ತಿರುಪತಿ (ಆಂಧ್ರಪ್ರದೇಶ): ಆಂಧ್ರದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ತಿರುಪತಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ತೂರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹಾಜರಾಗಲು ಚಂದ್ರಬಾಬು ನಾಯ್ಡು ಹೋಗುತ್ತಿದ್ದರು. ಈ ವೇಳೆ ಏರ್ಪೋರ್ಟ್ನಲ್ಲೇ ರೇನಿಗುಂಟಾ ಪೊಲೀಸರು ತಡೆದಿದ್ದಾರೆ. ಇದನ್ನು ಖಂಡಿಸಿದ ನಾಯ್ಡು, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಲು ಕುಳಿತಿದ್ದಾರೆ. ಈ ವೇಳೆ ರೇನಿಗುಂಟಾ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಭಾರತ ಬಹು ಸಂಸ್ಕೃತಿ ದೇಶ.. ಪ್ರಧಾನಿಯವರೇ, ಎಲ್ಲರನ್ನೂ ಗೌರವಿಸಿ : ಪಿಎಂ ವಿರುದ್ಧ ರಾಹುಲ್ ವಾಗ್ದಾಳಿ
ಯಾಕೆ ನಿರ್ಬಂಧಿಸುತ್ತಿದ್ದೀರಿ? ಬೇಕಾದರೆ ನನ್ನನ್ನು ಬಂಧಿಸಿ. ಇಲ್ಲಿ ಏನು ನಡೆಯುತ್ತಿದೆ? ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತಿದ್ದೇನಾ? ಎಂದು ಚಂದ್ರಬಾಬು ನಾಯ್ಡು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.