ETV Bharat / bharat

'ಆಕೆ ಕನಸಿನಲ್ಲಿ ಬಂದು ಕಾಡುತ್ತಿದ್ದಳು..': ನಿಗೂಢ ಕೊಲೆ ರಹಸ್ಯ ಪ್ರಕರಣ ಬೇಧಿಸಿದ ಪೊಲೀಸರು - ವಿಚಾರಣೆ ವೇಳೆ ನಿಜ ಸಂಗತಿ ಬಹಿರಂಗ

ನಿಗೂಢವಾಗಿದ್ದ ಯುವತಿ ನಾಪತ್ತೆ ಪ್ರಕರಣವನ್ನು ಬಗೆಹರಿಸುವಲ್ಲಿ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಕ್ಕೆ ಪ್ರಿಯಕರ ಆಕೆಯನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಂಗತಿ ಬೆಳಕಿಗೆ ಬಂದಿದೆ.

Korba missing girl case solved by police  Skeleton sent for DNA test in Korba  Accused Gopal Kheda killed victim Anju Yadav  Korba missing gril case in Chhattisgarh  ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು  ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಕ್ಕೆ ಕೊಲೆ  ನಿಗೂಢವಾಗಿದ್ದ ನಾಪತ್ತೆ ಪ್ರಕರಣ  ಕೊರ್ಬಾ ಜಿಲ್ಲೆಯ ಪೊಲೀಸರು ಯಶಸ್ವಿ  ಮಗಳೊಂದು ಮನೆಯಿಂದ ನಾಪತ್ತೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿ  ವಿಚಾರಣೆ ವೇಳೆ ನಿಜ ಸಂಗತಿ ಬಹಿರಂಗ  ಅಸ್ಥಿಪಂಜರ ವಶಕ್ಕೆ ಪಡೆದ ಪೊಲೀಸರು
ನಿಗೂಢವಾಗಿದ್ದ ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು
author img

By

Published : Jan 13, 2023, 8:24 AM IST

Updated : Jan 13, 2023, 11:47 AM IST

ಕೊರ್ಬಾ (ಛತ್ತೀಸ್​ಗಢ): ನಗರದ ರಾಂಪುರ ಹೊರಠಾಣೆ ವ್ಯಾಪ್ತಿಯಲ್ಲಿ 8 ತಿಂಗಳ ಹಿಂದೆ ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರ ಆರಂಭಿಕ ತನಿಖೆಯಲ್ಲಿ ಪ್ರೇಮದ ವಿಷಯ ಬಯಲಿಗೆ ಬಂದಿತ್ತು. ತನಿಖೆಯಲ್ಲಿ ಪ್ರಗತಿಯಾಗುತ್ತಿದ್ದಂತೆ ದೊರೆತ ಸಾಕ್ಷ್ಯವು ಕಾಣೆಯಾದ ಹುಡುಗಿಯ ಗೆಳೆಯನ ಬಳಿಗೆ ಪೊಲೀಸರನ್ನು ಕರೆದೊಯ್ದಿತ್ತು.

ವಿಚಾರಣೆಯಲ್ಲಿ ತಿಳಿದುಬಂದ ನಿಜ ಸಂಗತಿ ಏನು?: ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಮದುವೆಯ ವಿಚಾರವಾಗಿ ಗೆಳತಿಯೊಂದಿಗೆ ಮಾತನಾಡುವಾಗ ಆಕೆಯನ್ನು ವೇಲ್​ನಿಂದ ಕೊಲೆ ಮಾಡಿದ್ದೆ. ಮೃತದೇಹವನ್ನು ಕಾಡಿನಲ್ಲಿ ಮಣ್ಣು ಮಾಡಿದ್ದಾಗಿ ವಿವರಿಸಿದ್ದಾನೆ. ಪೊಲೀಸರು ನೆಲೆ ಅಗೆಸಿ ಆಕೆಯ ಅಸ್ಥಿಪಂಜರವನ್ನು ಹೊರತೆಗೆದಿದ್ದಾರೆ. ಬಾಲಕಿಯ ಕುಟುಂಬ ಸದಸ್ಯರು ಕಾಲುಂಗುರದ ಆಧಾರದಲ್ಲಿ ಮಗಳನ್ನು ಗುರುತಿಸಿದ್ದಾರೆ.

ಪ್ರಕರಣದ ಮತ್ತಷ್ಟು ವಿವರ: ರಾಂಪುರ ಹೊರಠಾಣೆ ಸರಹದ್ದಿನಲ್ಲಿ ವಾಸಿಸುತ್ತಿದ್ದ 24 ವರ್ಷದ ಅಂಜು ಯಾದವ್ ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾಗಿದ್ದಾಳೆಂದು ತಾಯಿ ರಾಂಪುರ ಚೌಕಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತೀಚೆಗೆ ನಾಪತ್ತೆಯಾಗಿರುವ ಅಂಜು ಅವರ ತಾಯಿ ಮತ್ತೆ ಎಸ್ಪಿಗೆ ದೂರು ನೀಡಿ, ಪತ್ತೆಗೆ ಮನವಿ ಮಾಡಿದ್ದರು. ಪೊಲೀಸರು ಮತ್ತೆ ಪ್ರಕರಣದ ತನಿಖೆ ಆರಂಭಿಸಿದ್ದರು. ಈ ಮೂಲಕ ಮಹತ್ವದ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.

ಕೊಲೆ ಆರೋಪಿ ಹೇಳಿದ್ದೇನು?: 8 ತಿಂಗಳ ಹಿಂದೆ ಮಗಳು ಅಂಜು ನಾಪತ್ತೆಯಾಗಿದ್ದಳು. ಈ ಬಗ್ಗೆ ಯುವತಿಯ ತಾಯಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದಾಗ ಗೋಪಾಲ್ ಖಾಡಿಯಾ ಎಂಬಾತನೇ ಆರೋಪಿ ಎಂದು ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ಮಾಹಿತಿ ನೀಡಿದರು.

ಎರಡು ತಿಂಗಳ ಕಾಲ ಜೊತೆಗಿದ್ದರು: ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾದ ಬಳಿಕವೂ ಅಂಜು ಮತ್ತು ಪ್ರಿಯಕರ ಗೋಪಾಲ್ ಎರಡು ತಿಂಗಳ ಕಾಲ ಒಟ್ಟಿಗಿದ್ದರು. ಇಬ್ಬರೂ ಗೋಪಾಲ್ ಖಾದಿಯಾ ಅವರ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದರು. ಯುವತಿಯ ಕುಟುಂಬ ಸದಸ್ಯರಿಗೆ ಈ ವಿಷಯ ತಿಳಿದಿರಲಿಲ್ಲ. ಇದಾದ ಬಳಿಕ ಯುವತಿಯು ತನ್ನನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಳಂತೆ. ಇದರಿಂದ ಕೋಪಗೊಂಡ ಗೋಪಾಲ್, ಅಂಜುಳನ್ನು ಆಕೆಯ ವೇಲ್​ನಿಂದಲೇ ಕೊಲೆ ಮಾಡಿದ್ದಾನೆ. ಮೃತದೇಹವನ್ನು ಧೇಳವಾಡಿಯ ಅರಣ್ಯದಲ್ಲಿ ಹೂತು ಹಾಕಿದ್ದಾನೆ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ಮಾಧ್ಯಮಕ್ಕೆ ವಿವರಿಸಿದರು.

ಆರೋಪಿ ನೀಡಿದ ಮಾಹಿತಿಯಂತೆ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸಮಾಧಿ ತೋಡಿ ಪೊಲೀಸರು ಅಸ್ಥಿಪಂಜರವನ್ನು ವಶಪಡಿಸಿಕೊಂಡಿದ್ದಾರೆ. ಮಗಳನ್ನು ಕುಟುಂಬಸ್ಥರು ಆಕೆಯ ಕಾಲುಂಗುರಗಳ ಆಧಾರದಲ್ಲಿ ಗುರುತಿಸಿದ್ದಾರೆ. ಗೋಪಾಲ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಸ್ಥಿಪಂಜರವನ್ನು ಡಿಎನ್ಎ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

'ಆಕೆ ನನಗೆ ಕನಸಿನಲ್ಲಿ ಕಾಡುತ್ತಿದ್ದಳು': ಪೊಲೀಸ್ ವಿಚಾರಣೆಯಲ್ಲಿ, ಗೆಳತಿಯನ್ನು ಕೊಂದ ಬಳಿಕ ಗೋಪಾಲ್​ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಆಕೆ ನಿರಂತರವಾಗಿ ಕನಸಿನಲ್ಲಿ ಬರುತ್ತಿದ್ದು, ದೆವ್ವವಾಗಿ ಹೆದರಿಸುತ್ತಿದ್ದಳು ಎಂದೂ ಹೇಳಿದ್ದಾನೆ. ಇದರಿಂದ ಮಾನಸಿಕವಾಗಿಯೂ ಗೋಪಾಲ್​ ನೊಂದಿದ್ದ ಎಂಬೆಲ್ಲ ವಿಚಾರಗಳು ಪೊಲೀಸ್ ತನಿಖೆಯಿಂದ ಬಯಲಾಗಿವೆ.

ಇದನ್ನೂ ಓದಿ: ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ: ಕುರಿಗಾಯಿ ನೆರವಿಂದ ಮಗು ರಕ್ಷಣೆ, ಇಬ್ಬರು ನಾಪತ್ತೆ

Last Updated : Jan 13, 2023, 11:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.