ETV Bharat / bharat

ಕೇರಳ ಬಾಲಕಿಯರ ಮಿಸ್ಸಿಂಗ್​ ಕೇಸ್​: ಮತ್ತೋರ್ವ ಹುಡುಗಿ ಮಂಡ್ಯದಲ್ಲಿ ಪತ್ತೆ

ಕೇರಳದ ಕೋಯಿಕ್ಕೋಡ್​ನಲ್ಲಿರುವ ಸರ್ಕಾರಿ ಚಿಲ್ಡ್ರನ್​ ಹೋಂನಿಂದ ಬಾಲಕಿಯರ ನಾಪತ್ತೆ ಪ್ರಕರಣದ ಸಂಬಂಧ ಇದೀಗ ಮತ್ತೊಬ್ಬ ಹುಡುಗಿ ಪತ್ತೆಯಾಗಿದ್ದಾಳೆ.

author img

By

Published : Jan 28, 2022, 1:34 PM IST

Police find one more girl who went missing from Kozhikode Children's Home
ಕೇರಳ ಬಾಲಕಿಯರ ಮಿಸ್ಸಿಂಗ್​ ಕೇಸ್

ಕೋಯಿಕ್ಕೋಡ್​ (ಕೇರಳ): ಬಾಲಕಿಯರ ನಾಪತ್ತೆ ಪ್ರಕರಣ ಸಂಬಂಧ ಆರು ಹುಡುಗಿಯರ ಪೈಕಿ ಮತ್ತೊಬ್ಬ ಬಾಲಕಿ ರಾಜ್ಯದ ಮಂಡ್ಯದಲ್ಲಿ ಪತ್ತೆಯಾಗಿದ್ದಾಳೆ. ನಿನ್ನೆಯಷ್ಟೇ ಓರ್ವ ಬಾಲಕಿ ಬೆಂಗಳೂರಿನಲ್ಲಿ ಸಿಕ್ಕಿದ್ದಳು.

ಪ್ರಕರಣದ ಹಿನ್ನೆಲೆ: ಗಣರಾಜ್ಯೋತ್ಸವ ದಿನದಂದು ಕೇರಳದ ಕೋಯಿಕ್ಕೋಡ್​ನಲ್ಲಿರುವ ಸರ್ಕಾರಿ ಚಿಲ್ಡ್ರನ್​ ಹೋಂನಿಂದ 15 ರಿಂದ 17 ವರ್ಷದೊಳಗಿನ ಒಟ್ಟು ಆರು ಬಾಲಕಿಯರು ಅಲ್ಲಿಂದ ನಾಪತ್ತೆಯಾಗಿದ್ದರು. ಆದರೆ, ತನಿಖೆ ವೇಳೆ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಕ್ಕಿದೆ. ಏಕೆಂದರೆ ಇವರನ್ನು ಯಾರೋ ಅಪಹರಣ ಮಾಡಿರಲಿಲ್ಲ. ಬದಲಾಗಿ ಇವರೇ ಅಲ್ಲಿಂದ ಎಸ್ಕೇಪ್​ ಆಗಿದ್ದರು.

ಈ ಹುಡುಗಿಯರು ಗಣರಾಜ್ಯೋತ್ಸವದ ನಿಮಿತ್ತ, ಕಾರ್ಯಕ್ರಮ ನಡೆಯುವ ವೇಳೆ ಏಣಿ ಸಹಾಯದಿಂದ ಚಿಲ್ಡ್ರನ್​ ಹೋಂ ಅಡುಗೆ ಮನೆಯ ಗೋಡೆ​​ ಹತ್ತಿ ಪರಾರಿಯಾಗಿದ್ದರು. ಅಲ್ಲಿಂದ ರೈಲಿನ ಮೂಲಕ ಗುರುವಾರ (ಜನವರಿ 27) ಮಧ್ಯಾಹ್ನ ಬೆಂಗಳೂರಿಗೆ ಬಂದು ಇಬ್ಬರು ಯುವಕರ ಸಹಾಯದಿಂದ ಮಡಿವಾಳದ ಹೋಟೆಲ್​​ವೊಂದರಲ್ಲಿ ತಂಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ತಮ್ಮ ಮೊಬೈಲ್​ ಪೋನ್​ಗಳು ಕಳ್ಳತನವಾಗಿದೆ, ನಮ್ಮ ಬಳಿ ಬೇರೆ ಐಡಿ ಕಾರ್ಡ್​ಗಳು ಇಲ್ಲ ಎಂದು ಹೋಟೆಲ್​ ಸಿಬ್ಬಂದಿ ಬಳಿ ಹೇಳಿಕೊಂಡಿದ್ದಾರೆ.

ಅಷ್ಟರಲ್ಲಾಗಲೇ ಬಾಲಕಿಯರು ಬೆಂಗಳೂರು ತಲುಪಿರುವುದಾಗಿ ಕೇರಳ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಹೀಗಾಗಿ ಕೇರಳದ ಆರು ಹುಡುಗಿಯರು ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಎಲ್ಲ ಹೋಟೆಲ್​​ಗಳಿಗೆ ಕರೆ ಮಾಡಿ ಮಲಯಾಳಿ ಅಸೋಸಿಯೇಷನ್ ​​ಸದಸ್ಯರು ತಿಳಿಸಿದ್ದಾರೆ.

ಹೀಗಾಗಿ ಅನುಮಾನಗೊಂಡ ಮಡಿವಾಳದ ಹೋಟೆಲ್​ ಸಿಬ್ಬಂದಿ ಪೊಲೀಸರಿಗೆ ಹಾಗೂ ಮಲಯಾಳಿ ಅಸೋಸಿಯೇಷನ್​ಗೆ ಕರೆ ಮಾಡಿ ತಮ್ಮ ಹೋಟೆಲ್​ಗೆ ಆರು ಹುಡುಗಿಯರು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಹೋಟೆಲ್​​ನ ಭದ್ರತಾ ಸಿಬ್ಬಂದಿ ಗೇಟ್ ಅನ್ನು ಮುಚ್ಚಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ 6 ಬಾಲಕಿಯರ ನಾಪತ್ತೆ ಪ್ರಕರಣ: ಓರ್ವ ಬಾಲಕಿ ಬೆಂಗಳೂರಲ್ಲಿ ಪತ್ತೆ

ಇದನ್ನು ಅರಿತ ಆರು ಬಾಲಕಿಯರ ಪೈಕಿ ಐವರು ಹೋಟೆಲ್​ ಕಾಂಪೌಂಡ್​ ಹತ್ತಿ ಪರಾರಿಯಾಗಿದ್ದಾರೆ. ಒಬ್ಬ ಹುಡುಗಿ ಮಾತ್ರ ಸಿಕ್ಕಿಬಿದ್ದಿದ್ದು, ಆಕೆಯನ್ನು ​ಕೋಯಿಕ್ಕೋಡ್​ಗೆ ಪೊಲೀಸರು ಮರಳಿ ಕರೆತಂದಿದ್ದಾರೆ. ಇನ್ನೋರ್ವ ಹುಡುಗಿ ಇಂದು ಮಂಡ್ಯದಲ್ಲಿ ಸಿಕ್ಕಿದ್ದು, ಆಕೆ ಮೈಸೂರಿನಿಂದ ಕೋಯಿಕ್ಕೋಡ್​ಗೆ ತೆರಳಲು ಮುಂದಾಗಿದ್ದಳು ಎಂಬುದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ ಉಳಿದ ನಾಲ್ವರು ಹೆಚ್ಚು ದೂರ ಹೋಗಿಲ್ಲ. ಅವರ ಬಳಿ ಹಣವಿಲ್ಲದ ಕಾರಣ ಸಿಕ್ಕ ಸಿಕ್ಕವರ ಬಳಿ ದುಡ್ಡು ಕೇಳಿ ಬೇರೆ ಸ್ಥಳಗಳಿಗೆ ಹೋಗಲು ಪ್ಲಾನ್​ ಮಾಡುತ್ತಿದ್ದಾರೆ. ಶೀಘ್ರದಲ್ಲೇ ನಾಲ್ವರನ್ನೂ ಪತ್ತೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಲಕಿಯರಿಗೆ ಸಹಾಯ ಮಾಡಿದ ಇಬ್ಬರು ಯುವಕರನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕರು ತ್ರಿಶೂರ್ ಮತ್ತು ಕೊಲ್ಲಂ ಮೂಲದವರಾಗಿದ್ದು, ರೈಲಿನಲ್ಲಿ ಬಾಲಕಿಯರು ಪರಿಚಯವಾಗಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ಮತ್ತೊಂದು ವಿಚಾರ ಎಂದರೆ, ಈ ಆರು ಹುಡುಗಿಯರ ಪೈಕಿ ಇಬ್ಬರು ಸಹೋದರಿಯರು ಗಣರಾಜ್ಯೋತ್ಸವದ ಮುನ್ನಾ ದಿನ ಅಂದರೆ ಜನವರಿ 25ರಂದು ಚಿಲ್ಡ್ರನ್​ ಹೋಂ ಸೇರಿಕೊಂಡಿದ್ದರು. ಉಳಿದ ನಾಲ್ವರು ಕೂಡ ಅಲ್ಲಿ ಸೇರಿ ಒಂದು ತಿಂಗಳು ಕೂಡ ಆಗಿರಲಿಲ್ಲ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.