ಮಂಡಿ (ಹಿಮಾಚಲ ಪ್ರದೇಶ): ಅತಿದೊಡ್ಡ ಅಫೀಮು ಗಿಡಗಳ ಪ್ಲಾಂಟ್ ಅನ್ನು ನಾಶಮಾಡುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಚೌಹಾರ್ ಕಣಿವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಫೀಮು ಬೆಳೆದಿರುವ ಕುರಿತು ಮಂಡಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಹಿನ್ನೆಲೆ ದಾಳಿ ನಡೆಸಿದಾಗ ಬೃಹತ್ ಜಾಗದಲ್ಲಿ 15 ಲಕ್ಷ ಮೌಲ್ಯದ ಅಫೀಮು ಬೆಳದಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ಜಮೀನಿನಲ್ಲೇ ಬೆಳೆದಿದ್ದರು ಅಫೀಮು
ಇಲ್ಲಿನ ಡ್ರಾಂಗ್ ಪ್ರದೇಶದ ಸರ್ಕಾರಿ ಹಾಗೂ ಖಾಸಗಿ ಭೂಮಿಯಲ್ಲಿಯೇ ಅಫೀಮು ಬೆಳೆದಿದ್ದರು. ಇದರ ಮೌಲ್ಯ ಸುಮಾರು 15 ಲಕ್ಷ ಎಂದು ಅಂದಾಜಿಸಲಾಗಿದ್ದು, ಅದನ್ನು ನಾಶ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಎನ್ಡಿಪಿಎಸ್ ಕಾಯ್ದೆಯಡಿ 4 ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.