ETV Bharat / bharat

ನಿಧಿ ಹುಡಿಕಿಕೊಡುವುದಾಗಿ ನಂಬಿಸಿ 11 ಮಂದಿಯ ಸರಣಿ ಹತ್ಯೆ ಮಾಡಿದ ಹಂತಕ ಅಂದರ್​!

ಅಮಾಯಕರಿಗೆ ಕ್ಷುದ್ರ ಪೂಜೆ ಮೂಲಕ ನಿಧಿ ಹುಡಿಕಿಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿ ಬಳಿಕ ಹತ್ಯೆ ಮಾಡುತ್ತಿದ್ದ ಆರೋಪಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

author img

By ETV Bharat Karnataka Team

Published : Dec 13, 2023, 10:44 PM IST

Police arrested Serial Killer who killed 11 people in  Nagar Kurnool
ನಿಧಿ ಹುಡಿಕಿಕೊಡುವುದಾಗಿ ನಂಬಿಸಿ 11 ಮಂದಿಯ ಸರಣಿ ಹತ್ಯೆ ಮಾಡಿದ ಹಂತಕ ಅಂದರ್​!

ನಾಗರಕರ್ನೂಲ್(ತೆಲಂಗಾಣ): ಕ್ಷುದ್ರ ಪೂಜೆ ಮೂಲಕ ನಿಧಿ ಹುಡಿಕಿಕೊಡುವುದಾಗಿ ನಂಬಿಸಿ 11 ಜನರನ್ನು ಕ್ರೂರವಾಗಿ ಹತ್ಯೆ ಮಾಡಿರುವ ಆರೋಪಿಯನ್ನು ನಾಗರಕರ್ನೂಲ್ ಪೊಲೀಸರು ಬಂಧಿಸಿದ್ದಾರೆ. ನಾಗರಕರ್ನೂಲ್ ಪಟ್ಟಣದ ಇಂದಿರಾನಗರ ಕಾಲೋನಿ ನಿವಾಸಿ ರಮತಿ ಸತ್ಯನಾರಾಯಣ ಅಲಿಯಾಸ್ ಸತ್ಯಂ ಯಾದವ್ (47) ಬಂಧಿತ ಆರೋಪಿ.

ಈ ಕುರಿತು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜೋಗುಲಾಂಬ ಗದ್ವಾಲ ವಲಯದ ಡಿಐಜಿ ಎಲ್.ಎಸ್.ಚೌಹಾಣ್, "ಬಂಧಿತ ಆರೋಪಿ ಕ್ಷುದ್ರ ಪೂಜೆಯ ಮೂಲಕ ಗುಪ್ತ ನಿಧಿ ಹುಡುಕಿಕೊಡುವುದಾಗಿ ಹೇಳಿ ಅಮಾಯಕರನ್ನು ನಂಬಿಸಿ ಅವರ ಆಸ್ತಿಗಳನ್ನು ತನ್ನ ಹೆಸರಿಗೆ ನೋಂದಾಯಿಸಿಕೊಂಡು ವಂಚಿಸುತ್ತಿದ್ದ. ನಂತರ ಸಂತ್ರಸ್ತರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದಾಗ ನಿಧಿ ಪತ್ತೆಗೆ ಕ್ಷುದ್ರ ಪೂಜೆ(ಮಾಟಮಂತ್ರ) ಮಾಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದ. ಬಳಿಕ ಅವರಿಗೆ ತೀರ್ಥದ ರೂಪದಲ್ಲಿ ಎಮ್ಮೆ ಹಾಲಿಗೆ ವಿಷಕಾರಿ ರಾಸಾಯನಿಕಗಳನ್ನು ಬೆರೆಸಿ ಕೊಡುತ್ತಿದ್ದ. ಅವರು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಾಗ ಆರೋಪಿ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡುತ್ತಿದ್ದ. ಆರೋಪಿ 2020 ದಿಂದ ಇಲ್ಲಿಯವೆರಗೂ 8 ಪ್ರಕರಣಗಳಲ್ಲಿ ಒಟ್ಟು 11 ಜನರನ್ನು ಕೊಲೆ ಮಾಡಿದ್ದಾನೆ " ಎಂದು ಹೇಳಿದರು.

2020ರಲ್ಲಿ ವನಪರ್ತಿ ಜಿಲ್ಲೆಯ ರೇವಳ್ಳಿ, 2021ರಲ್ಲಿ ಕೊಲ್ಹಾಪುರದಲ್ಲಿ, 2022ರಲ್ಲಿ ನಾಗರಕರ್ನೂಲ್​, 2023ರಲ್ಲಿ ಕಲ್ವಕುರ್ತಿ, ನಾಗರಕರ್ನೂಲ್, ಬಳಗಾನೂರು ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆದ್ದವಾಡಗೂರು ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ತಲಾ ಒಬ್ಬೊಬ್ಬರನ್ನು ಹತ್ಯೆ ಮಾಡಿದ್ದ. ಕೊಲೆಯಾದವರೆಲ್ಲರೂ ನಾಗರ್ ಕರ್ನೂಲ್ ಮತ್ತು ವನಪರ್ತಿ ಜಿಲ್ಲೆಗಳಿಗೆ ಸೇರಿದವರು. ಆರೋಪಿಯಿಂದ 8 ಮೊಬೈಲ್ ಫೋನ್​ಗಳು, 10 ಸಿಮ್ ಕಾರ್ಡ್ ಗಳು, ವಿಷಕಾರಿ ರಾಸಾಯನಿಕಗಳನ್ನು ಹೊಂದಿರುವ 5 ಬಾಟಲಿಗಳು, 5 ವಿದ್ಯುತ್ ಡಿಟೋನೇಟರ್​ಗಳು, ಮೃತರಿಗೆ ಸೇರಿದ ಒಂದು ಕಾರು ಮತ್ತು 5 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಒಂದೇ ಪ್ಲಾಟ್ ಅನ್ನು ಇಬ್ಬರು ವ್ಯಕ್ತಿಗಳಿಗೆ ಮಾರಾಟ ಮಾಡಿದ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಇದೆ. ಸತ್ಯಂ ಯಾದವ್​ನ ವಿಚಾರಣೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಮತ್ತೆ ತನಿಖೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.

ಆರೋಪಿ ಕೃತ್ಯಗಳು ಬೆಳಕಿಗೆ ಬಂದಿದ್ದು ಹೇಗೆ?: ವನಪರ್ತಿ ಜಿಲ್ಲೆಯ ಎಸ್ಟೇಟ್ ವ್ಯಾಪಾರಿ ವೆಂಕಟೇಶ್ ಎಂಬುವವರು, ನಾಗರಕರ್ನೂಲ್‌ನಲ್ಲಿರುವ ಸತ್ಯಂ ಯಾದವ್ ಅವರನ್ನು ಭೇಟಿಯಾಗಲು ಹೋಗಿ ಐದು ದಿನಗಳು ಕಳೆದರೂ ಮನೆಗೆ ಹಿಂತಿರುಗಿಲಿಲ್ಲ. ಇದರಿಂದ ಆತಂಕಗೊಂಡ ಪತ್ನಿ ಲಕ್ಷ್ಮಿ ನಾಗರಕರ್ನೂಲ್ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ನವೆಂಬರ್ 26 ರಂದು ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯಲ್ಲಿ ಸತ್ಯಂ ಯಾದವ್ ಅವರ ನಡುವಳಿಕೆ ಅನುಮಾನಾಸ್ಪದವಾಗಿ ಕಂಡು ಬಂದಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.

ಪೂಜೆ ಮಾಡುವ ನೆಪದಲ್ಲಿ ಕರೆದುಕೊಂಡು ಕೊಲೆ: ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಸತ್ಯಂ ಯಾದವ್ ನಿಧಿ ಪತ್ತೆ ಹಚ್ಚುವುದಾಗಿ ಸಹ ವ್ಯಾಪಾರಿಗಳಿಗೆ ಹೇಳುತ್ತಿದ್ದರು. ಇದನ್ನು ನಂಬಿದ ವೆಂಕಟೇಶ್ ತನ್ನ ಸ್ನೇಹಿತರೊಂದಿಗೆ ನಿಧಿಗೆ ಹುಡಿಕಿಕೊಡುವಂತೆ ಆರೋಪಿಗೆ ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿಸಿದ ಆರೋಪಿ, ಈ ಪ್ರಕ್ರಿಯೆಯಲ್ಲಿ ವೆಂಕಟೇಶ್ ಮಾತ್ರ ನನ್ನನ್ನು ಸಂಪರ್ಕಿಸಬೇಕು ಎಂಬ ಷರತ್ತಿನೊಂದಿಗೆ ಹಣ ಪಡೆದುಕೊಂಡಿದ್ದ. ನಂತರ ನಿಧಿ ಹುಡುಕಲು ಮೂವರು ಗರ್ಭಿಣಿಯರನ್ನು ಬಲಿ ಕೊಡಬೇಕು ಎಂದು ವೆಂಕಟೇಶ್​ಗೆ ಹೇಳಿದಾಗ ಆತ ಭಯಗೊಂಡು ನನಗೆ ನಿಧಿ ಬೇಡ ನಾವು ನೀಡಿದ ಹಣ ವಾಪಸ್ ಕೊಡುವಂತೆ ಹೇಳಿದ್ದರು. ಇದರೊಂದಿಗೆ ಸತ್ಯಂ ಯಾದವ್ ಡಿಸೆಂಬರ್ 4 ರಂದು ಪೂಜೆ ನೆಪದಲ್ಲಿ ವೆಂಕಟೇಶ್ ನನ್ನು ನಗರದ ಹೊರವಲಯದಲ್ಲಿರುವ ಬೆಟ್ಟಕ್ಕೆ ಕರೆದೊಯ್ದು, ರಾಸಾಯನಿಕ ಮಿಶ್ರಿತ ಹಾಲು ಕುಡಿಸಿ, ಪ್ರಜ್ಞೆ ತಪ್ಪಿಸಿ ಬಳಿಕ ಮುಖಕ್ಕೆ ಆ್ಯಸಿಡ್ ಎರಚಿ ಕೊಲೆ ಮಾಡಿದ್ದ. ಇದೇ ರೀತಿ ಮೂರು ರಾಜ್ಯಗಳಲ್ಲಿ ಒಟ್ಟು 10 ಮಂದಿಯನ್ನು ಕೊಂದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಾಹಿತಿಯನ್ನ ಗದ್ವಾಲ ವಲಯದ ಡಿಐಜಿ ಎಲ್.ಎಸ್.ಚೌಹಾಣ್ ನೀಡಿದರು.

ಇದೇ ವೇಳೆ ತ್ವರಿತವಾಗಿ ಪ್ರಕರಣ ಭೇದಿಸಿದ ಪೊಲೀಸ್​ ಸಿಬ್ಬಂದಿಯನ್ನು ಡಿಐಜಿ ಶ್ಲಾಘಿಸಿದರು.

ಇದನ್ನೂ ಓದಿ: ಚಿಕ್ಕಮಗಳೂರು: ಊಟದಲ್ಲಿ ಸೈನೈಡ್ ಬೆರೆಸಿ ​​​ಪತ್ನಿಯ ಕೊಲೆ.. ಪತಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.