ETV Bharat / bharat

ಉಗ್ರರ ಅಟ್ಟಹಾಸ: ಪೊಲೀಸ್ ಅಧಿಕಾರಿ ಹುತಾತ್ಮ, ಇಬ್ಬರು ಪೇದೆಗಳಿಗೆ ಗಾಯ - Srinagar militant attack

ಜಮ್ಮು- ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಪೊಲೀಸ್​ ಚೆಕ್​ಪೋಸ್ಟ್ ಮೇಲೆ ದಾಳಿ ನಡೆಸಿರುವ ಪರಿಣಾಮ ಓರ್ವ ಪೊಲೀಸ್​​ ಅಧಿಕಾರಿ ಹುತಾತ್ಮರಾಗಿದ್ದಾರೆ.

Policeman Killed in Srinagar
Policeman Killed in Srinagar
author img

By

Published : Jul 12, 2022, 8:01 PM IST

Updated : Jul 12, 2022, 8:14 PM IST

ಶ್ರೀನಗರ(ಜಮ್ಮು-ಕಾಶ್ಮೀರ): ಶ್ರೀನಗರದ ಲಾಲ್​ ಬಜಾರ್​ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿರುವ ಪರಿಣಾಮ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದು, ಉಳಿದಂತೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಲಾಲ್ ಬಜಾರ್‌ನಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ. ಗಾಯಗೊಂಡಿರುವ ಪೊಲೀಸರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶ್ರೀನಗರ ಪೊಲೀಸರು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

  • One police personnel succumbed to his injuries, and two others are undergoing treatment after terrorists fired upon police naka party at Lal Bazar area of Srinagar city: Jammu and Kashmir Police

    (Visuals deferred by unspecified time) pic.twitter.com/XlmbY6hrCh

    — ANI (@ANI) July 12, 2022 " class="align-text-top noRightClick twitterSection" data=" ">

ಲಾಲ್ ಬಜಾರ್ ಪ್ರದೇಶದ ಜಿಡಿ ಗೋಂಕಾ ಶಾಲೆಯ ಬಳಿ ಈ ದಾಳಿ ನಡೆದಿದೆ. ಮೃತ ಅಧಿಕಾರಿಯನ್ನ ಮುಷ್ತಾಕ್​​ ಅಹ್ಮದ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇಬ್ಬರು ಪೊಲೀಸರಲ್ಲಿ ಒರ್ವ ಹೆಡ್ ಕಾನ್‌ಸ್ಟೆಬಲ್ ಮತ್ತೋರ್ವ ಎಸ್‌ಪಿಒ ಆಗಿದ್ದಾರೆ. ಘಟನೆ ನಡೆದ ಸ್ಥಳವನ್ನ ಪೊಲೀಸರು ಸುತ್ತುವರೆದಿದ್ದಾರೆ.

Last Updated : Jul 12, 2022, 8:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.