ETV Bharat / bharat

ombudsman schemes: ರಿಟೇಲ್​ ಡೈರೆಕ್ಟ್​, ಒಂಬುಡ್ಸ್​ಮನ್ಸ್​ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ - ಹೂಡಿಕೆದಾರ

ರಿಟೇಲ್​ ಡೈರೆಕ್ಟ್​ (Retail Direct) ಮತ್ತು ಒಂಬುಡ್ಸಮನ್​ ಯೋಜನೆಗಳಿಗೆ (Ombudsman Scheme) ಪ್ರಧಾನಿ ಮೋದಿ (PM Modi) ಆನ್​ಲೈನ್​ ಮೂಲಕ ಶುಕ್ರವಾರ (ಇಂದು) ಚಾಲನೆ ನೀಡಲಿದ್ದಾರೆ.

Ombudsman Scheme  Retail Direct  Prime Minister Narendra Modi  investors  one nation one ombudsman  ಒಂಬುಡ್ಸಮನ್​ ಯೋಜನೆ  ಪ್ರಧಾನಮಂತ್ರಿ ನರೇಂದ್ರ ಮೋದಿ  ಹೂಡಿಕೆದಾರ  ಒಂದು ರಾಷ್ಟ್ರ ಒಂದು ಒಂಬುಡ್ಸ್‌ಮನ್
ಒಂಬುಡ್ಸ್​ಮನ್ಸ್​ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ
author img

By

Published : Nov 12, 2021, 7:13 AM IST

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ನ (RBI) ಅಡಿಯಲ್ಲಿ ಗ್ರಾಹಕ ಕೇಂದ್ರಿತ ರಿಟೇಲ್​ ಡೈರೆಕ್ಟ್ ​(Retail Direct) ಮತ್ತು ​ಒಂಬುಡ್ಸಮನ್​ (Ombudsman Scheme) ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಆನ್​ಲೈನ್​ ಮೂಲಕ ಶುಕ್ರವಾರ (ಇಂದು) ಚಾಲನೆ ನೀಡಲಿದ್ದಾರೆ.

ಚಿಲ್ಲರೆ ನೇರ ಹೂಡಿಕೆ ಯೋಜನೆಯು ಸರ್ಕಾರಿ ಸ್ವಾಮ್ಯದ ಮಾರುಕಟ್ಟೆಗಳಲ್ಲಿ ಹೂಡಿಕೆದಾರರನ್ನು (investors) ಹೆಚ್ಚಿಸುವ ಗುರಿ ಹೊಂದಿದೆ ಎಂದು ಪ್ರಧಾನಿ ಕಾರ್ಯಾಲಯ (PMO) ತಿಳಿಸಿದೆ.

ಚಿಲ್ಲರೆ ಮಾರುಕಟ್ಟೆಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ (investors) ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರತೆ ನೀಡುವುದಲ್ಲದೇ, ಮಾರುಕಟ್ಟೆಗಳಲ್ಲಿ ಹೊಸ ಆವಿಷ್ಕಾರಗಳಿಗೆ ಅನುವು ಮಾಡಿಕೊಡಲಿದೆ. ಅಲ್ಲದೇ ಆರ್​ಬಿಐನಲ್ಲಿ (RBI) ಹೂಡಿಕೆದಾರರು ನೇರವಾಗಿ ಮತ್ತು ಉಚಿತವಾಗಿ ತಮ್ಮ ಖಾತೆಯನ್ನು ತೆರೆಯಲು ಅನುಕೂಲ ಮಾಡಿಕೊಡಲಿದೆ.

ಕೇಂದ್ರ ಬ್ಯಾಂಕ್‌ನಿಂದ ನಿಯಂತ್ರಿಸಲ್ಪಡುವ ಇತರ ಬ್ಯಾಂಕ್​ಗಳ ಶಾಖೆಗಳ ವಿರುದ್ಧ ಗ್ರಾಹಕರು ನೀಡಿದ ದೂರುಗಳನ್ನು ಪರಿಹರಿಸಲು ಮತ್ತು ಖಾತೆದಾರರ ಕುಂದು ಕೊರತೆ ನೀಗಿಸುವ ಕಾರ್ಯವಿಧಾನವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶವನ್ನು ಓಂಬುಡ್ಸ್​ಮನ್​ ಯೋಜನೆ (Ombudsman Scheme) ಹೊಂದಿದೆ.

ಬ್ಯಾಂಕ್​ಗಳ ವಿರುದ್ಧ ಗ್ರಾಹಕರಿಗೆ ಇರುವ ಅಸಮಾಧಾನ ಮತ್ತು ದೂರುಗಳನ್ನು ಸಲ್ಲಿಸಲು ಪೋರ್ಟಲ್, ಇ-ಮೇಲ್ ಮತ್ತು ಅಂಚೆ ವಿಳಾಸದೊಂದಿಗೆ 'ಒಂದು ರಾಷ್ಟ್ರ- ಒಂದು ಒಂಬುಡ್ಸ್‌ಮನ್' (one nation one ombudsman) ಮೂಲಕ ದೂರುಗಳನ್ನು ಸಲ್ಲಿಸಲು ಯೋಜನೆ ಸಹಕಾರಿಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.