ETV Bharat / bharat

ಒಂದೂವರೆ ವರ್ಷದ ಮಗುವಿನ ಕೊಲೆ ಮಾಡಿದ ಪಾಪಿ ತಾಯಿ, ಕಾರಣ? - Kasaragod latest crime news

ಕಾಸರಗೋಡಿನಲ್ಲಿನ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಕ್ಕಳ ಕೊಲೆ ಮಾಡಿರುವ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿವೆ.

Police arrest woman
Police arrest woman
author img

By

Published : Jan 7, 2021, 7:25 PM IST

ಕಾಸರಗೋಡು(ಕೇರಳ): ಪಾಪಿ ತಾಯಿಯೋರ್ವಳು ಒಂದೂವರೆ ವರ್ಷದ ಮಗುವಿನ ಕೊಲೆ ಮಾಡಿ ಬಾವಿಯಲ್ಲಿ ಎಸೆದ ಘಟನೆ ನಡೆದಿದ್ದು, ಪ್ರಕರಣ ಬೇಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಈ ಘಟನೆ ನಡೆದಿದ್ದು, ಶಾರದಾ ಈ ಕೃತ್ಯವೆಸಗಿದ್ದಾಳೆ. ಡಿಸೆಂಬರ್​ 4ರಂದು ಒಂದೂವರೆ ವರ್ಷದ ಮಗು ಸ್ವಸ್ತಿಕ್​ ಮೃತದೇಹ ಸಾರ್ವಜನಿಕ ನೀರಿನ ಬಾವಿಯಲ್ಲಿ ಲಭ್ಯವಾಗಿದೆ. ಮಗುವಿನ ಮೃತದೇಹ ಸಿಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ಮೃತದೇಹವನ್ನ ಪರಿಯಾರಂ ವೈದ್ಯಕೀಯ ಕಾಲೇಜ್​ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಮಾಡಿರುವ ವಿಷಯ ಬಹಿರಂಗಗೊಂಡಿದೆ.

ಓದಿ: 70 ಸಾವಿರ ಗಡಿಯಿಂದಿಳಿದ ಬೆಳ್ಳಿ: ಚಿನ್ನದ ಬೆಲೆಯಲ್ಲೂ ಭಾರಿ ಕುಸಿತ

ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದು,ತಾಯಿ ಕೊಲೆ ಮಾಡಿರುವ ವಿಚಾರ ಹೊರಬಿದ್ದಿದೆ. ಇನ್ನು 25 ವರ್ಷದ ಶಾರದಾ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಮತ್ತೊಂದು ಅಮಾನವೀಯ ಘಟನೆ: ಆಗತಾನೇ ಹುಟಿದ್ದ ನವಜಾತ ಶಿಶುವನ್ನ ತಾಯಿಯೋರ್ವಳು ಇಯರ್​ಫೋನ್ ಕೇಬಲ್​ನಿಂದ ಕೊಲೆ ಮಾಡಿದ್ದಾಳೆ. ತದನಂತರ ಬೆಡ್​ರೂಂನಲ್ಲಿನ ಮಂಚದ ಕೆಳಗೆ ಮುಚ್ಚಿಟ್ಟಿದ್ದಾಳೆ. ಇದರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.