ತಿರುವನಂತಪುರಂ(ಕೇರಳ): ಸಾಲವಾಗಿ ನೀಡಿದ ಹಣವನ್ನು ವಾಪಸ್ ಕೊಡದ ಕುಟುಂಬದ ಬಾಲಕನನ್ನು ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ. ಬಳಿಕ ಹಣಕ್ಕಾಗಿ ಬೇಡಿಕೆ ಇಡಲು ರೂಪಿಸಿದ್ದ ಸಂಚನ್ನು ಪೊಲೀಸರು ಭೇದಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಜೊತೆಗೆ ಓರ್ವ ಅಪಹರಣಕಾರನನ್ನು ಬಂಧಿಸಿದ್ದು, ವಾಹನವನ್ನು ಜಪ್ತಿ ಮಾಡಲಾಗಿದೆ.
ಈ ಘಟನೆ ಕೇರಳದ ಕೊಟ್ಟಾಯಂನಲ್ಲಿ ಇಂದು ನಡೆದಿದೆ. ಸಂಬಂಧಿಯೊಬ್ಬ ಕುಟುಂಬವೊಂದಕ್ಕೆ 10 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ಇದನ್ನು ವಾಪಸ್ ಕೊಡದ ಹಿನ್ನೆಲೆಯಲ್ಲಿ ತಂಡವೊಂದರ ಸಹಾಯದಿಂದ ಮನೆಗೆ ಬಂದ ಆತ ಬಾಲಕನನ್ನು ಅಪಹರಿಸಿದ್ದಾರೆ. ಈ ವೇಳೆ ಸಹಾಯಕ್ಕೆ ಬಂದ ನೆರೆಹೊರೆಯವರು ಮತ್ತು ಬಾಲಕನ ಸಹೋದರಿಯನ್ನು ಥಳಿಸಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
10 ಲಕ್ಷ ರೂಪಾಯಿ ಕಾರಣ: ಅಪಹರಣಗೊಂಡ ಬಾಲಕನ ಕುಟುಂಬಸ್ಥರು 10 ಲಕ್ಷ ರೂಪಾಯಿ ಹಣವನ್ನು ಅಪಹರಣಕಾರ ವ್ಯಕ್ತಿಯಿಂದ ಸಾಲವಾಗಿ ಪಡೆದಿದ್ದರು. ಬಾಲಕನ ಮನೆಯವರು ಹಣವನ್ನು ವಾಪಸ್ ನೀಡದ ಕಾರಣ 1 ಲಕ್ಷ ರೂಪಾಯಿ ನೀಡಿ ಬಾಲಕನನ್ನು ಅಪಹರಿಸಲು ಗ್ಯಾಂಗ್ ಅನ್ನು ಕಳಿಸಿದ್ದರು. ಬಾಲಕನ ಒತ್ತೆಯಿಟ್ಟುಕೊಂಡು ಹಣ ಪಡೆಯುವ ಸಂಚು ರೂಪಿಸಿದ್ದರು.
ಬಾಲಕನನ್ನು ಅಪಹರಣ ಮಾಡುತ್ತಿರುವ ದೃಶ್ಯಗಳು ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಕುಟುಂಬಸ್ಥರು ದೂರು ನೀಡಿದ ಬಳಿಕ ಈ ಗ್ಯಾಂಗ್ ಬಳಸಿದ್ದ ವಾಹನದ ಸಂಖ್ಯೆಯನ್ನು ಆಧರಿಸಿ ಪೊಲೀಸರು ಬೆನ್ನು ಬಿದ್ದಿದ್ದರು.
ಈ ವೇಳೆ ಗ್ಯಾಂಗ್ ವಾಹನಗಳನ್ನು ಬದಲಾಯಿಸಿದೆ, ಕೇರಳ -ತಮಿಳುನಾಡು ಗಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಗ್ಯಾಂಗ್ ಪೊಲೀಸರಿಗೆ ಕೈಗೆ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಕೆಲವರು ತಪ್ಪಿಸಿಕೊಂಡು ಪರಾರಿಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.
ಓದಿ: ಚಿಕ್ಕಮಗಳೂರು: ಪತ್ನಿಯ ಕಾಟಕ್ಕೆ ಬೇಸತ್ತ ಪತಿ ಬಾವಿಗೆ ಹಾರಿ ಆತ್ಮಹತ್ಯೆ