ETV Bharat / bharat

VIDEO : ರಾತ್ರೋರಾತ್ರಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಪೊಲೀಸರು - ಮಹಿಳಾ ಮನೆಗೆ ನುಗ್ಗಿದ ಪೊಲೀಸರು

ರೋಹ್ಟಾಸ್​​ನ ಭಡ್ಸಾಹಳ್ಳಿಗೆ ಸಂಬಂಧಿಸಿರುವ ಘಟನೆ ಇದಾಗಿದೆ. ಗ್ರಾಮದ ರಂಜಿತ್ ಯಾದವ್​​ ಅಕ್ರಮವಾಗಿ ಮರಳು ತುಂಬಿದ್ದ ಟ್ರ್ಯಾಕ್ಟರ್​​ ತೆಗೆದುಕೊಂಡು ಹೋಗಿರುವ ಆರೋಪವಿದೆ. ಇದರಿಂದ ಆಕ್ರೋಶಗೊಂಡಿರುವ ಪೊಲೀಸರು, ಯಾವುದೇ ರೀತಿಯ ಅರೆಸ್ಟ್​ ವಾರಂಟ್​ ಹಾಗೂ ಮಹಿಳಾ ಕಾನ್ಸ್​​ಟೇಬಲ್​ ಇಲ್ಲದೇ ರಂಜಿತ್​ ಯಾದವ್​ ಮನೆಗೆ ನುಗ್ಗಿದ್ದಾರೆ..

Bihar crime news
Bihar crime news
author img

By

Published : Oct 13, 2021, 5:17 PM IST

ರೋಹ್ಟಾಸ್​(ಬಿಹಾರ): ರಾತ್ರಿ ವೇಳೆ ಏಕಾಏಕಿ ಮನೆಯೊಂದಕ್ಕೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಸಿಬ್ಬಂದಿ, ಆಕೆಯ ಕೂದಲು ಹಿಡಿದು ಎಳೆದಾಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ವೈರಲ್​ ಆಗಿದೆ. ಬಿಹಾರದ ರೋಹ್ಟಾಸ್​​ನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಅನುಚಿತ ವರ್ತನೆಗೆ ಇದೀಗ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ.

ರಾತ್ರೋರಾತ್ರಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಪೊಲೀಸರು..

ರೋಹ್ಟಾಸ್​​ನ ಭಡ್ಸಾಹಳ್ಳಿಗೆ ಸಂಬಂಧಿಸಿರುವ ಘಟನೆ ಇದಾಗಿದೆ. ಗ್ರಾಮದ ರಂಜಿತ್ ಯಾದವ್​​ ಅಕ್ರಮವಾಗಿ ಮರಳು ತುಂಬಿದ್ದ ಟ್ರ್ಯಾಕ್ಟರ್​​ ತೆಗೆದುಕೊಂಡು ಹೋಗಿರುವ ಆರೋಪವಿದೆ. ಇದರಿಂದ ಆಕ್ರೋಶಗೊಂಡಿರುವ ಪೊಲೀಸರು, ಯಾವುದೇ ರೀತಿಯ ಅರೆಸ್ಟ್​ ವಾರಂಟ್​ ಹಾಗೂ ಮಹಿಳಾ ಕಾನ್ಸ್​​ಟೇಬಲ್​ ಇಲ್ಲದೇ ರಂಜಿತ್​ ಯಾದವ್​ ಮನೆಗೆ ನುಗ್ಗಿದ್ದಾರೆ.

ಈ ವೇಳೆ ಮಹಿಳೆಯರು ಮಾತ್ರ ಮನೆಯಲ್ಲಿದ್ದರು. ಅವರೊಂದಿಗೆ ಅನುಚಿತವಾಗಿ ವರ್ತಿಸಿರುವ ಪೊಲೀಸರು, ಅವರನ್ನ ನಿಂದಿಸಿ, ಥಳಿಸಿದ್ದಾರೆ. ಇದರ ವಿಡಿಯೋವನ್ನ ಮಹಿಳೆಯೋರ್ವಳು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾಳೆ. ಈ ವೇಳೆ ಆಕೆಯ ಮೊಬೈಲ್​​ ಕಸಿದುಕೊಳ್ಳುವ ಪ್ರಯತ್ನ ಸಹ ಮಾಡಲಾಗಿದೆ.

ಇದನ್ನೂ ಓದಿರಿ: ಮಾಡೆಲ್​​ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು.. ಆಸ್ಪತ್ರೆಗೆ ದಾಖಲು

ಘಟನೆ ವೇಳೆ SHO ಅಜಯ್ ಕುಮಾರ್​, AMI ಉಮಾ ಕಾಂತ್ ಮಿಶ್ರಾ ಹಾಗೂ ಕೆಲ ಪೊಲೀಸ್​ ಕಾನ್ಸ್​​​ಸ್ಟೇಬಲ್​ಗಳು ಉಪಸ್ಥಿತರಿದ್ದರು. ಘಟನೆಯ ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಉನ್ನತಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.