ಆಂಧ್ರಪ್ರದೇಶ : ಚಿತ್ತೂರು ಜಿಲ್ಲೆಯ ಪೊಲೀಸರು ಆಕಸ್ಮಿಕವಾಗಿ ಬಾವಿಗೆ ಬಿದ್ದ 80 ವರ್ಷದ ಅಜ್ಜಿಯ ಪ್ರಾಣ ಉಳಿಸಿದ್ದಾರೆ.
ಜಿಲ್ಲೆಯ ರೆನಿಗುಂಟಾ ಮಂಡಲದಲ್ಲಿ ಅತ್ತೂರ್‌ನ ಅಜ್ಜಿ ಸುಬ್ಬಮ್ಮ ಕೃಷಿ ಭೂಮಿಯಲ್ಲಿದ್ದ ಬಾವಿಯಲ್ಲಿ ಬಿದ್ದಿದ್ದಾಳೆ. ಸಹಾಯಕ್ಕಾಗಿ ಅಂಗಲಾಚಿದ್ದ ಅಜ್ಜಿಯನ್ನು ಉಳಿಸಲು ಸ್ಥಳಕ್ಕೆ ಗಜುಲಮಂಡ್ಯಂ ಪೊಲೀಸರು ಆಗಮಿಸಿದ್ದಾರೆ. ಉದ್ದನೆಯ ಹಗ್ಗವನ್ನು ಮಂಚಕ್ಕೆ ಕಟ್ಟಿ ಬಾವಿಗೆ ಇಳಿಸಿ ಅಜ್ಜಿಯನ್ನು ಸುರಕ್ಷಿತವಾಗಿ ಮೇಲೆ ಎತ್ತಿದ್ದಾರೆ.
ತಿರುಪತಿ ನಗರ ಪೊಲೀಸ್ ವರಿಷ್ಠಾಧಿಕಾರಿ ಅಪ್ಪಲಾ ನಾಯ್ಡು ಪೊಲೀಸರ ಧೈರ್ಯ ಮತ್ತು ಕಾರ್ಯವನ್ನು ಮೆಚ್ಚಿ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್ ಮತ್ತು ಮಹೇಶ್ಗೆ ಬಹುಮಾನ ನೀಡಿದ್ದಾರೆ.