ನವದೆಹಲಿ: ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರ ಪ್ರಕರಣದಲ್ಲಿ ನಟ - ಕಾರ್ಯಕರ್ತ ದೀಪ್ ಸಿಧು ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರು ಗುರುವಾರ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗಜೇಂದ್ರ ಸಿಂಗ್ ನಾಗರ ಅವರು ಜೂನ್ 19ರಂದು ಮಧ್ಯಾಹ್ನ 2 ಗಂಟೆಗೆ ತಾಜಾ ಚಾರ್ಜ್‌ಶೀಟ್‌ನ ಆದೇಶ ರವಾನಿಸಲಿದ್ದಾರೆ.
ಜನವರಿ 26ರಂದು, ಪ್ರತಿಭಟನಾ ನಿರತ ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು ಮತ್ತು ಕೆಂಪು ಕೋಟೆಗೆ ನುಗ್ಗಿ ಹಲವಾರು ಪೊಲೀಸರನ್ನು ಗಾಯಗೊಳಿಸಿದ್ದರು.
ಪ್ರಕರಣದ ತನಿಖೆ ನಡೆಸುವ ಕಾರ್ಯವನ್ನು ಕ್ರೈಂ ಬ್ರಾಂಚ್‌ಗೆ ವಹಿಸಲಾಗಿದೆ. ಮೇ 17ರಂದು 3,224 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿ, ಸಿಧು ಸೇರಿದಂತೆ 16 ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕ್ರೈಂ ಬ್ರಾಂಚ್ ಕೋರಿತ್ತು. ಹಿಂಸಾಚಾರದ ಪ್ರಮುಖ ಸಂಚುಕೋರನೆಂದು ಆರೋಪಿಸಲ್ಪಟ್ಟಿದ್ದ ಸಿಧುನನ್ನು ಫೆಬ್ರವರಿ 9ರಂದು ಬಂಧಿಸಲಾಯಿತು. ಕೆಂಪು ಕೋಟೆಯಲ್ಲಿನ ಘರ್ಷಣೆಗೆ ಆತ ಉತ್ತೇಜನ ನೀಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದರು.