ರಾಥಮಿಕ ಶಿಕ್ಷಣ ಪಡೆಯುವುದೇ ದೊಡ್ಡ ಕನಸಾಗಿತ್ತು..' ದ್ರೌಪದಿ ಭಾಷಣದ 10 ಪ್ರಮುಖ ಅಂಶಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.