ETV Bharat / bharat

ಮುಂಬೈನಲ್ಲಿ 12.5 ಕೋಟಿ ಮೌಲ್ಯದ ಮೆಫೆಡ್ರೋನ್ ಸೀಜ್​, ಓರ್ವ ಅರೆಸ್ಟ್​

ಮುಂಬೈನ ಸಾಂತಕ್ರೂಜ್ ಪ್ರದೇಶದಲ್ಲಿ ಡೊಂಗ್ರಿ ಪೊಲೀಸರು ದಾಳಿ ನಡೆಸಿ ಸುಮಾರು 12.5 ಕೋಟಿ ರೂ.ಗಳ ಮೌಲ್ಯದ ಮೆಫೆಡ್ರೋನ್ (ಎಂಡಿ) ವಶಪಡಿಸಿಕೊಂಡಿದ್ದು, ದೀಪಕ್ ಬಂಗೇರಾ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

police seized Rs 12.5 crores worth mephedrone in mumbai
ಮೆಫೆಡ್ರೋನ್
author img

By

Published : Feb 22, 2021, 9:10 AM IST

ಮುಂಬೈ: ಸಾಂತಕ್ರೂಜ್ ಪ್ರದೇಶದಲ್ಲಿ ಡೋಂಗ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ 12.5 ಕೋಟಿ ರೂ. ಮೌಲ್ಯದ 25 ಕೆಜಿ ಮೆಫೆಡ್ರೋನ್ ಅನ್ನು ಜಪ್ತಿ ಮಾಡಿದ್ದಾರೆ.

12.5 ಕೋಟಿ ಮೌಲ್ಯದ ಮೆಫೆಡ್ರೋನ್ ಸೀಜ್

ಪ್ರಕರಣ ಸಂಬಂಧ ಡ್ರಗ್ ಪೆಡ್ಲರ್ ದೀಪಕ್ ಬಂಗೇರಾ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ 5 ಲಕ್ಷ ರೂ ಹಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 18 ರಂದು ಡೊಂಗ್ರಿ ಪೊಲೀಸರು ಇಶಾಕ್​ ಮತ್ತು ಅಬ್ದುಲ್​ ವಾಸಿಮ್​ ಎಂಬ ಆರೋಪಿಗಳನ್ನು ಬಂಧಿಸಿ ಅವರಿಂದ ಕ್ರಮವಾಗಿ 12 ಗ್ರಾಂ ಹಾಗೂ 60 ಗ್ರಾಂ ಮೆಫೆಡ್ರೋನ್ ವಶಪಡಿಸಿಕೊಂಡಿದ್ದರು. ಈ ಇಬ್ಬರೂ ಆರೋಪಿಗಳು ವಿಚಾರಣೆ ವೇಳೆ ದೀಪಕ್ ಬಂಗೇರಾ ಹೆಸರನ್ನು ಬಾಯಿ ಬಿಟ್ಟಿದ್ದರು. ಇವರು ನೀಡಿದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ದೀಪಕ್ ಬಂಗೇರಾನನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ:ಇಂದು ಅಸ್ಸೋಂ, ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.