ETV Bharat / bharat

ಕುಡಿದ ಅಮಲಿನಲ್ಲಿ ಪಾದಚಾರಿಗೆ ಡಿಕ್ಕಿ: ಚಾಲಕನ ಬಂಧನ - ಹೋಟೆಲ್ ಹೊರೈಜಾನ್

ಧರಂಪುರ್ ವಲ್ಸಾದ್ ರಸ್ತೆ ಹತ್ತಿರವಿರುವ ಹೋಟೆಲ್ ಹೊರೈಜಾನ್ ಸಮೀಪ ಮದ್ಯದ ಅಮಲಿನಲ್ಲಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ಸಾರಿಗೆ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವು.

drunk bus driver hit a pedestrian
ರಾಜ್ಯ ಸಾರಿಗೆ ಬಸ್ ಡಿಕ್ಕಿ
author img

By

Published : Nov 21, 2022, 9:05 PM IST

ವಲ್ಸಾದ್(ಗುಜರಾತ್): ಧರಂಪುರ್ ವಲ್ಸಾದ್ ರಸ್ತೆ ಹತ್ತಿರವಿರುವ ಹೋಟೆಲ್ ಹೊರೈಜಾನ್ ಸಮೀಪ ರಾಜ್ಯ ಸಾರಿಗೆ ಬಸ್ ಅಪಘಾತ ಸಂಭವಿಸಿದೆ. ಮದ್ಯದ ಅಮಲಿನಲ್ಲಿದ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಸೋಮವಾರ ಮಧ್ಯಾಹ್ನ 1 ಗಂಟೆಗೆ ಧರಂಪುರ್ - ಭರೂಚ್ ಬಸ್ ಚಾಲಕ ವಿಜಯಸಿಂಗ್ ಡೋಲತ್‌ಸಿನ್ಹ್ ಸೋಲಂಕಿ ನಂ40ರ ಬ್ಯಾಚ್​ನ ಚಾಲಕ ಎಂದು ಗುರುತಿಸಲಾಗಿದೆ. ಧರಂಪುರದಿಂದ ಪ್ರವಾಸಿಗರನ್ನು ಭರೂಚ್​​​​ಗೆ ಕರೆತರುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಡಿಪೋದಿಂದ ನಿರ್ಗಮಿಸುವಾಗ ಚಾಲಕ ಪಾನಮತ್ತನಾಗಿದ್ದ ಮೊದಲು ಖೇರ್ಗಾಮ್ ರಸ್ತೆ ಬೈಪಾಸ್ ಬಳಿ ಬಸ್ ಡಿವೈಡರ್‌ಗೆ ಡಿಕ್ಕಿಯಾಗಿದೆ ಒಳಗಿದ್ದ ಪ್ರವಾಸಿಗರು ಜೀವ ಭಯದಿಂದ ಚಿರಾಡಿದ್ದಾರೆ. ನಂತರ ಬಸ್​ ಧರಂಪುರ್ ವಲ್ಸಾದ್ ರಸ್ತೆಯ ಹೊಟೇಲ್ ಹೊರೈಜಾನ್ ಸಮೀಪದ ರಸ್ತೆ ಬದಿಯಲ್ಲಿ ನಿಂತಿದ್ದ ಮನೋಜ್ ವಸಾನಿಗೆ ಡಿಕ್ಕಿಯಾಗಿದೆ ಕೂಡಲೇ ಅವರನ್ನು ಶ್ರೀಮದ್ ರಾಜಚಂದ್ರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ

ಕಂಡಕ್ಟರ್ ನ ಸಮಯ ಪ್ರಜ್ಞೆ: ಘಟನೆ ನಡೆದ ತಕ್ಷಣ ಕಂಡಕ್ಟರ್‌ ಚಾಲಕನಿಂದ ಬಸ್ ಕೀಯನ್ನು ತೆಗೆದುಕೊಂಡಿದ್ದಾರೆ. ಚಾಲಕನನ್ನು ಬಸ್​ನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಆದರೆ, ಚಾಲಕ ನಿಲ್ಲಲು ಸಾಧ್ಯವಾಗದಷ್ಟು ಕುಡಿದಿರುವುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಕಂಡಕ್ಟರ್ ಮೇಲೆ ಪ್ರಯಾಣಿಕರಿಂದ ಹಲ್ಲೆ.. ಬಸ್​ನೊಂದಿಗೆ ಪೊಲೀಸ್ ಠಾಣೆಗೆ ಬಂದ ಚಾಲಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.