ETV Bharat / bharat

CDR ಅಳಿಸಲು ಎಥಿಕಲ್ ಹ್ಯಾಕರ್​ಗೆ ₹5 ಲಕ್ಷ ನೀಡಲು ಮುಂದಾಗಿದ್ದ ಶಾರೂಖ್​ ಖಾನ್​ ಮ್ಯಾನೇಜರ್ ಪೂಜಾ ದದ್ಲಾನಿ - ಶಾರೂಖ್​ ಖಾನ್​ ಮ್ಯಾನೇಜರ್ ಪೂಜಾ ದದ್ಲಾನಿ

ಇದೀಗ ಈ ಸಂಬಂಧ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಭಂಗಲೆ ತನಿಖೆಗೆ ಆಗ್ರಹಿಸಿದ್ದಾರೆ. ಈ ಹಿಂದೆ ದಾವೂದ್ ಪತ್ನಿಯೊಂದಿಗೆ ಎನ್‌ಸಿಪಿ ನಾಯಕ ಏಕನಾಥ್ ಖಾಡ್ಸೆ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಿದ್ದಕ್ಕಾಗಿ ಭಂಗಲೆ ತೀವ್ರ ಟೀಕೆಗೆ ಗುರಿಯಾಗಿದ್ದರು..

CDR ಅಳಿಸಲು ಎಥಿಕಲ್ ಹ್ಯಾಕರ್
CDR ಅಳಿಸಲು ಎಥಿಕಲ್ ಹ್ಯಾಕರ್
author img

By

Published : Oct 27, 2021, 10:26 PM IST

ಜಲಗಾಂವ್ : ಕ್ರೂಸ್​ ಹಡಗು ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಗಾಂವ್​ನ ಎಥಿಕಲ್ ಹ್ಯಾಕರ್ ಒಬ್ಬರು ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು, ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ.

ಕ್ರೂಸ್​ ಹಡಗು ಡ್ರಗ್ಸ್​ ಪ್ರಕರಣದ ಆರೋಪಿಯ ತಂದೆ, ಬಾಲಿವುಡ್​ ನಟ ಶಾರೂಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರ ಮೊಬೈಲ್​ CDR(Call Detail Record) ಅನ್ನು ಅಳಿಸಿ ಹಾಕಲು ಆಮಿಷವೊಡ್ಡಲಾಗಿತ್ತು ಎಂದು ಎಥಿಕಲ್ ಹ್ಯಾಕರ್ ಮನೀಶ್ ಭಂಗಲೆ ಹೇಳಿಕೊಂಡಿದ್ದಾರೆ.

ಅಕ್ಟೋಬರ್ 6ರಂದು ಜಲಗಾಂವ್‌ನಲ್ಲಿ ಅಲೋಕ್ ಜೈನ್ ಮತ್ತು ಶೈಲೇಶ್ ಚೌಧರಿ ತಮ್ಮನ್ನು ಭೇಟಿಯಾಗಿದ್ದರು. ಈ ವೇಳೆ ಪೂಜಾ ದದ್ಲಾನಿ ಅವರ CDR ಅನ್ನು ಅಳಿಸಿ ಹಾಕಲು ಕೇಳಿದರು. ಅಲ್ಲದೇ, ಅವರು ನನಗೆ ವಾಟ್ಸ್‌ಆ್ಯಪ್ ಚಾಟ್‌ನ ಬ್ಯಾಕಪ್ ಅನ್ನು ಸಹ ತೋರಿಸಿದರು. ಅದು ಆರ್ಯನ್ ಖಾನ್ ಎಂಬ ಹೆಸರಿನಲ್ಲಿ ಸೇವ್​ ಮಾಡಲಾಗಿತ್ತು. ಈ ಕೆಲಸ ಮಾಡಿದರೆ 5 ಲಕ್ಷ ರೂಪಾಯಿ ಸಿಗುತ್ತದೆ ಎಂದು ನನಗೆ ಹೇಳಿದರು ಎಂದು ಭಂಗಲೆ ಪತ್ರದಲ್ಲಿ ಬರೆದಿದ್ದಾರೆ.

ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಏನಾದರೂ ತಪ್ಪಾಗಿದೆ ಎಂದು ನಾನು ಅನುಮಾನಿಸುತ್ತೇನೆ. ಈ ಕೆಲಸ ಮಾಡಲು ಮುಂಗಡವಾಗಿ 10 ಸಾವಿರ ರೂಪಾಯಿ ನೀಡಿದರು ಮತ್ತು ಈ ಕೆಲಸ ಮಾಡಿದರೆ 5 ಲಕ್ಷ ರೂಪಾಯಿ ನೀಡುವುದಾಗಿಯೂ ಹೇಳಿದರು. ನನಗೆ ಈ ವೇಳೆ ಮೊಬೈಲ್​ ಸಂಖ್ಯೆಯೊಂದನ್ನು ನೀಡಿದರು. ಅದು Truecallerನಲ್ಲಿ ಸ್ಯಾಮ್ ಡಿಸೋಜಾ ಎಂದು ತೋರಿಸಿತು ಎಂದು ತಿಳಿಸಿದ್ದಾರೆ.

ಇದೀಗ ಈ ಸಂಬಂಧ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಭಂಗಲೆ ತನಿಖೆಗೆ ಆಗ್ರಹಿಸಿದ್ದಾರೆ. ಈ ಹಿಂದೆ ದಾವೂದ್ ಪತ್ನಿಯೊಂದಿಗೆ ಎನ್‌ಸಿಪಿ ನಾಯಕ ಏಕನಾಥ್ ಖಾಡ್ಸೆ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಿದ್ದಕ್ಕಾಗಿ ಭಂಗಲೆ ತೀವ್ರ ಟೀಕೆಗೆ ಗುರಿಯಾಗಿದ್ದರು.

ಓದಿ: ಆರ್ಯನ್‌ ಖಾನ್‌ಗೆ ಇಂದೂ ಸಿಗದ ಜಾಮೀನು ; ನಾಳೆಗೆ ವಿಚಾರಣೆ ಮುಂದೂಡಿದ ಬಾಂಬೆ ಹೈಕೋರ್ಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.