ETV Bharat / bharat

ಭಾರತದಲ್ಲಿ ಮಾಲಿನ್ಯದಿಂದ 23 ಲಕ್ಷ ಮಂದಿ ಸಾವು.. ವಿಶ್ವದಲ್ಲಿಯೇ ಅತ್ಯಧಿಕ: ಅಧ್ಯಯನ - ಭಾರತದಲ್ಲಿನ ವಾಯುಮಾಲಿನ್ಯದ ಬಗ್ಗೆ ಅಧ್ಯಯನ ವರದಿ

ಜಲ, ವಾಯು, ಆಹಾರ ಮಾಲಿನ್ಯದಿಂದಾಗಿ ದೇಶದಲ್ಲಿ 2019 ರಲ್ಲಿ 23 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಲ್ಯಾನ್ಸೆಟ್​ ಅಧ್ಯಯನ ವರದಿ ಮಾಡಿದೆ. ಈ ವರದಿಯನ್ನು ದಿ ಲ್ಯಾನ್ಸೆಟ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

pollution-led-to-over
ವಾಯುಮಾಲಿನ್ಯದ ಸಾವಿನ ಬಗ್ಗೆ ವರದಿ
author img

By

Published : May 18, 2022, 8:34 PM IST

ನವದೆಹಲಿ: ದೇಶದಲ್ಲಿ ವಾಯು, ಜಲ, ಆಹಾರದಿಂದ ಹಿಡಿದು ಎಲ್ಲ ಮಾದರಿಯಲ್ಲೂ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದು ಜನರ ಸಾವಿಗೂ ಕಾರಣವಾಗುತ್ತಿದೆ. 2019 ರಲ್ಲಿ ಎಲ್ಲಾ ರೀತಿಯ ಮಾಲಿನ್ಯದಿಂದಾಗಿ 23 ಲಕ್ಷ ಅಕಾಲಿಕ ಮರಣಗಳು ಉಂಟಾಗಿವೆ ಎಂದು ಸಮೀಕ್ಷೆಯೊಂದು ಆತಂಕಕಾರಿ ವಿಷಯವನ್ನು ಬಹಿರಂಗ ಪಡಿಸಿದೆ.

ಇದಲ್ಲದೇ, ಜಾಗತಿಕವಾಗಿ ಅದೇ ವರ್ಷ 90 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಕಾರಣಕ್ಕಾಗಿ ಹೆಚ್ಚು ಸಾವುಗಳು ಸಂಭವಿಸಿವೆ. ಇದರಿಂದಾಗಿ ವಿಶ್ವಕ್ಕೆ 4.6 ಟ್ರಿಲಿಯನ್ ಡಾಲರ್​ನಷ್ಟು ಆರ್ಥಿಕ ನಷ್ಟ ಉಂಟಾಗಿದೆ ಎಂದು ದಿ ಲ್ಯಾನ್ಸೆಟ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಮಾಲಿನ್ಯಕ್ಕೆ 6 ರಲ್ಲಿ 1 ಸಾವು: 2019 ರಲ್ಲಿ ಮಾಲಿನ್ಯದಿಂದಾಗಿ 90 ಲಕ್ಷ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದು ಪ್ರತಿ 6 ಸಾವುಗಳಲ್ಲಿ 1 ಮಾಲಿನ್ಯ ಕಾಣದಿಂದಲೇ ಉಂಟಾಗಿದೆ. ವಾಯುಮಾಲಿನ್ಯದಿಂದಾಗಿ ಪ್ರತಿ ವರ್ಷ 66 ಲಕ್ಷ ಮಂದಿ ಬಲಿಯಾಗಿದ್ದಾರೆ. ಜಲ ಮಾಲಿನ್ಯದಿಂದಾಗಿ 13 ಲಕ್ಷ, ಸೀಸದಿಂದ 9 ಲಕ್ಷ ಮತ್ತು 8.7 ಲಕ್ಷ ಮಂದಿ ಇತರ ವಿಷಕಾರಿ ಅನಿಲಗಳಿಂದ ಸಾವನ್ನಪ್ಪಿದ್ದಾರೆ. ವಾಯುಮಾಲಿನ್ಯದಿಂದ ವಿಶ್ವದಲ್ಲಿಯೇ ಅತಿ ಹೆಚ್ಚು ಸಾವುಗಳು ಅಂದರೆ 9.8 ಲಕ್ಷ ಮಂದಿ ಭಾರತದಲ್ಲಿಯೇ ಆಗಿವೆ ಎಂಬ ಜರ್ನಲ್​ನಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಭಾರತದಲ್ಲಿ ಮಾಲಿನ್ಯ ಹೆಚ್ಚು: ಉತ್ತರ ಭಾರತದಲ್ಲಿ ಈ ಮಾಲಿನ್ಯದ ಪ್ರಭಾವವು ಹೆಚ್ಚಿದೆ ಎಂಬುದನ್ನು ಅಧ್ಯಯನ ಗುರುತಿಸಿದೆ. ವಿದ್ಯುತ್ ಉತ್ಪಾದನೆ, ಕೈಗಾರಿಕೆಗಳು ಮತ್ತು ಕೃಷಿ ಚಟುವಟಿಕೆಗಳಿಂದ ಉಂಟಾಗುವ ವಾಯುಮಾಲಿನ್ಯವು ಅಲ್ಲಿ ತೀವ್ರವಾಗಿದೆ. ಮನೆಗಳಲ್ಲಿ ಉರುವಲು ಸುಡುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.

ಇದಲ್ಲದೇ, ಕಲ್ಲಿದ್ದಲು ಮತ್ತು ಬೆಳೆ ತ್ಯಾಜ್ಯವನ್ನು ಸುಡುವಿಕೆ ನಂತರದ ಸ್ಥಾನದಲ್ಲಿದೆ. ಮಾಲಿನ್ಯವನ್ನು ನಿಯಂತ್ರಿಸಲು ಭಾರತದ ಪ್ರಯತ್ನಗಳ ಹೊರತಾಗಿಯೂ ದೇಶಾದ್ಯಂತ ಸರಿಯಾದ ಕೇಂದ್ರೀಕೃತ ವ್ಯವಸ್ಥೆ ಇಲ್ಲ ಎಂಬುದನ್ನು ಇತ್ತೀಚಿನ ಅಧ್ಯಯನವು ಎತ್ತಿ ತೋರಿಸಿದೆ. ಮಾಲಿನ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದ ಪಿಎಂ ಮೌಲ್ಯಕ್ಕಿಂತ ಭಾರತದಲ್ಲಿ ಇದು ಹೆಚ್ಚಾಗಿ ಕಂಡುಬಂದಿದೆ ಎಂದು ಅಧ್ಯಯನ ಗುರುತಿಸಿದೆ.

ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಸಾರ್ವಜನಿಕ ಆರೋಗ್ಯದ ಮೇಲೆ ಮಾಲಿನ್ಯದ ಪರಿಣಾಮವು ಅಗಾಧವಾಗಿದೆ ಎಂದು ಅಧ್ಯಯನದ ನೇತೃತ್ವ ವಹಿಸಿರುವ ಸ್ವಿಸ್ ಮೂಲದ ಗ್ಲೋಬಲ್ ಅಲೈಯನ್ಸ್ ಆನ್ ಹೆಲ್ತ್ ಆ್ಯಂಡ್ ಪೊಲ್ಯೂಶನ್ ತಜ್ಞರಾದ ರಿಚರ್ಡ್ ಫುಲ್ಲರ್ ಹೇಳುತ್ತಾರೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದರೂ ಮಾಲಿನ್ಯ ತಡೆಗಟ್ಟುವಲ್ಲಿ ವಿಶ್ವದ ರಾಷ್ಟ್ರಗಳು ಕಾಳಜಿ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಇತ್ತೀಚೆಗೆ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಗತಿ ಸಾಧಿಸಲಾಗುತ್ತಿದ್ದರೂ, ಅದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಕಾಗದದಲ್ಲಿ ಮಾತ್ರ ಇದೆ ಎಂದಿದ್ದಾರೆ.

ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾದ ಭಾರತ ಮತ್ತು ಚೀನಾ ಮಾಲಿನ್ಯದಿಂದಾಗುವ ಸಾವಿನಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಭಾರತದಲ್ಲಿ ಸುಮಾರು 23.5 ಲಕ್ಷ ಮತ್ತು ಚೀನಾದಲ್ಲಿ 22 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರೆ, ಅಮೆರಿಕದಲ್ಲಿ 42 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಎಲ್ಲಾ ತರನಾದ ಮಾಲಿನ್ಯವು ಪ್ರತಿ ವರ್ಷ ಪ್ರಪಂಚದಾದ್ಯಂತ 1 ಲಕ್ಷ ಜನರಲ್ಲಿ ಸರಾಸರಿ 117 ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಮಧ್ಯ ಆಫ್ರಿಕಾದ ದೇಶವಾದ ಚಾಡ್​ನಲ್ಲಿ ಲಕ್ಷ ಮಂದಿಯಲ್ಲಿ 300 ಜನರು ಸಾಯುತ್ತಿದ್ದು ಅತ್ಯಧಿಕವಾಗಿದ್ದರೆ, ಬ್ರೂನಿ, ಕತಾರ್ ಮತ್ತು ಐಸ್ಲ್ಯಾಂಡ್​ನಲ್ಲಿ ಸಾವಿನ ಪ್ರಮಾಣ ಕಡಿಮೆ ಇರುವ ರಾಷ್ಟ್ರಗಳಾಗಿವೆ.

ಓದಿ: ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.. ರೆಡ್​ ಅಲರ್ಟ್​ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.