ETV Bharat / bharat

'ಪ್ರಮಾಣಪತ್ರ'ವು ಯೋಗಿ ಸರ್ಕಾರದ ಕ್ರೌರ್ಯ ಮರೆಮಾಚಲು ಆಗದು : ಪ್ರಿಯಾಂಕಾ ಗಾಂಧಿ ವಾದ್ರಾ

ಜನರು ಅಪಾರ ಕಷ್ಟಗಳನ್ನು ಎದುರಿಸಿದರು. ಈ ಸತ್ಯವನ್ನು ಮೋದಿ ಜಿ, ಯೋಗಿ ಜಿ ಅವರು ಮರೆಯಬಹುದು. ಆದರೆ, ಕೊರೊನಾದಿಂದ ಬಳಲುತ್ತಿರುವವರು ಮರೆಯುವುದಿಲ್ಲ ಎಂದಿದ್ದಾರೆ..

ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ
author img

By

Published : Jul 16, 2021, 3:46 PM IST

ನವದೆಹಲಿ : ಕೋವಿಡ್ ಬಿಕ್ಕಟ್ಟನ್ನು ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿತ ಲೇಖನ : ಉತ್ತರ ಪ್ರದೇಶ ಸರ್ಕಾರ ಕೋವಿಡ್​ 2ನೇ ಅಲೆ ಯಶಸ್ವಿಯಾಗಿ ನಿಭಾಯಿಸಿದೆ: ಮೋದಿ ಗುಣಗಾನ

ಯೋಗಿ ಆದಿತ್ಯನಾಥ್ ಅವರ ಕ್ರೌರ್ಯ, ನಿರ್ಲಕ್ಷ್ಯ ಮತ್ತು ದುರುಪಯೋಗದ ಸತ್ಯವನ್ನು ಅವರ 'ಪ್ರಮಾಣಪತ್ರ'ದಿಂದ ಮರೆಮಾಚಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ

ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಿದ್ದಕ್ಕಾಗಿ ಉತ್ತರಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದರು. 2ನೇ ತರಂಗವನ್ನು ನಿಯಂತ್ರಿಸಿದ ರೀತಿ 'ಅಭೂತಪೂರ್ವ' ಎಂದು ಇದೇ ವೇಳೆ ಹೇಳಿದರು. ಇದಕ್ಕೆ ಪ್ರತಿಪಕ್ಷಗಳು ಭಾರೀ ಆಕ್ರೋಶ ಹೊರ ಹಾಕುತ್ತಿವೆ.

ಹೆಚ್ಚಿನ ಓದಿಗೆ: ಪ್ರಯಾಗರಾಜ್ ನದಿ ತೀರದಲ್ಲಿ ಹೆಣಗಳ ರಾಶಿ: ಸಾವಿನಲ್ಲಿಯೂ ಘನತೆ ಸಿಗಲಿಲ್ಲ ಎಂದ ಪ್ರಿಯಾಂಕಾ ಗಾಂಧಿ

ಜನರು ಅಪಾರ ಕಷ್ಟಗಳನ್ನು ಎದುರಿಸಿದರು. ಈ ಸತ್ಯವನ್ನು ಮೋದಿ ಜಿ, ಯೋಗಿ ಜಿ ಅವರು ಮರೆಯಬಹುದು. ಆದರೆ, ಕೊರೊನಾದಿಂದ ಬಳಲುತ್ತಿರುವವರು ಮರೆಯುವುದಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.