ETV Bharat / bharat

Watch Video: ಯೋಧ ಮಾಸ್ಕ್​ ಹಾಕಿಲ್ಲವೆಂದು ಈ ರೀತಿ ಥಳಿಸಿದ ಪೊಲೀಸ್​​! - ಮಾಸ್ಕ್​ ವಿಚಾರ

ಯೋಧನೋರ್ವ ಮಾಸ್ಕ್​ ಹಾಕಿಲ್ಲವೆಂದು ಪೊಲೀಸರು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

POLICE BRUTALLY BEAT UP AN ARMY MAN
POLICE BRUTALLY BEAT UP AN ARMY MAN
author img

By

Published : Sep 2, 2021, 4:16 AM IST

ಛತ್ರ(ಜಾರ್ಖಂಡ್​): ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನೋರ್ವ ಮಾಸ್ಕ್​ ಹಾಕಿಲ್ಲವೆಂದು ಆತನ ಮೇಲೆ ಪೊಲೀಸರು ಗೂಂಡಾ ವರ್ತನೆ ತೋರಿರುವ ಘಟನೆ ಜಾರ್ಖಂಡ್​ನ ಛತ್ರ ಪ್ರದೇಶದಲ್ಲಿ ನಡೆದಿದ್ದು, ಇದೀಗ ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಯೋಧ ಮಾಸ್ಕ್​ ಹಾಕಿಲ್ಲವೆಂದು ಈ ರೀತಿ ಥಳಿಸಿದ ಪೊಲೀಸ್​​!

ಜಾರ್ಖಂಡ್​ನ ಛತ್ರ ಎಂಬಲ್ಲಿ ಮಾಸ್ಕ್​ ತಪಾಸಣೆ ಅಭಿಯಾನ ನಡೆಸಲಾಗುತ್ತಿತ್ತು. ಈ ವೇಳೆ ಭಾರತೀಯ ಯೋಧನೋರ್ವ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದು, ಆತ ಮಾಸ್ಕ್​ ಹಾಕಿರಲಿಲ್ಲ ಎನ್ನಲಾಗಿದೆ. ತಕ್ಷಣವೇ ಆತನನ್ನ ತಡೆ ಹಿಡಿದಿರುವ ಪೊಲೀಸರು ಬೈಕ್​​ನ ಕೀ ತೆಗೆದುಕೊಂಡು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತನ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಚಾಕುವಿನಿಂದ ಹಲ್ಲೆ... ಆಸ್ಪತ್ರೆಗೆ ದಾಖಲು!

ಈ ಘಟನೆ ನೋಡಿರುವ ಕೆಲವರು ಪ್ರತಿಭಟಿಸಲು ಶುರು ಮಾಡುತ್ತಿದ್ದಂತೆ ಆತನನ್ನ ಪೊಲೀಸ್ ಠಾಣೆಗೆ ಕರೆದೊಯ್ದುದ್ದಾರೆ. ಇದರ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಗೊತ್ತಾಗಿ ಠಾಣೆಗೆ ನುಗ್ಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಪೊಲೀಸ್​ ವರಿಷ್ಠಾಧಿಕಾರಿ ರಾಕೇಶ್ ರಂಜನ್​​ ತನಿಖೆ ನಡೆಸುವಂತೆ ಆದೇಶಿಸಿ, ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಘಟನೆಯಲ್ಲಿ ಹಲ್ಲೆಗೊಳಗಾದ ಯೋಧನನ್ನ ಪವನ್​ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಮೂವರು ಪೊಲೀಸ್​ ಸಿಬ್ಬಂದಿ ಹಾಗೂ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಿ ಆದೇಶ ಸಹ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.