ಲಕ್ನೋ: ಖಲಿಸ್ತಾನಿ ಭಯೋತ್ಪಾದಕ ಜಗದೇವ್ ಸಿಂಗ್ ಅಲಿಯಾಸ್ ಜಗ್ಗನನ್ನು ಪೊಲೀಸರು ಬಂಧಿಸಿದ್ದಾರೆ. ಲಖನೌದಲ್ಲಿ ಉಳಿದು ತನ್ನ ಭಯೋತ್ಪಾದಕ ಜಾಲವನ್ನು ರಾಜ್ಯಾದ್ಯಂತ ಹರಡಲು ಯೋಜಿಸುತ್ತಿದ್ದೇನೆ ಎಂದು ಜಗ್ಗಾ ಬಾಯಿ ಬಿಟ್ಟಿದ್ದಾನೆ. ರಾಜ್ಯದ ಅನೇಕ ನಾಯಕರು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಜಗ್ಗಿ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.
ಇಂದು ಪೊಲೀಸರು ಜಗ್ಗನನ್ನು ಜಂಕಿಪುರಂ ಸೆಕ್ರೆಟರಿಯಟ್ ಕಾಲೋನಿ ಬಳಿ ಬಂಧಿಸಿ ವಿಚಾರಣೆ ನಡೆಸಿದ್ದು, ಜಗ್ಗಾ ಉತ್ತರ ಪ್ರದೇಶ ರಾಜ್ಯಾದ್ಯಂತ ತನ್ನ ಭಯೋತ್ಪಾದಕ ಜಾಲವನ್ನು ವಿಸ್ತರಿಸಲು ಯೋಜಿಸುತ್ತಿರುವುದಾಗಿ ಪಂಜಾಬ್ ಪೊಲೀಸರೆದುರು ವಿಚಾರಣೆ ವೇಳೆ ಹೇಳಿದ್ದಾನೆ.
ಇನ್ನು ಜಗ್ಗ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ ಅಖ್ತರ್ ತಿಳಿಸಿದ್ದಾರೆ. ಜಗ್ಗಾಗೆ ಭಯೋತ್ಪಾದಕ ಕೃತ್ಯಕ್ಕೆ ವಿದೇಶದಿಂದ ಹಣ ಸಿಗುತ್ತಿದೆ ಎಂದು ಹೇಳಲಾಗಿದೆ. ಈತ ಕೆನಡಾ, ಅಮೆರಿಕ ಮತ್ತು ಬ್ರಿಟನ್‌ನಿಂದ ಭಯೋತ್ಪಾದಕ ನಿಧಿಯ ಹೆಸರಿನಲ್ಲಿ ಹಣ ಪಡೆಯುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಅಡ್ಡದಾರಿ ಹಿಡಿದ ಚಾಲಕ.. ಮೆಟ್ರೋ ನಿಲ್ದಾಣದ ಅಂಡರ್ಪಾಸ್ನಲ್ಲಿ ಸಿಲುಕಿದ್ದ ವಾಹನ ತೆರವು