ETV Bharat / bharat

ಸೊಸೆಗೆ ಊಟ, ನೀರು ನೀಡದ ಅತ್ತೆ, ಕಿರುಚಾಟ ಯಾರಿಗೂ ಕೇಳಿಸದಂತೆ ಬಾಯಿಗೆ ಬಟ್ಟೆ ತುರುಕಿ ಚಿತ್ರಹಿಂಸೆ

ವರದಕ್ಷಿಣೆಗಾಗಿ ಗೃಹಣಿಗೆ ಬಿಸಿ ತವಾದಿಂದ ಸುಡುವುದು ಹಾಗೂ ಬಿಸಿನೀರು ಸುರಿಯುವುದು ಹಾಗೂ ಆಕೆ ಕಿರುಚಾಟ ಯಾರಿಗೂ ಕೇಳಿಸದಂತೆ ಬಾಯಿಗೆ ಬಟ್ಟೆ ತುರುಕಿ ಚಿತ್ರಹಿಂಸೆ ನೀಡುತ್ತಿದ್ದ ಪ್ರಕರಣ ಉತ್ತರಾಖಂಡದಲ್ಲಿ ನಡೆದಿದೆ.

police-arrested-accused-in-dowry-harassment-case-after-uttarakhand-women-commission-intervention
ವರದಕ್ಷಿಣೆ ಭೂತ: ಸೊಸೆಗೆ ಊಟ, ನೀರು ನೀಡದ ಅತ್ತೆ, ಕಿರುಚಾಟ ಯಾರಿಗೂ ಕೇಳಿಸದಂತೆ ಬಾಯಿಗೆ ಬಟ್ಟೆ ತುರುಕಿ ಚಿತ್ರಹಿಂಸೆ
author img

By

Published : Sep 21, 2022, 10:33 PM IST

ತೆಹ್ರಿ (ಉತ್ತರಾಖಂಡ): ವರದಕ್ಷಿಣೆಗಾಗಿ ಗೃಹಣಿಯೊಬ್ಬರಿಗೆ ಅತ್ತೆ ಮತ್ತು ಅತ್ತಿಗೆ ಸೇರಿಕೊಂಡು ಚಿತ್ರಹಿಂಸೆ ಕೊಟ್ಟಿರುವ ಘಟನೆ ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆಗೆ ಥಳಿಸಿದ್ದಲ್ಲದೇ ಹಲವು ದಿನಗಳಿಂದ ಬಾತ್ ರೂಂನಲ್ಲಿ ಕೂಡಿ ಹಾಕಿ ಊಟ ಹಾಗೂ ನೀರು ಕೂಡ ಕೊಟ್ಟಿರಲಿಲ್ಲ ಎಂದು ಆರೋಪಿಸಲಾಗಿದೆ.

ಇಲ್ಲಿನ ಪ್ರತಾಪನಗರದ ಪ್ರೀತಿ ಎಂಬ ಮಹಿಳೆಯೇ ಈ ಚಿತ್ರಹಿಂಸೆ ಅನುಭವಿಸಿದ್ದಾರೆ. ಈಗಾಗಲೇ ತೆಹ್ರಿ ಪೊಲೀಸರು ಆರೋಪಿ ಅತ್ತೆ ಸುಭದ್ರಾದೇವಿ ಮತ್ತು ಅತ್ತಿಗೆ ಜಯ ಜಗುಡಿಯನ್ನು ಬಂಧಿಸಿದ್ದಾರೆ.

ಮಾನಸಿಕ ಅಸ್ವಸ್ಥ ಪತಿ: ಪ್ರೀತಿಯ ಪತಿ ಅನೂಪ್ ಮಾನಸಿಕ ಅಸ್ವಸ್ಥರಾಗಿದ್ದು, ಈ ದಂಪತಿಗೆ 9 ವರ್ಷದ ಮಗ, 7 ವರ್ಷದ ಮಗಳು ಮತ್ತು 5 ವರ್ಷದ ಕಿರಿಯ ಮಗ ಇದ್ದಾನೆ. ಪ್ರೀತಿಯ ಮಾವ ದೇವೇಂದ್ರ ಜಗುಡಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್​ನಲ್ಲಿ ಕೆಲಸ ಮಾಡುತ್ತಿರುವುದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ರಾಜ್ಯ ಮಹಿಳಾ ಆಯೋಗದ ಮಧ್ಯಸ್ಥಿಕೆ ನಂತರ ಕ್ರಮ: ಸಂತ್ರಸ್ತೆ ಪ್ರೀತಿಯನ್ನು ಒತ್ತೆಯಾಳಾಗಿಟ್ಟುಕೊಂಡ ಆಕೆಯ ಅತ್ತೆ ಕ್ರೂರವಾಗಿ ಥಳಿಸಿದ್ದಾರೆ ಎಂದು ಉತ್ತರಾಖಂಡ ಮಹಿಳಾ ಆಯೋಗದ ಅಧ್ಯಕ್ಷೆ ಕುಸುಮ್ ಕಂಡ್ವಾಲ್ ಅವರಿಗೆ ಮಾಹಿತಿ ತಲುಪಿತ್ತು. ಅಂತೆಯೇ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅವರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಹೀಗಾಗಿಯೇ ಆರೋಪಿಗಳನ್ನು ಬಂಧಿಸಿದ್ದಾರೆ.

ಅಲ್ಟ್ರಾಸೌಂಡ್​ನಲ್ಲಿ ಆಘಾತಕಾರಿ ಮಾಹಿತಿ: ಪ್ರೀತಿ ಅನುಭವಿಸಿದ ಕ್ರೌರ್ಯ ಎಲ್ಲೆ ಮೀರಿ ಹೋಗಿದ್ದು, ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ. ಆಕೆಯ ದೇಹದಲ್ಲಿ 20 ಸ್ಥಳಗಳಲ್ಲಿ ಸುಟ್ಟಿರುವುದು ಗೊತ್ತಾಗಿದೆ. ಮಂಗಳವಾರ 6 ಗಂಟೆಗಳ ಕಾಲ ನಿರಂತರವಾಗಿ ನಡೆದ ಅಲ್ಟ್ರಾಸೌಂಡ್​ನಲ್ಲಿ ಕಳೆದ 7 ದಿನಗಳಿಂದ ಪ್ರೀತಿಗೆ ತಿನ್ನಲು, ಕುಡಿಯಲು ಏನೂ ಸಿಕ್ಕಿರಲಿಲ್ಲ ಎಂದು ಬೆಳಕಿಗೆ ಬಂದಿದೆ.

ಮನೆಯ ಗೇಟ್ 24 ಗಂಟೆ ಮುಚ್ಚಿರುತ್ತದೆ: ಮನೆಯಲ್ಲಿ ಪ್ರೀತಿಯ ಅತ್ತೆ, ಅತ್ತಿಗೆ, ಪತಿ, ಸೋದರ ಮಾವ ಮತ್ತು ಮೂವರು ಮಕ್ಕಳು ಮಾತ್ರ ವಾಸಿಸುತ್ತಿದ್ದಾರೆ. ಬೆಳಗ್ಗೆ ಮಕ್ಕಳು ಶಾಲೆಗೆ ಹೋಗಿ ಮನೆಗೆ ಬಂದಾಗ ಮಾತ್ರ ಮನೆಯ ಗೇಟ್ ತೆರೆಯುತ್ತದೆ. ಉಳಿದಂತೆ ಮನೆಯ ಗೇಟ್ 24 ಗಂಟೆಗಳ ಕಾಲ ಒಳಗಿನಿಂದ ಮುಚ್ಚಿರುತ್ತದೆ. ಪ್ರೀತಿಗೆ ಕಳೆದ ಹಲವು ವರ್ಷಗಳಿಂದ ಹೀಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಬಾಯಿಗೆ ಬಟ್ಟೆ ತುರುಕುತ್ತಿದ್ದರು: ಸಂತ್ರಸ್ತೆ ತನ್ನ ನೋವು ತೋಡಿಕೊಂಡಿದ್ದು, ತನಗೆ ಬಹಳ ದಿನಗಳಿಂದ ಚಿತ್ರಹಿಂಸೆ ನೀಡುತ್ತಿದ್ದರು. ಬಿಸಿ ತವಾದಿಂದ ಸುಡುತ್ತಿದ್ದರು ಹಾಗೂ ಹಲವು ಬಾರಿ ಬಿಸಿನೀರು ಸುರಿಯುತ್ತಿದ್ದರು. ನನ್ನ ಕಿರುಚಾಟ ಯಾರಿಗೂ ಕೇಳಿಸದಂತೆ ಬಾಯಿಗೆ ಬಟ್ಟೆ ತುರುಕುತ್ತಿದ್ದರು. ಎಷ್ಟೋ ದಿನ ಊಟ ಕೊಡಲಿಲ್ಲ. ತಟ್ಟೆಗಳಲ್ಲಿ ತಿಂದು ಉಳಿದ ಆಹಾರವನ್ನು ತಿಂದು ಬದುಕುತ್ತಿದ್ದೆ ಎಂದು ವಿವರಿಸಿದ್ದಾರೆ.

ಸದ್ಯ ಆರೋಗ್ಯ ತಪಾಸಣೆಯ ನಂತರ ಸಂತ್ರಸ್ತೆ ಪ್ರೀತಿಯನ್ನು ಡೆಹ್ರಾಡೂನ್ ಕೊರೊನೇಷನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನಿಸಿ ಬೆಂಕಿ ಇಟ್ಟಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.