ETV Bharat / bharat

'ಕ್ಷಮಿಸು ತಾಯಿ ಕ್ಷಮಿಸು'..ಸೂಸೈಡ್​ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್​​ - ಪುಣೆ ಪೊಲೀಸ್ ಕಾನ್ಸ್​ಟೇಬಲ್​

ಸೂಸೈಡ್​​ ನೋಟ್​ ಬರೆದಿಟ್ಟು ಕಾನ್ಸ್​ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪುಣೆಯ ರಾಜ್​ಗಢ್​ದಲ್ಲಿ ನಡೆದಿದೆ.

police constable
police constable
author img

By

Published : Jun 22, 2021, 10:01 PM IST

Updated : Jun 23, 2021, 1:34 AM IST

ಪುಣೆ: ರಾಜ್​ಗಢ್​ ಪೊಲೀಸ್​ ಠಾಣೆಯಲ್ಲಿ ಕಾನ್ಸ್‌ಟೇಬಲ್​ ಆಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುಂಚಿತವಾಗಿ ಸೂಸೈಡ್​ ನೋಟ್​ ಬರೆದಿಟ್ಟಿದ್ದು, ಅದರಲ್ಲಿ ಕ್ಷಮಿಸು ತಾಯಿ ಎಂದು ಕೇಳಿಕೊಂಡಿದ್ದಾನೆ.

ಗ್ರಾಮೀಣ ಪೊಲೀಸ್ ಠಾಣೆ ಕಾನ್ಸ್‌ಟೇಬಲ್​ ಆಗಿದ್ದ ಮೊಹಮ್ಮದ್​ ಮಾನೇರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಂದಾಪುರ ತಾಲೂಕಿನವರಾಗಿದ್ದು, ಸದ್ಯ ರಾಜ್​ಗಢ್​​ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ರಕ್ತನಾಳ ಕತ್ತರಿಸಿಕೊಳ್ಳುವ ಮೂಲಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿರಿ: Live Video: ಪೊಲೀಸರು-ಮರಳು ಮಾಫಿಯಾ ಗ್ಯಾಂಗ್​ ನಡುವೆ ಗುಂಡಿನ ವಾರ್​

ಕಳೆದ ಕೆಲ ದಿನಗಳಿಂದ ಮೊಹಮ್ಮದ್​ ಕುಟುಂಬದ ಫೋನ್​ ಕಾಲ್​ ಸ್ವೀಕಾರ ಮಾಡಿಲ್ಲ. ಇದರಿಂದ ಕುಟುಂಬಸ್ಥರು ಹಾಗೂ ಸಂಬಂಧಿ ಆತಂಕಕ್ಕೊಳಗಾಗಿದ್ದರು. ಇದರ ಬೆನ್ನಲ್ಲೇ ಆತ ವಾಸವಾಗಿದ್ದ ಗ್ರಾಮಕ್ಕೆ ಭೇಟಿ ನೀಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಯಾವ ಕಾರಣಕ್ಕಾಗಿ ಆತ ಈ ನಿರ್ಧಾರ ಕೈಗೊಂಡಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Last Updated : Jun 23, 2021, 1:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.