ಬೆಟ್ಟಿಯಾ(ಬಿಹಾರ): ರಾಜಕೀಯ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಅವರು ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಆದರೆ ತವರು ರಾಜ್ಯ ಬಿಹಾರಕ್ಕೆ ಉತ್ತಮ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅಥವಾ ನಿರ್ಮಿಸುವ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತನ್ನನ್ನು ರಾಜಕೀಯ ಚಾಣಾಕ್ಷತನವಿಲ್ಲದ "ದಂಧೆಬಾಜ್" (ವ್ಯಾಪಾರಿ) ಎಂದು ಆರೋಪಿಸಿದ್ದ ಜೆಡಿಯು ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, "ರಾಜಕೀಯಕ್ಕೆ ಬರಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಯಾಕೆ ನನ್ನನ್ನು ತಡೆದರು ಎಂದು ಅವರನ್ನೇ ಪ್ರಶ್ನಿಸಲಿ" ಎಂದು ಸವಾಲು ಹಾಕಿದರು.
ಜನ್ ಸುರಾಜ್ ಪಾದಯಾತ್ರೆ: ನಾನು ಚುನಾವಣೆಗೆ ಏಕೆ ಸ್ಪರ್ಧಿಸಬೇಕು? ಅಂಥ ಯಾವುದೇ ವಿಚಾರಗಳು ನನ್ನಲ್ಲಿಲ್ಲ ಎಂದು ತಾವು I-PAC ಸಂಸ್ಥಾಪಕರು, ಸ್ವತಃ ಚುನಾವಣಾ ಅಖಾಡಕ್ಕೆ ಧುಮುಕಲು ಯೋಜಿಸುತ್ತಿದ್ದೀರಾ ಎಂದು ಪದೇ ಪದೇ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಜೆಡಿಯು ನಾಯಕರಿಗೆ ತಿರುಗೇಟು:"ಜೆಡಿ(ಯು) ನಾಯಕರು ನನ್ನನ್ನು ನಿಂದಿಸಿ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ, ನನಗೆ ರಾಜಕೀಯ ಅನುಭವ ಇಲ್ಲದಿದ್ದರೆ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ಎರಡು ವರ್ಷಗಳಿಂದ ಏನು ಮಾಡುತ್ತಿದ್ದೆ ಎಂದು ಅವರನ್ನು ಕೇಳಬೇಕು" ಎಂದು ತಿರುಗೇಟು ನೀಡಿದರು.
10 ಲಕ್ಷ ಉದ್ಯೋಗ ಭರವಸೆ ಹುಸಿ:ಬಿಹಾರ ಮಹಾಮೈತ್ರಿ ಸರ್ಕಾರದ ವರ್ಷಕ್ಕೆ 10 ಲಕ್ಷ ಉದ್ಯೋಗ ಭರವಸೆ ಲೇವಡಿ ಮಾಡಿದ ಕಿಶೋರ್, "ನಾನು ಅದನ್ನು ಹಲವು ಬಾರಿ ಹೇಳಿದ್ದೇನೆ ಮತ್ತು ಮತ್ತೆ ಹೇಳುತ್ತೇನೆ. ಅವರು 10 ಲಕ್ಷ ಉದ್ಯೋಗ ಭರವಸೆ ಈಡೇರಿಸಿದರೆ ನಾನು ನನ್ನ ಅಭಿಯಾನವನ್ನು ತ್ಯಜಿಸುತ್ತೇವೆ" ಎಂದು ವಾಗ್ದಾನ ಮಾಡಿದರು.
ಇದನ್ನೂ ಓದಿ:'ಗಾಂಧಿ ಕುಟುಂಬ ಆ ದುರಂತದಿಂದ ಹೊರಬರುವ ಭರವಸೆ ಇದೆ, ಭೇಟಿ ಮಾಡುವ ಯೋಚನೆ ಇಲ್ಲ'