ETV Bharat / bharat

ಡ್ರಗ್ಸ್​ ವಿರುದ್ಧ ಸರ್ಕಾರದ ಅಭಿಯಾನ.. ಮಾದಕವಸ್ತುಗಳ ಕಳ್ಳಸಾಗಣೆ ವಿರುದ್ಧ ಸಿಡಿದೆದ್ದ ಪೊಲೀಸರು! - ಡ್ರಗ್ ಸ್ಮಗ್ಲರ್‌ಗಳ ವಿರುದ್ಧ ಪಂಜಾಬ್ ಸರ್ಕಾರದ ಅಭಿಯಾನ

ಡ್ರಗ್ಸ್​ ಕಳ್ಳಸಾಗಣೆ ನಡೆಯುತ್ತಿದ್ದ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿರುವ ಘಟನೆ ಪಂಜಾಬ್​ನ ಜಲಂಧರ್​ ಜಿಲ್ಲೆಯಲ್ಲಿ ಕಂಡು ಬಂದಿದೆ.

Police arrested four people during raid in Jalandhar, Punjab Government Campaign Against Drug Smugglers, Punjab drugs case news, ಜಲಂಧರ್‌ನಲ್ಲಿ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ, ಡ್ರಗ್ ಸ್ಮಗ್ಲರ್‌ಗಳ ವಿರುದ್ಧ ಪಂಜಾಬ್ ಸರ್ಕಾರದ ಅಭಿಯಾನ, ಪಂಜಾಬ್ ಡ್ರಗ್ ಪ್ರಕರಣದ ಸುದ್ದಿ,
ಡ್ರಗ್ಸ್​ ವಿರುದ್ಧ ಸರ್ಕಾರದ ಅಭಿಯಾನ
author img

By

Published : Jul 9, 2022, 2:48 PM IST

ಜಲಂಧರ್, ಪಂಜಾಬ್​: ಡ್ರಗ್ಸ್ ಮತ್ತು ಡ್ರಗ್ ಸ್ಮಗ್ಲರ್‌ಗಳ ವಿರುದ್ಧ ಪಂಜಾಬ್ ಸರ್ಕಾರ ಅಭಿಯಾನ ಆರಂಭಿಸಿದ್ದು, ರಾಜ್ಯದ ವಿವಿಧೆಡೆ ದಾಳಿ ನಡೆಸುತ್ತಿದೆ. ಹೀಗಾಗಿ ಇಂದು ಜಿಲ್ಲೆಯ ಭೋಗ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಂಗ್ರಾ ಚೌ ವಾಲಾ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಲಾಗಿದೆ.

ದೊರೆತ ಮಾಹಿತಿಯ ಪ್ರಕಾರ ಕಿಂಗ್ರಾ ಚೌ ವಾಲಾ ಗ್ರಾಮದಲ್ಲಿ ದಾಳಿ ನಡೆಸಿರುವ ಎಸ್‌ಎಸ್‌ಪಿ ಸ್ವತಃ 300 ಪೊಲೀಸ್ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಗ್ರಾಮದಲ್ಲಿ ನಿರಂತರವಾಗಿ ಮಾದಕವಸ್ತು ಕಳ್ಳಸಾಗಣೆಯ ದೂರುಗಳು ಬಂದಿದ್ದು. ನಂತರ ಈ ಗ್ರಾಮದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಎಸ್‌ಪಿ ಸ್ವಪನ್ ಶರ್ಮಾ ಹೇಳಿದರು.

ಓದಿ: ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಟ್ಯಾಟೂ ನೋಡಿ ನೀತಿ ಪಾಠ ಮಾಡಿದ ಕಮಿಷನರ್​

ದಾಳಿಯ ಸಮಯದಲ್ಲಿ ಸುಮಾರು 13 ಮನೆಗಳನ್ನು ಗುರಿಯಾಗಿಸಲಾಗಿದೆ. ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಜನರ ವಿರುದ್ಧ ಕ್ರಮದ ಜೊತೆಗೆ ಅವರ ಆಸ್ತಿಯನ್ನು ಸಹ ವಶಕ್ಕೆ ಪಡೆಯಲಾಗುವುದು. ಈ ರೀತಿ ಮಾಡುವುದರಿಂದ ಉಳಿದ ಜನರು ಇದರಿಂದ ಪಾಠ ಕಲಿಯಬಹುದು ಎಂದು ಎಸ್‌ಎಸ್‌ಪಿ ಹೇಳಿದರು. ಸದ್ಯಕ್ಕೆ ಇಂತಹ ದಾಳಿಗಳು ಮಾದಕ ದ್ರವ್ಯ ವಿರೋಧಿ ಅಭಿಯಾನಕ್ಕೆ ವೇಗ ನೀಡಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.