ETV Bharat / bharat

ಮಧುಮೇಹಿ ರೋಗಿಗಳಿಗೆ 'ಸಿಹಿ'ಸುದ್ದಿ: ದೆಹಲಿ ಏಮ್ಸ್​ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುತ್ತೆ ಇನ್ಸುಲಿನ್​ - ಇಂದು ವಿಶ್ವ ಮಧುಮೇಹ ದಿನ

ಮಧುಮೇಹಿಗಳ (ಡಯಾಬಿಟಿಸ್​) ಅನುಕೂಲಕ್ಕಾಗಿ ದೆಹಲಿಯ ಏಮ್ಸ್​ ಆಸ್ಪತ್ರೆ ಇನ್ಸುಲಿನ್​ ಔಷಧ ಉಚಿತವಾಗಿ ನೀಡಲು ನಿರ್ಧರಿಸಿದೆ.

ಯಾಬಿಟಿಸ್​ ರೋಗಿಗಳಿಗೆ ಇನ್ಸುಲಿನ್ ಇಂಜೆಕ್ಷನ್
ಯಾಬಿಟಿಸ್​ ರೋಗಿಗಳಿಗೆ ಇನ್ಸುಲಿನ್ ಇಂಜೆಕ್ಷನ್
author img

By ETV Bharat Karnataka Team

Published : Nov 14, 2023, 11:01 PM IST

ನವದೆಹಲಿ: ಇಂದು ವಿಶ್ವ ಮಧುಮೇಹ ದಿನ. ಇದರ ಅಂಗವಾಗಿ ದೇಶದ ಅತಿ ದೊಡ್ಡ ಆಸ್ಪತ್ರೆಯಾದ ದೆಹಲಿಯ ಏಮ್ಸ್, ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಇನ್ಸುಲಿನ್ ಚುಚ್ಚುಮದ್ದು ನೀಡಲು ನಿರ್ಧರಿಸಿದೆ. ಎಐಐಎಂಎಸ್ ನಿರ್ದೇಶಕ ಪ್ರೊಫೆಸರ್ ಎಂ ಶ್ರೀನಿವಾಸ್ ನೇತೃತ್ವದಲ್ಲಿ ಮಂಗಳವಾರ ಆಸ್ಪತ್ರೆಯ ಒಪಿಡಿ ವಿಭಾಗದಲ್ಲಿ ಇಂಥದ್ದೊದು ಜನಪರ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಈ ಪ್ರಯತ್ನವು ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವಾಗಲಿದೆ. ಅವರು ತಮ್ಮ ನಿಯಮಿತ ಚಿಕಿತ್ಸೆಗೆ ಅಗತ್ಯವಾದ ದುಬಾರಿ ಇನ್ಸುಲಿನ್ ಚುಚ್ಚುಮದ್ದು ಪಡೆಯಲು ಕಷ್ಟಪಡುತ್ತಾರೆ. ಇಂದಿನಿಂದ ಆರಂಭಿಸಲಾಗಿರುವ ಈ ಸೌಲಭ್ಯವು ಎಲ್ಲ ಏಮ್ಸ್​ ಆಸ್ಪತ್ರೆಯ ಒಪಿಡಿಗಳಲ್ಲಿ ಲಭ್ಯವಿರುತ್ತದೆ. ವೈದ್ಯರು ಶಿಫಾರಸು ಮಾಡಿದ ರೋಗಿಗಳಿಗೆ ಇನ್ಸುಲಿನ್​ ಚುಚ್ಚುಮದ್ದು ದೊರೆಯಲಿದೆ.

ಏಮ್ಸ್​ ಆಸ್ಪತ್ರೆಯಲ್ಲಿ ಎರಡು ಕೇಂದ್ರ: ದೆಹಲಿಯ ಏಮ್ಸ್​ ಕ್ಯಾಂಪಸ್‌ನ ರಾಜಕುಮಾರಿ ಅಮೃತ್ ಕೌರ್ ಒಪಿಡಿ ವಿಭಾಗದಲ್ಲಿ ಎರಡು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ರೋಗಿಗಳಿಗೆ ವೈದ್ಯರ ಶಿಫಾರಸಿನ ಮೇರೆಗೆ ಉಚಿತ ಇನ್ಸುಲಿನ್ ಚುಚ್ಚುಮದ್ದನ್ನು ನೀಡಲಾಗುತ್ತದೆ. ಇನ್ಸುಲಿನ್ ವಿತರಣಾ ಕೌಂಟರ್, ಔಷಧಗಳನ್ನು ವಿತರಣೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮೌಖಿಕ ಮತ್ತು ಲಿಖಿತ ಸೂಚನೆಗಳನ್ನು ನೀಡಲಾಗುತ್ತದೆ. ಇಲ್ಲಿ ಇನ್ಸುಲಿನ್ ಚುಚ್ಚುಮದ್ದಿನ ಸರಿಯಾದ ಶೇಖರಣೆ ಮತ್ತು ನಿರ್ವಹಣೆಯ ಬಗ್ಗೆ ಅಗತ್ಯ ಸಲಹೆಯನ್ನು ಸಹ ನೀಡಲಾಗುತ್ತದೆ.

ಪ್ರಯಾಣದ ವೇಳೆ ಇನ್ಸುಲಿನ್​ ಹಾಳಾಗದಂತೆ ತಡೆಯಲು ಇನ್ಸುಲಿನ್ ಚುಚ್ಚುಮದ್ದಿನ ಬಾಟಲಿಗಳನ್ನು ಐಸ್ ಪ್ಯಾಕ್‌ನೊಳಗೆ ಇಟ್ಟು ರೋಗಿಗಳಿಗೆ ನೀಡಲಾಗುತ್ತದೆ. ಔಷಧಿಯ ಗುಣಮಟ್ಟವನ್ನು ಕಾಪಾಡಲು ಆಸ್ಪತ್ರೆ ಕಾಳಜಿ ವಹಿಸಿದೆ. ಆರಂಭಿಕ ಹಂತದಲ್ಲಿ ರೋಗಿಗಳಿಗೆ ಒಂದು ತಿಂಗಳ ಡೋಸೇಜ್ ಅನ್ನು ಒದಗಿಸಲಾಗುತ್ತದೆ. ರೋಗಿಗೆ ಯಾವುದೇ ಬಾಟಲುಗಳನ್ನು ನೇರವಾಗಿ ನೀಡಲಾಗುವುದಿಲ್ಲ. ವೈದ್ಯರು ಸೂಚಿಸಿದ ರೋಗಿಗಳಿಗೆ ಮಾತ್ರ ನೀಡಲಾಗುತ್ತದೆ.

ಈ ಸೌಲಭ್ಯವು 1 ತಿಂಗಳವರೆಗೆ ಇರಲಿದೆ. ನಂತರದಲ್ಲಿ ಇದನ್ನು ಮೂರು ತಿಂಗಳವರೆಗೆ ವಿಸ್ತರಿಸುವ ಯೋಜನೆ ಇದೆ. ಇದರ ಔಷಧಿಯ ಅಗತ್ಯವಿರುವ ರೋಗಿಗಳಿಗೆ ಆರ್ಥಿಕ ಹೊರೆಯನ್ನು ಇದು ತಗ್ಗಿಸಲಿದೆ.

ಏನಿದು ಮಧುಮೇಹ: ಮಾನವನ ಪ್ಯಾಂಕ್ರಿಯಾಗಳು ದೇಹಕ್ಕೆ ಅವಶ್ಯವಿರುವಷ್ಟು ಇನ್ಸುಲಿನ್​ ಅನ್ನು ಉತ್ಪಾದನೆ ಮಾಡುವುದನ್ನು ನಿಲ್ಲಿಸಿದಾಗ ಡಯಾಬಿಟೀಸ್ ಉಂಟಾಗುತ್ತದೆ. ಇದರಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗಿ ಹೈಪರ್​ಗ್ಲೈಸೇಮಿಯಾ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರಸ್ತುತ ಭಾರತದಲ್ಲಿ ಡಯಾಬಿಟೀಸ್ ಬಹುದೊಡ್ಡ ಪಿಡುಗಾಗಿದ್ದು, ದೇಶದ 20 ರಿಂದ 70 ವಯೋಮಾನದ ಶೇ 8.7 ರಷ್ಟು ಇದರಿಂದ ಬಳಲುತ್ತಿದ್ದಾರೆ. ಬೊಜ್ಜಿನ ದೇಹ ಇರುವವರಿಗೆ ಡಯಾಬಿಟೀಸ್ ಬರುವ ಸಾಧ್ಯತೆ ತೀರಾ ಹೆಚ್ಚಾಗಿರುತ್ತದೆ. 2035 ರ ಹೊತ್ತಿಗೆ ಭಾರತದಲ್ಲಿ 109 ಮಿಲಿಯನ್ ಮಧುಮೇಹಿಗಳಿರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ನ.14 - ವಿಶ್ವ ಮಧುಮೇಹ ದಿನ; ಆರೋಗ್ಯಕರ ಜೀವನಶೈಲಿ ನಿಮ್ಮದಾಗಲಿ…

ETV Bharat Logo

Copyright © 2025 Ushodaya Enterprises Pvt. Ltd., All Rights Reserved.