ETV Bharat / bharat

10 ಮಂದಿ ಮಾವೋವಾದಿಗಳ ಬಂಧಿಸಿ ಬಹುದೊಡ್ಡ ಸ್ಫೋಟ ತಪ್ಪಿಸಿದ ಪೊಲೀಸರು! - ಛತ್ತೀಸ್‌ಗಢ ಲೇಟೆಸ್ಟ್​ ಕ್ರೈಂ ನ್ಯೂಸ್​​

ಛತ್ತೀಸ್‌ಗಢದಲ್ಲಿ ಸ್ಫೋಟ ನಡೆಸಲು ರೂಪಿಸಿದ್ದ ಯೋಜನೆಯನ್ನು ವಿಫಲಗೊಳಿಸಿದ ಪೊಲೀಸರು 10 ಮಂದಿ ಮಾವೋವಾದಿಗಳನ್ನು ಬಂಧಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : May 23, 2023, 2:23 PM IST

ಜಗದಲ್‌ಪುರ/ಬಿಜಾಪುರ: ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ ಸೋಮವಾರ ಪೊಲೀಸರು ನಡೆಸಿದ ದಾಳಿಯಲ್ಲಿ 10 ಮಂದಿ ಮಾವೋವಾದಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ ಛತ್ತೀಸ್‌ಗಢದಲ್ಲಿ ಬೃಹತ್​ ಸ್ಫೋಟಕ್ಕೆ ಯೋಜಿಸಿದ ಮಾವೋವಾದಿ ನಾಯಕರಿಗೆ ಸಾಗಿಸುತ್ತಿದ್ದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ನಕ್ಸಲರನ್ನು ಸಮ್ಮಯ್ಯ (36), ಅರೆಪಲ್ಲಿ ಶ್ರೀಕಾಂತ್ (23), ಮೇಕಲ ರಾಜು (36), ರಮೇಶ್ (28), ಸಲ್ಲಪಲ್ಲಿ (25), ಮುಚ್ಚಕಿ ರಮೇಶ್ (32), ಸುರೇಶ್ (25), ಲಾಲು (22), ಮಹೇಶ್ (20) ಹಾಗೂ ಮಾವಡಿ ಚೈತು (21) ಎಂದು ಗುರುತಿಸಲಾಗಿದೆ. ಹತ್ತು ಮಂದಿ ಮಾವೋವಾದಿಗಳ ಪೈಕಿ ಐವರು ನಕ್ಸಲರು ತೆಲಂಗಾಣದ ನಿವಾಸಿಗಳಾಗಿದ್ದರೆ ಇನ್ನೂ ಐವರು ಛತ್ತೀಸ್‌ಗಢದ ಬಿಜಾಪುರ ಅವಪಲ್ಲಿ ಪ್ರದೇಶದವರು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣದ ಭದ್ರಾಡಿ ಕೊಟ್ಟಗುಡಂ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೃಹತ್​ ವಿಧ್ವಂಸಕ ಯೋಜನೆಯನ್ನು ವಿಫಲಗೊಳಿಸಲಾಗಿದೆ. ಬಂಧಿತರಿಂದ ಒಂದು ಟ್ರ್ಯಾಕ್ಟರ್ ಕಾರ್ಡೆಕ್ಸ್ ವೈರ್ ಮತ್ತು ಸುಮಾರು 500 ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಬೃಹತ್ ಸ್ಫೋಟಕಗಳನ್ನು ಹಾರ್ಡ್‌ಕೋರ್ ನಕ್ಸಲೈಟ್ ನಾಯಕರಿಗೆ ಸಾಗಿಸಲಾಗುತ್ತಿತ್ತು. ಈ ವರ್ಷ ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಕೆಲವು ದೊಡ್ಡ ದಾಳಿಗಳನ್ನು ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿ ಭಾಗಗಳಲ್ಲಿ ನಕ್ಸಲೀಯರ ಚಲನವಲನದ ಬಗ್ಗೆ ಸುಳಿವು ನೀಡಿದ ತೆಲಂಗಾಣ ಪೊಲೀಸ್ ತಂಡ ಮುಲಕನಪಲ್ಲಿ ಮತ್ತು ದುಮುಗುಡೆಂಗೆ ಧಾವಿಸಿತು. ಕೊಟ್ಟಗುಡಂ ಮತ್ತು ದುಮುಗುಡೆಂ ಪೊಲೀಸರ ಜಂಟಿ ತಂಡ ಹಾಗೂ ಸಿಆರ್‌ಪಿಎಫ್ 141ನೇ ಸಿಬ್ಬಂದಿ ಸೇರಿ ಜಂಟಿ ಕಾರ್ಯಾಚರಣೆ ನಡೆಸಿತ್ತು. ಬಂಧಿತರು ಮಾವೋವಾದಿ ಸಂಘಟನೆಯೊಂದಿಗೆ ಸಕ್ರಿಯವಾಗಿ ಸಂಪರ್ಕ ಹೊಂದಿದ್ದಾರೆ ಮತ್ತು ವಿಧ್ವಂಸಕ ಚಟುವಟಿಕೆಗಳಿಗಾಗಿ ವಿವಿಧ ಪ್ರದೇಶಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸುತ್ತಿದ್ದರು ಎಂದು ತಿಳಿದು ಬಂದಿದೆ.

ಬ್ರಿಡ್ಜ್​ ಸ್ಫೋಟಗೊಳಿಸಿದ ನಕ್ಸಲರು: ಮಾವೋವಾದಿ ನಾಯಕ ಪ್ರಶಾಂತ್ ಬೋಸ್ ಮತ್ತು ಅವರ ಪತ್ನಿಯ ಬಂಧನವನ್ನು ಖಂಡಿಸಿ ಇತ್ತೀಚೆಗೆ 'ಪ್ರತಿರೋಧ ಸಪ್ತಾಹ'ವನ್ನು ಆಚರಿಸಿದ್ದ ನಕ್ಸಲರು ಜಾರ್ಖಂಡ್​ನಲ್ಲಿ ಪ್ರತಿಭಟನೆ ನಡೆಸಿದ್ದರು. ಮೊದಲ ದಿನ ಎರಡು ಮೊಬೈಲ್ ಟವರ್‌ಗಳನ್ನು ಸ್ಫೋಟಿಸಿದ್ದ ನಕ್ಸಲರು ಬಳಿಕ ಗಿರಿದಿಹ್ ಜಿಲ್ಲೆಯ ಬರಾಕರ್ ನದಿಯ ಮೇಲೆ ಕಟ್ಟಲಾಗಿದ್ದ ಸೇತುವೆಯನ್ನು ಸ್ಫೋಟಿಸಿದ್ದರು. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡುತ್ತಿರುವ ಮಾವೋವಾದಿಗಳ ಕೃತ್ಯಕ್ಕೆ ಸ್ಥಳೀಯರು ಭಯಭೀತರಾಗಿದ್ದರು.

ಇದನ್ನೂ ಓದಿ: ಮಾವೋವಾದಿ ನಾಯಕನ ಬಂಧನದ ವಿರುದ್ಧ ಪ್ರತಿಭಟನೆ : ಬ್ರಿಡ್ಜ್​ ಸ್ಫೋಟಗೊಳಿದ ನಕ್ಸಲರು

ನಕ್ಸಲ್ ದಂಪತಿಯ ಪುತ್ರಿಗೆ ವೈದ್ಯೆಯಾಗುವ ಹಂಬಲ: ಛತ್ತೀಸ್‌ಗಢದ ರಾಯ್‌ಪುರದಿಂದ 300 ಕಿ.ಮೀ ದೂರದಲ್ಲಿರುವ ನಾರಾಯಣಪುರ ಜಿಲ್ಲೆಯ ಅಬುಜ್ಮದ್ ಪ್ರದೇಶದ ಎನ್ಮೆಟಾ ಬಕುಲ್ವಾಹಿ ಗ್ರಾಮದ ಸಕ್ರಿಯ ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿರುವ ಮಾವೋವಾದಿಗಳಾದ ಸೋನ್ವಾರಮ್ ಸಲಾಂ ಮತ್ತು ಆರತಿ ಅವರ ಪುತ್ರಿ 10 ನೇ ತರಗತಿಯಲ್ಲಿ ಶೇಕಡಾ 54.5 ಅಂಕಗಳನ್ನು ಗಳಿಸಿದ್ದಾಳೆ. ಆಕೆ ಮುಂದಿನ ದಿನಗಳಲ್ಲಿ ವೈದ್ಯೆಯಾಗಿ ತನ್ನ ಜಿಲ್ಲೆಯ ಸ್ಥಳೀಯ ಆದಿವಾಸಿಗಳ ಸೇವೆ ಸಲ್ಲಿಸುವ ಭರವಸೆ ವ್ಯಕ್ತಪಡಿಸಿದ್ದಳು.

ಇದನ್ನೂ ಓದಿ: 10ನೇ ತರಗತಿ ಪರೀಕ್ಷೆ ಪಾಸಾದ ನಕ್ಸಲ್ ದಂಪತಿಯ ಪುತ್ರಿಗೆ ವೈದ್ಯೆಯಾಗುವ ಹಂಬಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.