ಒಡಿಶಾ : ಯಾಸ್ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಒಡಿಶಾ, ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಭಾರೀ ಹಾನಿ ಮಾಡುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವ ಬೆನ್ನಲ್ಲೆ ಹಲವೆಡೆ ಗಾಳಿ ಸಹಿತ ಮಳೆಯಾಗುತ್ತಿದೆ.
ಈಗಾಗಲೇ ಮುಂಜಾಗೃತಾ ಕ್ರಮವಾಗಿ ಸ್ಥಳೀಯರನ್ನ ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ. ಚಂಡಮಾರುತದಿಂದ ಒಡಿಶಾದ ಕೇಂದ್ರಪಾಡ ಜಿಲ್ಲೆಗೆ ಹಾನಿಯಾಗುವ ಸಂಭವ ಹೆಚ್ಚಿರುವುದರಿಂದ ಈ ಪ್ರದೇಶದಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ.
ಇಲ್ಲಿನ ತಲ್ಚುವಾ ಪ್ರದೇಶದಲ್ಲಿ ವಾಸವಿದ್ದ 91 ವರ್ಷದ ಹಿರಿಯ ಅಜ್ಜಿಯನ್ನ ಪೊಲೀಸರು ಹೆಗಲ ಮೇಲೆ ಹೊತ್ತು ಸುರಕ್ಷಿತ ಜಾಗಕ್ಕೆ ರವಾನಿಸಿದ್ದಾರೆ.
ಈಗಾಗಲೇ ಇಲ್ಲಿನ ಎನ್ಡಿಆರ್ಎಫ್ ಹಾಗೂ ವೈದ್ಯಕೀಯ ಸಿಬ್ಬಂದಿ ತಂಡ ಬಿಡುಬಿಟ್ಟಿದ್ದು, ಹಾನಿಯಾಗಬಹುದಾದ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲಾಗಿದೆ.
ಇತ್ತ ಜಗತ್ಸಿಂಗ್‌ಪುರ ಜಿಲ್ಲೆಯ ಬಂದರು ಪಟ್ಟಣವಾದ ಪರಡಿಪ್ನಲ್ಲಿ ಕಳೆದ 24 ಗಂಟೆಯಲ್ಲಿ 151.5 ಮಿ.ಮೀ ಮಳೆಯಾಗಿದೆ, ಭದ್ರಾಕ್ ಜಿಲ್ಲೆಯಲ್ಲಿ 97 ಮಿ.ಮೀ ಮಳೆಯಾಗಿದೆ ಮುಂದೆ ಈ ಪ್ರಮಾಣ ಏರಿಕೆಯಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಯಾಸ್ ಚಂಡಮಾರುತ : ಮೇ 26 ರಂದು ದಿಘಾ ಕರಾವಳಿ ಅಪ್ಪಳಿಸುವ ಸಾಧ್ಯತೆ