ಬುಡ್ಗಾಮ್:(ಜಮ್ಮು ಕಾಶ್ಮೀರ್) ನಿಷೇಧಿತ ಭಯೋತ್ಪಾದಕ ಲಷ್ಕರ್ ಎ ತೊಯ್ಬಾ ಸಂಘಟನೆಯೊಂದಿಗೆ (ಎಲ್‌ಇಟಿ) ನಿಕಟ ಸಂಪರ್ಕ ಹೊಂದಿದ್ದ ಐವರು ಭಯೋತ್ಪಾದಕ ಶಂಕಿತ ಉಗ್ರರನ್ನು ಬುಡ್ಗಾಮ್ ಜಿಲ್ಲೆಯ ವ್ಯಾಪ್ತಿಯಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚಣೆ ನಡೆಸಿ, ಬಂಧಿಸಿದ್ದಾರೆ. ಬಂಧಿತ ಭಯೋತ್ಪಾದಕ ಶಂಕಿತ ಉಗ್ರರಿಂದ ಮಾರಕ ಶಸ್ತ್ರಾಸ್ತಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಹಾಗೂ ಸೇನಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರನ್ನು ಬುಡ್ಗಾಮ್ ಜಿಲ್ಲೆಯ ಖಾಗ್ ಪ್ರದೇಶದಲ್ಲಿ ಶರಣಾಗತಿ ಆಗಿದ್ದಾರೆ. ಬಂಧಿತರನ್ನು ಭಟಂಗನ್ ಖಾಗ್ ನಿವಾಸಿ ಅಬ್ದುಲ್ ಮಜೀದ್ ವಾನಿ ಅವರ ಪುತ್ರ ರೂಫ್ ಅಹ್ಮದ್ ವಾನಿ, ಬತ್ತಿಪೋರ ಖಾಗ್ ನಿವಾಸಿ ಗುಲಾಮ್ ಹಸನ್ ಮಲಿಕ್ ಅವರ ಪುತ್ರ ಹಿಲಾಲ್ ಅಹ್ಮದ್ ಮಲಿಕ್, ನೌರೋಜ್ ಬಾಬಾ ಖಾಗ್ ನಿವಾಸಿ ನಜೀರ್ ಅಹ್ಮದ್ ದಾರ್ ಅವರ ಪುತ್ರ ತೌಫೀಕ್ ಅಹ್ಮದ್ ದಾರ್, ದಾನಿಶ್ ಅಹ್ಮದ್ ದಾರ್ ಅವರ ಪುತ್ರ ಎಂದು ಗುರುತಿಸಲಾಗಿದೆ.
ದಾರ್ ಮೊಹಲ್ಲಾ ನವ್ರೂಜ್ ಬಾಬಾ ಖಾಗ್ ನಿವಾಸಿ ಮಂಜೂರ್ ಅಹ್ಮದ್ ದಾರ್ ಮತ್ತು ಬಥಿಪೋರಾ ಖಾಗ್ ನಿವಾಸಿ ಅಲಿ ಮೊಹಮ್ಮದ್ ದಾರ್ ಅವರ ಪುತ್ರ ಶೋಕತ್ ಅಲಿ ದಾರ್ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ತನಿಖೆ ಮುಂದುವರಿದಿದ್ದು, ಶಂಕಿತ ಉಗ್ರರಿಂದ ವಶಕ್ಕೆ ಪಡೆದ ಹಲವಾರು ಮಾರಕ ವಸ್ತುಗಳು, ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿದೆ. ಜಿಲ್ಲೆಯ ಠಾಣಾ ಖಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದ ಐವರ ಶಂಕಿತರನ್ನು ಬಂಧಿಸಿದ್ದಕ್ಕೆ ಸೇನಾಧಿಕಾರಿಗಳು ಭದ್ರತಾ ಪಡೆಗೆ ಧನ್ಯವಾದ ಅರ್ಪಿಸಿದ್ದಾರೆ.
ಸೇನಾ ನೇಮಕಾತಿ ದಂಧೆ ನಡೆಸುತ್ತಿದ್ದ ನಕಲಿ ಸೇನಾಧಿಕಾರಿ ಬಂಧನ: ಭಾರತೀಯ ಸೇನೆಯ ಕರ್ನಲ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಸೇನಾ ನೇಮಕಾತಿ ದಂಧೆ ನಡೆಸುತ್ತಿದ್ದ ನಕಲಿ ಸೇನಾಧಿಕಾರಿಯನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ವ್ಯಾಪ್ತಿ ಪ್ರದೇಶದಲ್ಲಿ ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ಸ್ (XXXIII ಕಾರ್ಪ್ಸ್) ಮತ್ತು ಸಿಲಿಗುರಿ ಪೊಲೀಸ್ ಕಮಿಷನ ರೇಟ್‌ನ ಗುಪ್ತಚರ ವಿಭಾಗವು ಬಂಧಿಸುವಲ್ಲಿ ಯಶಸ್ವಿಯಾಗಿದೆ. ದಲ್‌ಚಂದ್ ವರ್ಮಾ ಎಂಬ ನಕಲಿ ಕರ್ನಲ್ ಬಂಧಿತ ಆರೋಪಿ.
ಪೊಲೀಸ್ ಮೂಲಗಳ ಪ್ರಕಾರ, ನಕಲಿ ಸೇನಾಧಿಕಾರಿ ಬಹಳ ದಿನಗಳಿಂದ ಸೇನೆಯ ಕರ್ನಲ್ ಎಂದು ನಟಿಸಿ ಹಣ ಪಡೆದು ವಂಚಿಸುತ್ತಿರುವ ಆರೋಪ ಕೇಳಿ ಬಂದಿತ್ತು. ಬಳಿಕ ದಂಧೆಯ ಬಗ್ಗೆ ಮಾಹಿತಿ ಪಡೆದು ಭಾರತೀಯ ಸೇನೆಯು ಸಿಲಿಗುರಿ ಪೊಲೀಸ್ ಕಮಿಷನರೇಟ್ ಅನ್ನು ಸಂಪರ್ಕಿಸಿದೆ. ನಂತರ ಸಿಲಿಗುರಿ ಪೊಲೀಸ್ ಕಮಿಷನರೇಟ್ನ ಭಕ್ತಿನಗರ ಪೊಲೀಸ್ ಠಾಣೆಯ ಪೊಲೀಸರು ಭಾರತೀಯ ಸೇನೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ದಲ್‌ಚಂದ್ ವರ್ಮಾ ಎಂಬ ನಕಲಿ ಕರ್ನಲ್ನನ್ನು ಬಂಧಿಸಿದ್ದಾರೆ. ಈತ ಸಿಕ್ಕಿಂನ ಗ್ಯಾಂಗ್‌ಟಾಕ್‌ನ ನಿವಾಸಿಯಾಗಿದ್ದಾನೆ. ಆರೋಪಿ ತನ್ನನ್ನು ಭಾರತೀಯ ಸೇನೆಯ ಆರ್ಟಿಲರಿ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಎಂದು ಹೇಳಿಕೊಂಡು ವಂಚಿಸುತ್ತಿದ್ದನು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:ಕೇರಳದಲ್ಲಿ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: 6 ಮಂದಿ ತಪ್ಪಿತಸ್ಥರೆಂದು NIA ವಿಶೇಷ ಕೋರ್ಟ್ ತೀರ್ಪು