ETV Bharat / bharat

ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವ ವೇಳೆ ಉಸಿರಾಡಿದ ಪೊಲೀಸ್​ ಅಧಿಕಾರಿ

author img

By ETV Bharat Karnataka Team

Published : Sep 20, 2023, 2:07 PM IST

ವೈದ್ಯರು ನಮ್ಮ ಮಗ ಸಾವನ್ನಪ್ಪಿರುವುದಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Police Officer Manpreeth
ಪೊಲೀಸ್​ ಅಧಿಕಾರಿ ಮನ್​ಪ್ರೀತ್​

ಪಂಜಾಬ್​: ಲೂಧಿಯಾನದಲ್ಲಿ ವೈದ್ಯರ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿಷಕಾರಿ ಕೀಟ ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಪೊಲೀಸ್​ ಅಧಿಕಾರಿಯೊಬ್ಬರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವ ವೇಳೆ ಬದುಕಿರುವ ಘಟನೆ ನಡೆದಿದೆ. ವೈದ್ಯರು ಮಗನ ಸಾವಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕುಟುಂಬದವರು ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.

ವಿಷಕಾರಿ ಕೀಟ ಕಚ್ಚಿರುವ ಪೊಲೀಸ್​ ಅಧಿಕಾರಿ ಮನ್​ಪ್ರೀತ್​ ಎಂಬವರನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಮನ್​ಪ್ರೀತ್​ ಅವರು ಕಚ್ಚಾರಿಯ ನಾಯಬ್​ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಸುತ್ತಿದ್ದರು.

ಘಟನೆಯ ಸಂಪೂರ್ಣ ವಿವರ: ಮನ್​ಪ್ರೀತ್​ ಎಂಬ ಪಂಜಾಬ್​ ಪೊಲೀಸ್ ಅಧಿಕಾರಿಗೆ ವಿಷಕಾರಿ ಕೀಟ ಕಚ್ಚಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಮನ್​ಪ್ರೀತ್​ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಂಬ್ಯುಲೆನ್ಸ್​ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ, ಮನ್​ಪ್ರೀತ್​ ದೇಹದಲ್ಲಿ ಚಲನವಲನ ಹಾಗೂ ನಾಡಿಮಿಡಿತವಿರುವುದು ಪೊಲೀಸರಿಗೆ ಗೊತ್ತಾಗಿದೆ. ಆಸ್ಪತ್ರೆಯ ಸಿಬ್ಬಂದಿ ಮನ್​ಪ್ರೀತ್​ ಸಾವನ್ನಪ್ಪಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇನ್ನೊಂದೆಡೆ, ಕುಟುಂಬದ ಆರೋಪವನ್ನು ತಳ್ಳಿ ಹಾಕಿರುವ ಆಸ್ಪತ್ರೆಯ ವೈದ್ಯರು, ಮನ್​ಪ್ರೀತ್​ ಅವರನ್ನು ಜೀವಂತವಾಗಿಯೇ ಅವರ ಕುಟುಂಬಕ್ಕೆ ಒಪ್ಪಿಸಲಾಗಿದೆ. ಆದರೆ ಅವರು ಬದುಕು ಸಾಧ್ಯತೆ ಇಲ್ಲ ಎಂದು ಮಾತ್ರ ಹೇಳಲಾಗಿತ್ತು ಎಂದಿದ್ದಾರೆ.

ಮನ್​ಪ್ರೀತ್​ ಅವರ ತಂದೆ, ಎಎಸ್​ಐ ಕೂಡ ಆಗಿರುವ ರಾಮ್​ ಜಿ ಮಾಧ್ಯಮದ ಜೊತೆ ಮಾತನಾಡಿ, ಮನ್​ಪ್ರೀತ್​ಗೆ ಇತ್ತೀಚೆಗೆ ವಿಷಕಾರಿ ಕೀಟವೊಂದು ಕಚ್ಚಿದ್ದು, ದೇಹದಲ್ಲಿ ಸೋಂಕು ಹೆಚ್ಚಾದ ಕಾರಣ ಅವನನ್ನು ಸೆಪ್ಟೆಂಬರ್​ 15 ರಂದು AIIMS ಬಸ್ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಕೆಲವು ಔಷಧ ನೀಡಿದರು. ಅದರಿಂದಾಗಿ ಆತನ ಕೈ ಉರಿತ ಹಾಗೂ ಊದಿಕೊಳ್ಳಲಾರಂಭಿಸಿತ್ತು. ವೈದ್ಯರು ಮಗನನ್ನು ವೆಂಟಿಲೇಟರ್​ನಲ್ಲಿ ಇರಿಸುವ ಅಗತ್ಯವಿದೆ ಎಂದು ಹೇಳಿ ಮೂರು ದಿನ ವೆಂಟಿಲೇಟರ್​ನಲ್ಲಿ ಇರಿಸಿದ್ದರು.

ಆದರೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಇರಲಿಲ್ಲ. ಹಾಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದೆವು. ಆದರೆ ವೈದ್ಯರು ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಪ್ರಾಣಕ್ಕೆ ಅಪಾಯವಿದೆ ಎಂದು ಬೇರೆ ಆಸ್ಪತ್ರೆಗೆ ಉಲ್ಲೇಖಿಸಲೂ ಕೂಡ ನಿರಾಕರಿಸಿದ್ದರು. ಸೆಪ್ಟೆಂಬರ್​ 18ರಂದು ರಾತ್ರಿ 2:30ರ ಸುಮಾರಿಗೆ ಆಸ್ಪತ್ರೆ ಸಿಬ್ಬಂದಿ ಮಗ ಸಾವನ್ನಪ್ಪಿದ್ದಾನೆ, ಬೆಳಗ್ಗೆ 9 ಗಂಟೆಗೆ ಮೃತದೇಹವನ್ನು ಹಸ್ತಾಂತರಿಸುತ್ತೇವೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ ಎಂದು ಹೇಳಿದರು.

ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವಾಗ ಉಸಿರಾಟ: ಮನ್​ಪ್ರೀತ್​ ಅವರು ಸರ್ಕಾರಿ ನೌಕರ. ಮರಣೋತ್ತರ ಪರೀಕ್ಷೆ ನಡೆಯಬೇಕು ಎಂದು ತಂದೆ ರಾಮ್​ ಜಿ ತಿಳಿಸಿದ್ದಾರೆ. ಇತರ ಪೊಲೀಸರ ನೆರವಿನೊಂದಿಗೆ ಮನ್​ಪ್ರೀತ್​ ಅವರನ್ನು ಆಂಬ್ಯುಲೆನ್ಸ್​ನಲ್ಲಿ ಇರಿಸಿದಾಗ ಇದ್ದಕ್ಕಿದ್ದಂತೆ ಒಬ್ಬ ನೌಕರನಿಗೆ ಮನ್​ಪ್ರೀತ್​ ಅವರು ಉಸಿರಾಟ ನಡೆಸುತ್ತಿರುವುದು ಗೊತ್ತಾಗಿದೆ. ಆಂಬ್ಯುಲೆನ್ಸ್​ನಲ್ಲಿ ಆಕ್ಸಿಜನ್​ ಸಿಲಿಂಡರ್​ ಇಡುವಂತೆ ಆಸ್ಪತ್ರೆ ಆಡಳಿತಕ್ಕೆ ಒತ್ತಾಯಿಸಿ, ಕೂಡಲೇ ಮಗನನ್ನು ಡಿಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ಇದೀಗ ಡಿಎಂಸಿಯಲ್ಲಿ ಮನ್​ಪ್ರೀತ್​ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಪಂಜಾಬ್‌ನಲ್ಲಿ ಕಾಲುವೆಗೆ ಬಿದ್ದ ಬಸ್; 8 ಪ್ರಯಾಣಿಕರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.