ಚೆನ್ನೈ (ತಮಿಳುನಾಡು): ಕಾಂಗ್ರೆಸ್ ಶಾಸಕರೊಬ್ಬರ ಒಡೆತನದ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಚೆನ್ನೈ ಪೊಲೀಸರು ದಾಳಿ ನಡೆಸಿ ಕೋಟಿಗೂ ಅಧಿಕ ಬೆಲೆಯ ಡ್ರಗ್ಸ್, ವಿದೇಶ ಮದ್ಯ ಮತ್ತು ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಓದಿ: ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ ಸೆ.491, 492ರ ನಿಬಂಧನೆಗಳ ಅನುಷ್ಠಾನ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ
ಮಾಹಿತಿ ಆಧಾರದ ಮೇಲೆ ತಾಂಬರಂ ಪೊಲೀಸ್ ಕಮಿಷನರ್ ಎಂ. ರವಿ ನೇತೃತ್ವದ ತಂಡ ಶನಿವಾರ ರಾತ್ರಿ ಚೆನ್ನೈನ ಇಸಿಆರ್‌ನಲ್ಲಿರುವ ಪನೈಯೂರ್‌ನ ರೆಸಾರ್ಟ್‌ವೊಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದರು. ಈ ರೆಸಾರ್ಟ್ ಕಾಂಗ್ರೆಸ್ ಪಕ್ಷದ ಶಾಸಕ ಹಸನ್ ಮೌಲಾನಾ ಅವರ ಒಡೆತನದಲ್ಲಿದೆ. ಬೆಳಗಿನ ಜಾವ 1 ಗಂಟೆಗೂ ಮೀರಿ ನಡೆದ ಈ ಪಾರ್ಟಿಯಲ್ಲಿ 500ಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದರು.
ಓದಿ: ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ ಸೆ.491, 492ರ ನಿಬಂಧನೆಗಳ ಅನುಷ್ಠಾನ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ
ಇದೇ ವೇಳೆ ಕಮಿಷನರ್ ರವಿ, ಖಿನ್ನತೆಯಿಂದ ಹೊರಬರಲು ಮಾದಕ ವ್ಯಸನಕ್ಕೆ ಒಳಗಾಗಬೇಡಿ ಎಂದು ಪಾರ್ಟಿಯಲ್ಲಿ ನೆರೆದಿದ್ದ ಯುವಕರಿಗೆ ಬುದ್ಧಿ ಹೇಳಿದರು. ಯುವಕರು ಇಂತಹ ಚಟುವಟಿಕೆಗಳಲ್ಲಿ ತೊಡಗುವ ಮುನ್ನ ಭವಿಷ್ಯದ ಬಗ್ಗೆ ಯೋಚಿಸಬೇಕು. ಈ ದಾಳಿಯಲ್ಲಿ ಕೊಕೇನ್, ಗಾಂಜಾ ಸೇರಿದಂತೆ ಡ್ರಗ್ಸ್, ವಿದೇಶಿ ಮದ್ಯ ಮತ್ತು ವಿದೇಶಿ ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.