ETV Bharat / bharat

ಎಲ್​ಜಿ ಭೇಟಿಯಾಗಲು ಬಂದ ಯದುವೀರ್ ಸಿಂಗ್ ವಶಕ್ಕೆ ಪಡೆದ ಪೊಲೀಸ್..! - ಸಿವಿಲ್ ಲೈನ್ಸ್ ಮೆಟ್ರೋ

ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಏಳು ತಿಂಗಳನ್ನು ಪೂರೈಸಿದೆ. ಈ ಹಿನ್ನೆಲೆ ರಾಷ್ಟ್ರಾದ್ಯಂತ ರೈತರು ರಾಷ್ಟ್ರಪತಿಗೆ ಜ್ಞಾಪಕ ಪತ್ರ ಸಲ್ಲಿಸಲು ರಾಜ್ ಭವನವನ್ನು ತಲುಪಲು ಪ್ರಯತ್ನಿಸುತ್ತಿರುವುದರಿಂದ ಎಲ್​ಜಿ ಹೌಸ್​ಗೆ ಭದ್ರತೆ ಹೆಚ್ಚಿಸಲಾಗಿದೆ. ವರದಿಗಳ ಪ್ರಕಾರ, ಕೆಲವು ರೈತರನ್ನು ದೆಹಲಿ ಗಡಿಯಲ್ಲಿ ತಡೆ ಹಿಡಿಯಲಾಗಿದೆ.

Yudhvir Singh
Yudhvir Singh
author img

By

Published : Jun 26, 2021, 6:17 PM IST

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್​​ಗೆ ಜ್ಞಾಪಕ ಪತ್ರ ಹಸ್ತಾಂತರಿಸಲು ನವದೆಹಲಿಗೆ ತಲುಪಿದ ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಯದುವೀರ್ ಸಿಂಗ್ ಮತ್ತು ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಲ್​ಜಿ ಭೇಟಿಯಾಗಲು ಬಂದ ಯದುವೀರ್ ಸಿಂಗ್ ವಶಕ್ಕೆ ಪಡೆದ ಪೊಲೀಸ್..!

ಸಿವಿಲ್ ಲೈನ್ಸ್ ಮೆಟ್ರೋ ನಿಲ್ದಾಣದ ಹೊರಗೆ ಸಿಂಗ್​ರನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೂ ಮುನ್ನ ಪ್ರತಿಕ್ರಿಯಿಸಿರುವ ಯದುವೀರ್ ಸಿಂಗ್, ನಾನು ಶಾಂತಿಯುತವಾಗಿ ಎಲ್​ಜಿ ಅವರನ್ನು ಭೇಟಿ ಮಾಡಲು ಬಂದಿದ್ದೆ ಎಂದರು.

ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಏಳು ತಿಂಗಳನ್ನು ಪೂರೈಸಿದೆ. ಈ ಹಿನ್ನೆಲೆ ರಾಷ್ಟ್ರದಾದ್ಯಂತದ ರೈತರು ರಾಷ್ಟ್ರಪತಿಗೆ ಜ್ಞಾಪಕ ಪತ್ರ ಸಲ್ಲಿಸಲು ರಾಜ ಭವನಕ್ಕೆ ಬರಲು ಪ್ರಯತ್ನಿಸುತ್ತಿರುವುದರಿಂದ ಎಲ್​ಜಿ ಹೌಸ್​ಗೆ ಭದ್ರತೆ ಹೆಚ್ಚಿಸಲಾಗಿದೆ. ವರದಿಗಳ ಪ್ರಕಾರ, ಕೆಲವು ರೈತರನ್ನು ದೆಹಲಿ ಗಡಿಯಲ್ಲಿ ತಡೆ ಹಿಡಿಯಲಾಗಿದೆ.

ಶುಕ್ರವಾರವಷ್ಟೇ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮಧ್ಯಪ್ರದೇಶದಲ್ಲಿ ಮಾತನಾಡಿ, ಕಾನೂನುಗಳ ಅಡಿಯಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧ ಎಂದು ಹೇಳಿದರು. ಈ ವಿಷಯದ ಬಗ್ಗೆ ರೈತರ ಯಾವುದೇ ಪ್ರಸ್ತಾಪವು ನನ್ನ ಬಳಿಗೆ ಬಂದರೆ, ಅದನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲು ನಾನು ಸಿದ್ಧ ಎಂದಿದ್ದರು. ರೈತರು ಆಂದೋಲನವನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಸಚಿವರು ಸಂಯುಕ್ತ ಕಿಸಾನ್​ ಮೋರ್ಚಾಗೆ ಮನವಿ ಮಾಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರ ಸಿದ್ಧವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.