ETV Bharat / bharat

'ಪಾಪ್​​ಕಾರ್ನ್'​ ಕಳೆದು ಹೋಗಿದ್ದಕ್ಕೆ ಪೊಲೀಸರಿಗೆ ದೂರು.. ರಾಜಸ್ಥಾನದಲ್ಲೊಂದು ವಿಚಿತ್ರ ಪ್ರಕರಣ!

author img

By ETV Bharat Karnataka Team

Published : Aug 27, 2023, 3:19 PM IST

ಸಾಕುನಾಯಿಯ ಅಪಹರಣವಾಗಿದೆ ಎಂಬಂತೆ ಬಿಂಬಿಸಿ ನಾಯಿ ತರಬೇತುದಾರನೇ ನಾಯಿ ಕಳವು ಮಾಡಿದ ಪ್ರಕರಣವನ್ನು ಜೈಪುರ ಪೊಲೀಸರು ಪತ್ತೆ ಮಾಡಿದ್ದಾರೆ.

police-complaint-lodged-for-missing-popcorn

ಜೈಪುರ (ರಾಜಸ್ಥಾನ): ಪಾಪ್​​ಕಾರ್ನ್​ ಕಳೆದು ಹೋಗಿದ್ದಕ್ಕೆ ಮಹಿಳೆಯೊಬ್ಬಳು ದುಃಖದಲ್ಲಿ ನಾಲ್ಕು ದಿನ ಊಟ ಬಿಟ್ಟಿರುವ ಹಾಗೂ ಆ ಪಾಪ್​ಕಾರ್ನ್​ ಹುಡುಕಲು ಪೊಲೀಸರು ಹರಸಾಹಸ ಪಟ್ಟ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ. ಆದರೆ ಈ ವಿಚಿತ್ರ ಪ್ರಕರಣದಲ್ಲಿ ನಡೆದಿರುವುದೇನೆಂದರೆ ಪಾಪ್​ಕಾರ್ನ್​ ಎಂಬುದು ಒಂದು ಸಾಕುನಾಯಿಯಾಗಿದೆ ಹಾಗೂ ಕಳೆದು ಹೋದ ನಾಯಿಯನ್ನು ಕೊನೆಗೂ ಪೊಲೀಸರು ಹುಡುಕಿದ್ದಾರೆ.

ಈ ವಿಚಿತ್ರ ಪಾಪ್​ಕಾರ್ನ್​ ಪ್ರಕರಣ ನಡೆದಿರುವುದು ಜೈಪುರ್​ನ ಮಾಲವೀಯ ನಗರ ಪ್ರದೇಶದಲ್ಲಿ. ಇಲ್ಲಿನ ಮಾಡೆಲ್ ಟೌನ್ ನಿವಾಸಿ ಅನಿತಾ ಜೋತ್ವಾನಿ ಎಂಬುವರ ಸಾಕುನಾಯಿ 4 ದಿನಗಳ ಹಿಂದೆ ಕಳೆದು ಹೋಗಿತ್ತು. ಹೀಗಾಗಿ ಅವರು ಆಗಸ್ಟ್​ 23 ರಂದು ನಾಯಿ ಕಳೆದಿರುವ ಬಗ್ಗೆ ಮಾಲವೀಯ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ನಾಯಿ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು.

ತನ್ನ ಸಾಕುನಾಯಿ ಪಾಪ್​ಕಾರ್ನ್​ ಅನ್ನು ಶ್ವಾನ ತರಬೇತುದಾರ ರಂಜೀತ್ ಯಾದವ್ ಎಂಬುವರು ಸುತ್ತಾಡಿಸಲು ಕರೆದುಕೊಂಡು ಹೋಗಿದ್ದರು. ಆದರೆ ಅವರು ವಾಪಸ್ ಬಂದಾಗ ನಾಯಿ ಅವರ ಜೊತೆ ಇರಲಿಲ್ಲ. ನಾಯಿಯ ಜೊತೆಗೆ ಫೋಟೊ ತೆಗೆಸಿಕೊಳ್ಳುವ ನೆಪದಲ್ಲಿ ಕಾರಿನಲ್ಲಿ ಬಂದ ಇಬ್ಬರು ಯುವಕರು ನಾಯಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ರಂಜೀತ್ ಯಾದವ್ ಹೇಳಿದ್ದಾಗಿ ದೂರಿನಲ್ಲಿ ತಿಳಿಸಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಯುವಕರಿಬ್ಬರು ನಾಯಿಯನ್ನು ತೆಗೆದುಕೊಂಡು ಪರಾರಿಯಾಗಿರುವುದನ್ನು ಹತ್ತಿರದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಮೂಲಕ ಪತ್ತೆ ಮಾಡಿದ್ದರು. ಆದರೆ ಯುವಕರು ನಾಯಿಯನ್ನು ತೆಗೆದುಕೊಂಡು ಹೋಗುವಾಗ ನಾಯಿ ತರಬೇತುದಾರ ಯಾವುದೇ ಪ್ರತಿರೋಧ ತೋರದಿರುವುದು ಪೊಲೀಸರಿಗೆ ಸಂಶಯ ಮೂಡಿಸಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.

ನಾಯಿ ಅಪಹರಿಸಿದ ಯುವಕರೊಂದಿಗೆ ಶಾಮೀಲಾಗಿ ತರಬೇತುದಾರನೇ ನಾಯಿಯನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಕೊನೆಗೂ ಸಾಕುನಾಯಿ ಪಾಪ್​ಕಾರ್ನ್​ ಅನ್ನು ಪತ್ತೆ ಮಾಡಿ ಪೊಲೀಸರು ಮಹಿಳೆಗೆ ಒಪ್ಪಿಸಿದ್ದಾರೆ. ಇನ್ನು ನಾಯಿ ಕಳವು ಮಾಡಲು ಉಪಯೋಗಿಸಿದ ನಂಬರ್ ಪ್ಲೇಟ್​ ಇಲ್ಲದ ಕಾರು ಸಹ ಪತ್ತೆಯಾಗಿದೆ. ಸದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಯುವಕರು ಪರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಮಾಲವೀಯ ನಗರ ಪೊಲೀಸ್ ಠಾಣೆ ಅಧಿಕಾರಿ ಪೂನಂ ಚೌಧರಿ, ಒಂಟಿ ಮಹಿಳೆ ಅನಿತಾ ಜೋತ್ವಾನಿ ತನ್ನ ನಾಯಿಯ ಬಗ್ಗೆ ತುಂಬಾ ಪ್ರೀತಿ ಹೊಂದಿದ್ದಾರೆ. ಅವರ ಬಳಿ ಇಂಥ ಎರಡು ನಾಯಿಗಳಿದ್ದು, ಅದರಲ್ಲಿ ಒಂದು ಕಳುವಾಗಿತ್ತು. ಸದ್ಯ ಕಳುವಾದ ನಾಯಿ ಸುರಕ್ಷಿತವಾಗಿದೆ. ಕಳ್ಳತನ ಮಾಡಿದ ಯುವಕರೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನದ ಮೇಲೆ ಶ್ವಾನ ತರಬೇತುದಾರ ರಂಜಿತ್ ಯಾದವ್ ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಬ್ಬರು ಯುವಕರಿಗಾಗಿ ಶೋಧ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಿವಾಹವಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ₹64 ಲಕ್ಷ ವಂಚನೆ: ಮಂಗಳೂರು ಸೆನ್ ಪೊಲೀಸರಿಗೆ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.