ETV Bharat / bharat

ಕಮಲಾ ಹ್ಯಾರಿಸ್​ ಜೊತೆ ಮೋದಿ ಮಾತುಕತೆ: ಭಾರತಕ್ಕೆ ವ್ಯಾಕ್ಸಿನ್​ ಪೂರೈಸುವ ಭರವಸೆಗೆ ಪ್ರಧಾನಿ ಶ್ಲಾಘನೆ - ಅಮೆರಿಕಾದಿಂದ ಭಾರತಕ್ಕೆ ಕೋವಿಡ್ ವ್ಯಾಕ್ಸಿನ್

ಕಮಲಾ ಹ್ಯಾರಿಸ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಜಾಗತಿಕ ಲಸಿಕೆ ಹಂಚಿಕೆಯ ಯುಎಸ್ ಸ್ಟ್ರಾಟಜಿ ಭಾಗವಾಗಿ ಭಾರತಕ್ಕೆ ಲಸಿಕೆ ಸರಬರಾಜು ಮಾಡುವ ಭರವಸೆಯನ್ನು ನಾನು ಶ್ಲಾಘಿಸಿದ್ದೇನೆ ಎಂದು ಪಿಎಂ ಮೋದಿ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್​ ಜೊತೆ ಮೋದಿ ಮಾತುಕತೆ
ಕಮಲಾ ಹ್ಯಾರಿಸ್​ ಜೊತೆ ಮೋದಿ ಮಾತುಕತೆ
author img

By

Published : Jun 4, 2021, 6:12 AM IST

Updated : Jun 4, 2021, 6:21 AM IST

ನವದೆಹಲಿ: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಡನೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ತಮ್ಮ ಮೊದಲ ಹಂತದ 2.5 ಕೋಟಿ ​ಡೋಸ್ ಕೋವಿಡ್ ವ್ಯಾಕ್ಸಿನ್​ ಪೂರೈಸುವ ಕಾರ್ಯವನ್ನು​ ಮೋದಿ ಪ್ರಶಂಸಿಸಿರುವುದಾಗಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಜಾಗತಿಕ ಲಸಿಕೆ ಹಂಚಿಕೆಯ ಯುಎಸ್ ಸ್ಟ್ರಾಟಜಿ ಭಾಗವಾಗಿ ಭಾರತಕ್ಕೆ ಲಸಿಕೆ ಸರಬರಾಜು ಮಾಡುವ ಭರವಸೆಯನ್ನು ನಾನು ಶ್ಲಾಘಿಸಿದ್ದೇನೆ ಎಂದು ಪಿಎಂ ಮೋದಿ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಅವರೊಡನೆ ಮಾತನಾಡಿದ್ದೇನೆ. ಅಮೆರಿಕ ಜಾಗತಿಕ ಲಸಿಕೆ ಹಂಚಿಕೆಯ ಭಾಗವಾಗಿ ಭಾರತಕ್ಕೆ ಕೋವಿಡ್​ ಲಸಿಕೆ ಸರಬರಾಜು ಮಾಡುವ ಭರವಸೆಯನ್ನು ನಾನು ಶ್ಲಾಘಿಸುತ್ತೇನೆ. ಜೊತೆ ಯುಎಸ್ ಸರ್ಕಾರ ಮತ್ತು ಭಾರತೀಯ ವಲಸೆಗಾರರ ​​ಎಲ್ಲಾ ಬೆಂಬಲ ಮತ್ತು ಒಗ್ಗಟ್ಟಿಗೆ ಧನ್ಯವಾದ ಅರ್ಪಿಸಿದ್ದೇನೆ" ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ನರೇಂದ್ರ ಮೋದಿ ಟ್ವೀಟ್​
ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

ಭಾರತ ಮತ್ತು ಅಮೆರಿಕ ನಡುವಿನ ಲಸಿಕೆ ತಯಾರಿಕೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳು ಮತ್ತು ಕೋವಿಡ್ ನಂತರದ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಚೇತರಿಕೆಗೆ ನಮ್ಮ ಸಹಭಾಗಿತ್ವದ ಬಗ್ಗೆಯೂ ನಾವು ಚರ್ಚಿಸಿದ್ದೇವೆ" ಎಂದು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಅಮೆರಿಕಾದ ಮೊದಲ ಹಂಚಿಕೆಯಲ್ಲಿ ವಿಶ್ವದ ನಾನಾ ರಾಷ್ಟ್ರಗಳಿಗೆ 25 ಮಿಲಿಯನ್ ಡೋಸ್​ ಕೋವಿಡ್ ವ್ಯಾಕ್ಸಿನ್ ನೀಡಲು ಯೋಜನೆ ರೂಪಿಸಿದೆ. ಅದರಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ 7 ಮಿಲಿಯನ್​ ವ್ಯಾಕ್ಸಿನ್ ಡೋಸ್​ ಪೂರೈಸಲಿದೆ. ಜೂನ್ ಅಂತ್ಯದ ವೇಳೆ ಸುಮಾರು 80 ಮಿಲಿಯನ್ ಡೋಸ್ ಅನ್ನು ವಿಶ್ವದಾದ್ಯಂತ ಪೂರೈಸುವ ಗುರಿಯನ್ನು ಬೈಡನ್​-ಹ್ಯಾರಿಸ್​ ಆಡಳಿತ ಹೊಂದಿದೆ.

ಇದನ್ನು ಓದಿ:CBSE: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

Last Updated : Jun 4, 2021, 6:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.