ETV Bharat / bharat

ಹಾವು ಹಿಡಿದು ಯುವಕನ ಹುಚ್ಚಾಟ... ಒಂದ್ ಕ್ಷಣ ಮೈ ಮರೆತದ್ದಕ್ಕೆ ಮೂರು ಬಾರಿ ಕಚ್ಚಿದ ಉರಗ

author img

By

Published : Aug 1, 2021, 10:43 AM IST

Updated : Aug 1, 2021, 12:13 PM IST

ಮೈ ಮರೆತು ಹಾವಿನ ಜೊತೆ ಆಟವಾಡುತ್ತಿದ್ದ ಯುವಕ ಅದೇ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾನೆ.

snake
snake

ಥಾಣೆ: ಯುವಕರ ಹುಚ್ಚಾಟಗಳು ಹೇಗೆ ಸಾವಿಗೆ ರಹದಾರಿ ಆಗುತ್ತವೆ ಅನ್ನೋದಕ್ಕೆ ಇದೊಂದು ಹೊಸ ನಿದರ್ಶನ. ವಿಷಕಾರಿ ಹಾವಿನ ಜೊತೆ ಆಟವಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಥಾಣೆಯ ಮುಂಬ್ರಾ ಪಟ್ಟಣದಲ್ಲಿ ನಡೆದಿದೆ.

20 ವರ್ಷದ ಮೊಹಮ್ಮದ್ ಶೇಖ್ ಮೃತ ಯುವಕ. ಹಾವು ಹಿಡಿದು ಆಟವಾಡುವಾಗ ಈತ ಅದರಿಂದಲೇ ಕಚ್ಚಿಸಿಕೊಂಡು ಮೃತಪಟ್ಟಿದ್ದಾನೆ. ಮುಂಬ್ರಾ ನಿವಾಸಿಯಾಗಿರುವ ಈತ ಮುಂಬೈ ಬೈಪಾಸ್ ರಸ್ತೆ ಬಳಿ ಟೈಮ್ ಪಾಸ್ ಮಾಡಲು ಹೋಗುವ ಮಾರ್ಗಮಧ್ಯೆ ಹಾವೊಂದನ್ನು ನೋಡಿದ್ದಾನೆ. ಬಳಿಕ ಹಾವಿನ ತಲೆ ಹಿಡಿದುಕೊಂಡು ಕೆಲಕಾಲ ಆಟವಾಡಿದ್ದಾನೆ. ಅಷ್ಟೇ ಅಲ್ಲ, ಕೊರಳಿಗೆ ಸುತ್ತಿಕೊಂಡು ಮಾರುಕಟ್ಟೆಗೂ ಬಂದಿದ್ದ. ಆಗ ನೋಡಿದ ಕೆಲವರು ಅಪಾಯದ ಬಗ್ಗೆ ಮುನ್ಸೂಚನೆ ನೀಡಿ, ಹಾವು ಬಿಡುವಂತೆ ತಿಳಿಸಿದ್ದರು. ಆದ್ರೆ ಯುವಕ ಯಾರ ಮಾತಿಗೂ ಬೆಲೆ ಕೊಡಲಿಲ್ಲ.

ಹಾವು ಹಿಡಿದು ಯುವಕನ ಹುಚ್ಚಾಟ

ಹೀಗೆ ಮೈ ಮರೆತು ಆಡುತ್ತಿದ್ದ ಯುವಕನ ಕೈ ಹಿಡಿತದಿಂದ ಹಾವು ತಪ್ಪಿಸಿಕೊಂಡು ಆತನಿಗೆ ಮೂರು ಬಾರಿ ಕಚ್ಚಿದೆ. ಆ ವೇಳೆ ಯುವಕನಿಗೆ ಏನೂ ಆಗಿಲ್ಲ. ಬಳಿಕ ಹಾವನ್ನು ಪೊದೆಯೊಳಗೆ ಬಿಟ್ಟು ಬಂದಿದ್ದಾರೆ. ಆದ್ರೆ ಹಾವು ಕಚ್ಚಿದ್ದರಿಂದ ಆತನ ದೇಹದಲ್ಲಿ ನಿಧಾನವಾಗಿ ವಿಷ ಹೆಚ್ಚಿ, ಅಸ್ವಸ್ಥನಾಗಿದ್ದಾನೆ. ಬಳಿಕ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ರೂ ಉಪಯೋಗವಾಗಿಲ್ಲ. ವಿಷ ಹೆಚ್ಚಾಗಿ ಯುವಕ ಸಾವನ್ನಪ್ಪಿದ್ದಾನೆ.

ಇನ್ನು ಯುವಕನ ಹುಚ್ಚಾಟವನ್ನು ಈತನ ಸ್ನೇಹಿತರು ಮೊಬೈಲ್​ನಲ್ಲಿ ಸೆರೆ ಹಿಡಿದು ಆತನಿಗೆ ಮತ್ತಷ್ಟು ಪ್ರಚೋದನೆ ನೀಡಿರುವುದು ದುರಂತ. ಯುವಕರು ಜೀವಾಪಾಯದ ಭೀತಿ ಇಲ್ಲದೇ ಹುಚ್ಚುತನ ಪ್ರದರ್ಶಿಸಿ, ಜೀವ ಕಳೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ.

ನೋಡಿ: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ಅಡ್ಡಿಪಡಿಸಿ, ಕಾಲಿಗೆ ಸುತ್ತಿಕೊಂಡ ಹಾವು.. ವಿಡಿಯೋ ವೈರಲ್

Last Updated : Aug 1, 2021, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.