ETV Bharat / bharat

ಮಹಿಳಾ ಸಹೋದ್ಯೋಗಿಯ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪೊಲೀಸ್​ ಕಾನ್ಸ್​ಟೇಬಲ್ - ಮಹಿಳಾ ಸಹೋದ್ಯೋಗಿಯ ಹತ್ಯೆ

ಪೊಲೀಸ್​ ಕಾನ್ಸ್​ಟೇಬಲ್​ರೊಬ್ಬರು ಮಹಿಳಾ ಕಾನ್ಸ್​ಟೇಬಲ್​ಗೆ ಗುಂಡಿಕ್ಕಿ ಹತ್ಯೆಗೈದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್​ನ ಫಿರೋಜ್​ಪುರ ಜಿಲ್ಲೆಯಲ್ಲಿ ಜರುಗಿದೆ.

Etv Bharat
Etv Bharat
author img

By

Published : Jan 29, 2023, 6:42 PM IST

ಫಿರೋಜ್‌ಪುರ (ಪಂಜಾಬ್​): ಪಂಜಾಬ್​ನ ಫಿರೋಜ್​ಪುರ ಜಿಲ್ಲೆಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಪೊಲೀಸ್​ ಕಾನ್ಸ್​ಟೇಬಲ್​ರೊಬ್ಬರು ಮಹಿಳಾ ಕಾನ್ಸ್​ಟೇಬಲ್​ಗೆ ಗುಂಡಿಕ್ಕಿ ಹತ್ಯೆಗೈದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆಯಾದ ಮಹಿಳಾ ಕಾನ್ಸ್​ಟೇಬಲ್​ ಅವರನ್ನು ಅಮನ್‌ದೀಪ್ ಕೌರ್ ಎಂದು ಗುರುತಿಸಲಾಗಿದೆ. ಈ ಕೊಲೆ ನಂತರ ಕಾನ್ಸ್​ಟೇಬಲ್​ ಗುರುಸೇವಕ್ ಸಿಂಗ್​​ ಎಂಬಾತನೇ ಆತ್ಮಹತ್ಯೆಗೆ ಶರಣಾದವರು.

ಫಿರೋಜ್‌ಪುರದ ಶೇರ್ ಷಾ ವಾಲಿ ಪೀರ್ ಚೌಕ್‌ನಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಹತ್ಯೆಯಾದ ಅಮನ್‌ದೀಪ್ ಕೌರ್ ಕಂಟೋನ್ಮೆಂಟ್​ ಫಿರೋಜ್‌ಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಲವಾಂಡಿ ಭಾಯ್​ ಚೌಕ್‌ ಪೊಲೀಸ್​ ಠಾಣೆಯಲ್ಲಿ ಗುರುಸೇವಕ್ ಸಿಂಗ್​​ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ರಾತ್ರಿ ಏಕಾಏಕಿ ಬಂದು ಅಮನ್‌ದೀಪ್ ಕೌರ್​ರನ್ನು ಗುರುಸೇವಕ್ ಸಿಂಗ್ ಹತ್ಯೆ ಮಾಡಿದ್ದಾರೆ.

ಇಷ್ಟಕ್ಕೂ ನಡೆದಿದ್ದೇನು?: ಶನಿವಾರ ತಡರಾತ್ರಿ ಮಹಿಳಾ ಕಾನ್ಸ್​ಟೇಬಲ್ ಅಮನ್‌ದೀಪ್ ಕೌರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದರು. ಸ್ಕೂಟಿ ಮೇಲೆ ತೆರಳುತ್ತಿದ್ದ ಅಮನ್‌ದೀಪ್ ಕೌರ್​ ಶೇರ್ ಶಾ ವಾಲಿ ಪೀರ್ ಚೌಕ್​ಗೆ ತಲುಪಿದಾಗ ಗುರುಸೇವಕ್ ಸಿಂಗ್ ಕಾರಿನಲ್ಲಿ ಬಂದಿದ್ದಾರೆ. ಆಗ ಮೊದಲಿಗೆ ಗುರುಸೇವಕ್ ಸಿಂಗ್, ಅಮನ್‌ದೀಪ್ ಕೌರ್ ಪ್ರಯಾಣಿಸುತ್ತಿದ್ದ ಸ್ಕೂಟಿಗೆ ಹೊಡೆದಿದ್ದಾರೆ. ನಂತರ ಕಾರಿನಿಂದ ಕೆಳಗಿಳಿದು ಅಮನ್‌ದೀಪ್ ಕೌರ್ ಮೇಲೆ ಗುರುಸೇವಕ್ ಸಿಂಗ್ ಐದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಾದ ಬಳಿಕ ಆರೋಪಿ ಗುರುಸೇವಕ್ ಸಿಂಗ್​ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೊಂದೆಡೆ, ಗುಂಡೇಟು ತಿಂದು ನೆಲಕ್ಕೆ ಬಂದಿದ್ದ ಅಮನ್​ದೀಪ್ ಕೌರ್ ಅವರನ್ನು ಸ್ಥಳೀಯರು ಗಮನಿಸಿ ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲೇ ಅಮನ್​ದೀಪ್ ಕೌರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇನ್ನೊಂದೆಡೆ, ಪೊಲೀಸ್ ಪೇದೆ ಗುರುಸೇವಕ್ ಸಿಂಗ್ ತಲವಾಂಡಿ ಚೌಕ್‌ಗೆ ತೆರಳಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾರಣ ನಿಗೂಢ: ಪೊಲೀಸ್​ ಕಾನ್ಸ್​ಟೇಬಲ್ ಗುರುಸೇವಕ್ ಸಿಂಗ್​​, ತಮ್ಮ ಸಹೋದ್ಯೋಗಿಯಾದ ಅಮನ್‌ದೀಪ್ ಕೌರ್ ಅವರನ್ನು ಕೊಲೆ ಮಾಡಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಗುರುಸೇವಕ್ ಸಿಂಗ್​ 2011ರಲ್ಲಿ ಪಂಜಾಬ್ ಪೊಲೀಸ್​ ಇಲಾಖೆಗೆ ಸೇರಿದ್ದರು. ಅಲ್ಲದೇ, ಈಗಾಗಲೇ ಮದುವೆಯಾಗಿದ್ದ ಗುರುಸೇವಕ್ ಸಿಂಗ್​ಗೆ ಒಂದು ಮಗು ಕೂಡ ಇದೆ. ಅಮನ್​ದೀಪ್ ಕೌರ್ ಮತ್ತು ಗುರುಸೇವಕ್ ಸಿಂಗ್ ನಡುವೆ ಏನು ಸಂಬಂಧ ಹಾಗೂ ಈ ಘಟನೆ ಕಾರಣವೇನು ಎಂಬುದು ನಿಗೂಢವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ನವೀನ್​ ಕುಮಾರ್, ಮಹಿಳಾ ಕಾನ್ಸ್​ಟೇಬಲ್ ಅಮನ್‌ದೀಪ್ ಕೌರ್ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಗುರುಸೇವಕ್ ಸಿಂಗ್ ಹತ್ಯೆ ಮಾಡಿದ್ದಾರೆ. ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಘಟನೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಇಬ್ಬರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಡಿಶಾ ಆರೋಗ್ಯ ಸಚಿವರ ಮೇಲೆ ಗುಂಡು ಹಾರಿಸಿದ ASI: ಆರೋಗ್ಯ ಪರಿಸ್ಥಿತಿ ಚಿಂತಾಜನಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.